HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಗೆ ರಾಷ್ಟ್ರೀಯ ಮೌಲ್ಯ ಮಾಪನಾ ಮಂಡಳಿ ಮಾನ್ಯತೆ.

ಧರ್ಮಸ್ಥಳ: ಉಡುಪಿ ಬಳಿ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಗೆ ನವದೆಹಲಿಯಲ್ಲಿರುವ ರಾಷ್ಟ್ರೀಯ ಮೌಲ್ಯ ಮಾಪನಾ ಮಂಡಳಿಯು ಆಯುಷ್ ಕಾರ್ಯಕ್ರಮಗಳನ್ನು, ಉತ್ತಮ ಗುಣಮಟ್ಟದ ಸೇವೆಯೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದಕ್ಕಾಗಿ ಮಾನ್ಯತಾ ಪ್ರಮಾಣ ಪತ್ರ ನೀಡಿ ಗೌರವಿಸಿದೆ.
ವಿಶೇಷವಾಗಿ ಆಸ್ಪತ್ರೆಯಲ್ಲಿ ಕಾಯಚಿಕಿತ್ಸಾ, ಪಂಚಕರ್ಮ, ರೋಗ ಏವಂ ವಿಕೃತಿ ವಿಜ್ಞಾನ, ತ್ವಕ್ ವಿಕಾರ, ಶಾಲಾಕ್ಯ ಚಿಕಿತ್ಸಾ, ಶಲ್ಯತಂತ್ರ, ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸಾ, ಕೌಮಾರ ಭೃತ್ಯ, ಸ್ವಸ್ಥವೃತ್ಥ, ರಸಾಯನ, ವಾಜೀಕರಣ ಮತ್ತು ಯೋಗ – ವಿಭಾಗಗಳಲ್ಲಿ ನೀಡುತ್ತಿರುವ ಉತ್ತಮ ಗುಣಮಟ್ಟದ ಶುಶ್ರೂಷೆಗಾಗಿ ಮಾನ್ಯತಾ ಪ್ರಮಾಣ ಪತ್ರ ನೀಡಿದ್ದು, 22-04-2018 ರಿಂದ 21-04-2021 ರ ವರೆಗೆ ಚಾಲ್ತಿಯಲ್ಲಿರುತ್ತದೆ.
ಆಸ್ಪತ್ರೆಗಳು ಹಾಗೂ ಆರೋಗ್ಯ ರಕ್ಷಣಾ ಸೇವೆಗಾಗಿರುವ ರಾಷ್ಟ್ರೀಯ ಮೌಲ್ಯ ಮಾಪನಾ ಮಂಡಳಿಯ ಸದಸ್ಯರು ಹಲವು ಬಾರಿ ಆಸ್ಪತ್ರೆಗೆ ಭೇಟಿ ನೀಡಿ, ವಿವಿಧ ವಿಭಾಗಗಳಲ್ಲಿ ನೀಡುತ್ತಿರುವ ಚಿಕಿತ್ಸಾ ವಿಧಾನಗಳ ಗುಣಮಟ್ಟವನ್ನು ಪರಿಶೀಲಿಸಿ ಈ ಮಾನ್ಯತಾ ಪ್ರಮಾಣ ಪತ್ರ ನೀಡಲಾಗಿದೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ|ಮಮತಾ.ಕೆ.ವಿ, ಮತ್ತು ಮ್ಯಾನೇಜರ್ ಸಿ. ಶ್ರೀನಿವಾಸ ಹೆಗ್ಡೆ ಜೂ.12 ರಂದು ಧರ್ಮಸ್ಥಳದಲ್ಲಿ ಮಾನ್ಯತಾ ಪ್ರಮಾಣ ಪತ್ರವನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅರ್ಪಿಸಿದರು.
ಆಯುರ್ವೇದ ಆಸ್ಪತ್ರೆಯಲ್ಲಿ ನೀಡುತ್ತಿರುವ ಉತ್ತಮ ಸೇವೆ ಬಗ್ಯೆ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರನ್ನು ಹೆಗ್ಗಡೆಯವರು ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.