ಚಿಬಿದ್ರೆ ಸಾರ್ವಜನಿಕ ಕೆರೆ ಕುಸಿತ: ಕತ್ತರಿಗುಡ್ಡೆ ರಸ್ತೆ ಅಪಾಯದಲ್ಲಿ.

ಚಿಬಿದ್ರೆ : ಚಾರ್ಮಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕತ್ತರಿಗುಡ್ಡೆಗೆ ಹೋಗುವ ರಸ್ತೆ ಬದಿಯಲ್ಲಿ ಕಳೆದ ವರ್ಷ ನಿರ್ಮಿಸಲಾದ ಸಾರ್ವಜನಿಕ ಕೆರೆಯ  ತಡೆಗೋಡೆಯು ಎರುಡ ದಿನಗಳಿಂದ  ನಿರಂತರವಾಗಿ ಸುರಿಯುತ್ತಿರುವ  ಮಳೆಗೆ ಕುಸಿದಿದ್ದು, ಕತ್ತರಿಗುಡ್ಡೆ ಪ್ರದೇಶಕ್ಕೆ ಹೋಗುವ ರಸ್ತೆ ಕುಸಿಯುವ ಭೀತಿ ಎದುರಾಗಿದೆ.
ಕತ್ತರಿಗುಡ್ಡೆಗೆ ಹೋಗುವ ರಸ್ತೆ ಬದಿಯಲ್ಲಿ ಸಾರ್ವಜನಿಕ ಕೆರೆಯೊಂದಿದ್ದು, ಇದನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ. ಎಂ.ಆರ್ ರವಿ ಅವರ ಆಸಕ್ತಿಯಂತೆ ಕಳೆದ ಒಂದು ವರ್ಷದ ಹಿಂದೆ ಜಿ.ಪಂ ಅನುದಾನದಲ್ಲಿ ದುರಸ್ತಿಗೊಳಿಸಲಾಗಿತ್ತು. ಮುಚ್ಚಿ ಹೋಗಿದ್ದ ಕರೆಯ ಸಂಪೂರ್ಣ ಹೂಳೆತ್ತಿ ಕರೆಯನ್ನು ಪುನರ್ಜಿವನಗೊಳಿಸುವ ಕಾರ್ಯ ನಡೆದಿತ್ತು. ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತು, ಜಿ.ಪಂ ಸದಸ್ಯ ನಮಿತಾ, ತಾ.ಪಂ ಸದಸ್ಯ ಕೊರಗಪ್ಪ ಗೌಡ, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಪೂರ್ಣ ಸಹಕಾರ ನೀಡಿದ್ದರು. ಸ್ವತಃ ಎಂ.ಆರ್ ರವಿಯವರೇ ಸ್ಥಳಕ್ಕೆ ಭೇಟಿ ನೀಡಿ ಇದಕ್ಕೆ ಉದ್ಯೋಗ ಖಾತರಿಯಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು.
ಅವರ ಭರವಸೆಯಂತೆ ಪಂಚಾಯತು ಮುತುವರ್ಜಿಯಿಂದ ತಡೆಗೋಡೆ ನಿರ್ಮಿಸಲು ಕೆರೆ ಸುತ್ತ ಕಾಂಕ್ರಿಟ್ ಕಾಮಗಾರಿ ಆರಂಭವಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ಹಾದು ಹೋಗುವ ಬಳಿಯಲ್ಲಿಯೇ ಕೆರೆಯಿದ್ದು, ಮಳೆಯಿಂದಾಗಿ ಕೆರೆಯ ಬದಿ ಕುಸಿತಕ್ಕೊಳಗಾಗಿ ರಸ್ತೆಯ ಅಂಚಿನವರೆಗೆ ತಲುಪಿದ್ದು, ರಸ್ತೆಗೆ ಅಪಾಯ ತಂದೊಡ್ಡಿದೆ. ನಿರಂತರ ಮಳೆ ಸುರಿದಲ್ಲಿ ರಸ್ತೆಯೂ ಕೆರೆ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಕೆರೆ ಬಳಿ ಬೋರೆವೆ ಇದ್ದು, ಮಣ್ಣು ಕುಸಿತದಿಂದ ಈಗಾಗಲೇ ಹಾನಿಗೊಳಗಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.