ಮನುಷ್ಯನ ಉತ್ತಮ ಬದುಕಿಗೆ ಶಿಕ್ಷಣ – ಆರೋಗ್ಯ ಮುಖ್ಯ : ಡಾ. ಯಶೋವರ್ಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಯೋಧರಿಗೆ ಸನ್ಮಾನ

ಪ್ರತಿಭಾ ಪುರಸ್ಕಾರ-ಪ್ರೋತ್ಸಾಹಧನ ವಿತರಣೆ-ಸನ್ಮಾನ
ಹಿಂದೂ ಅಲಡ್ಕ ಕ್ಷೇತ್ರ ವಾಟ್ಸಫ್ ಗ್ರೂಪ್‌ನಿಂದ ವಿಕಲಚೇತನ ವಿದ್ಯಾರ್ಥಿಗಳಾದ ಪ್ರಜ್ವಲ್ ನಿಟ್ಟೆ, ಭಾಗ್ಯಶ್ರೀ ಬಂಟ್ವಾಳ, ಪ್ರತೀಕ್ಷಾ ಕಳಿಯ, ಸಂಧ್ಯಾ ಶಿರ್ತಾಡಿ, ಪ್ರಣಮ್ಯ ಕಾರ್ಕಳ ಇವರಿಗೆ ತಲಾ 10 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಳದಂಗಡಿ ಪ್ರೌಢ ಶಾಲೆಗೆ ಗ್ರೈಂಡರ್, ಗುಂಡೂರಿ ಶ್ರೀಗುರು ಚೈತನ್ಯ ವೃದ್ಧಾಶ್ರಮಕ್ಕೆ ವಸ್ತ್ರದಾನ, ವೇದವ್ಯಾಸ ಶಿಶು ಮಂದಿರಕ್ಕೆ ರೂ.11 ಸಾವಿರ ಚೆಕ್‌ನ್ನು ಹಸ್ತಾಂತರಿಸಲಾಯಿತು. ಚಿಗುರು ಪತ್ರಿಕೆ ಸಂಪಾದಕ ನೂರಲ್‌ಬೆಟ್ಟು ಸಂಪತ್‌ಜೈನ್ ಹೊರತಂದ ಮಾಹಿತಿ ಕೈಪಿಡಿ ಭಾಗ-2 ನ್ನು ಬಿಡುಗಡೆಗೊಳಿಸಲಾಯಿತು.
ದೇಶದ ಗಡಿಯನ್ನು ಕಾಯ್ದು, ನಮಗೆ ರಕ್ಷಣೆ ನೀಡುತ್ತಿರುವ ಸೇವೆಯಲ್ಲಿರುವ ಯೋಧರನ್ನು ಗೌರವಿಸುವುದು ಎಲ್ಲಿಯೂ ಕಂಡುಬರುತ್ತಿಲ್ಲ. ಆದರೆ ಅಳದಂಗಡಿ ದೈವಸ್ಥಾನದ ವತಿಯಿಂದ ಮೂರು ಮಂದಿ ಯೋಧರನ್ನು ಗೌರವಿಸುವ ಮೂಲಕ ದೇವ ಭಕ್ತಿ ಜೊತೆ ದೇಶಭಕ್ತಿಯನ್ನು ಮೆರೆಯಲಾಯಿತು. ಈ ಕ್ಷಣ ಎಲ್ಲರೂ ಬಾವುಕರಾದರು. ಅಳದಂಗಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಆರ್ ಶೆಟ್ಟಿ, ದೈವಸ್ಥಾನಕ್ಕೆ ವಿದ್ಯುತ್ ಚಾಲಿತ ವಾಲಗ ನೀಡಿದ ನರಸಿಂಹ ಪ್ರಭು ಇವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪ್ರಥಮ ಸ್ಥಾನಿ ರಚನಾ ಮಡಂತ್ಯಾರು ಹಾಗೂ ಸಾಧಕ ವಿದ್ಯಾರ್ಥಿಗಳಾದ ಅನುಜ್ಞಾ, ರಕ್ಷಿತಾ, ದೀಕ್ಷಿತಾ, ವರ್ಷಿಣಿ, ನಿರೀಕ್ಷ ಇವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ಅಳದಂಗಡಿ: 14 ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಜೂ.3 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಯಶೋವರ್ಮ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮನುಷ್ಯನ ಉತ್ತಮ ಬದುಕಿಗೆ ಶಿಕ್ಷಣ ಮತ್ತು ಆರೋಗ್ಯ ಅತೀ ಮುಖ್ಯವಾಗಿದೆ. ಸೈನಿಕರು ದೇಶದ ಗಡಿ ಕಾಯುವ ಮೂಲಕ ಜನರಿಗೆ ಭದ್ರತೆ ನೀಡಿದರೆ, ದೇಶದ ಒಳಗಿರುವ ನಮ್ಮ ಚಟುವಟಿಕೆಗಳು ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಪೂರಕವಾಗಿರಬೇಕು. ಇದು ನಾವು ದೇಶ ಸೇವೆ ಮಾಡುವ ಸೈನಿಕರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು ಅದನ್ನು ಕಠಿಣ ಪರಿಶ್ರಮದಿಂದ ಸಾಧಿಸಿದಾಗ ಜೀವನದಲ್ಲಿ ಉನ್ನತಿಯನ್ನು ಪಡೆಯಬಹುದು ಎಂದು ತಿಳಿಸಿದರು. ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಾದ ಸತೀಶ್‌ದಾಸ್ ಪುತ್ತೂರು, ವಿಕ್ರಮ್ ಸುವರ್ಣ ಗೇರುಕಟ್ಟೆ, ಶಂಕರ ಸಫಲ್ಯ ನಡಕರ ಇವರು ಮಾತನಾಡಿ ಮಕ್ಕಳನ್ನು ಭಾರತದ ಸೈನ್ಯಕ್ಕೆ ಸೇರಿಸಿ ದೇಶ ಸೇವೆಯನ್ನು ಮಾಡುವ ಅವಕಾಶವನ್ನು ಪೋಷಕರು ಕಲ್ಪಿಸಿಕೊಡಬೇಕು, ಕಲಿತ ವಿದ್ಯೆ ದೇಶದ ಭದ್ರತೆಗೆ, ಅಭಿವೃದ್ಧಿಗೆ ವಿನಿಯೋಗವಾಗಲಿ ಎಂದು ಹಾರೈಸಿದರು.
ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಸ್ವಾಗತಿಸಿ, 350 ವಿದ್ಯಾರ್ಥಿಗಳ ಪ್ರೋತ್ಸಾಹದೊಂದಿಗೆ ಆರಂಭವಾದ ಈ ಕಾರ್ಯಕ್ರಮ ಇಂದು ಆರು ಸಾವಿರ ವಿದ್ಯಾರ್ಥಿಗಳವರೆಗೆ ತಲುಪಿದೆ. ಪ್ರತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಕರೆಸಿ ಗುರುತಿಸುವ ಮೂಲಕ ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸವೂ ಇಲ್ಲಿ ನಡೆಯುತ್ತಿದೆ ಎಂದರು. ಮಂಗಳೂರು ಕೆ.ಎಂ.ಸಿಯ ಹೃದ್ರೋಗ ತಜ್ಞ ಡಾ. ಮನೀಷ್ ರೈ ಹೃದ್ರೋಗದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಳದಂಗಡಿ ಅರಮನೆಯ ಸರಸ್ವತಿ ಅಮ್ಮ, ತಾ.ಪಂ. ಸದಸ್ಯರಾದ ಸುಧೀರ್ ಆರ್.ಸುವರ್ಣ, ವಿನುಷಾ ಪ್ರಕಾಶ್, ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷೆ ಯಶೋಧ ಉಪಸ್ಥಿತರಿದ್ದರು. ಶಿಕ್ಷಕ ಅಜಿತ್‌ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್, ಪೂರ್ಣೇಶ್, ಮೋಹನ್‌ದಾಸ್, ವಿಜಯಕುಮಾರ್ ಜೈನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿರ್ಲಾಲು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಹೆಚ್. ನಿತ್ಯಾನಂದ ಶೆಟ್ಟಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.