ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪರವಾಗಿ ಸಂಸದ ನಳಿನ್‌ಕುಮಾರ್ ಮತಯಾಚನೆ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕ್ಯಾ| ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರ್ ಮಂಜುನಾಥ್ ಪರವಾಗಿ ಗೇರುಕಟ್ಟೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಹರೀಶ್ ಪೂಂಜರವರು ಮತಯಾಚನೆ ನಡೆಸಿದರು.
ಬಿಜೆಪಿ ವಿಭಾಗ ಪ್ರಭಾರಿ ಪ್ರತಾಪಸಿಂಹ ನಾಯಕ್, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್, ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಮಂಡಲ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ಬಿ.ಎಸ್, ಕಳಿಯ ಸೇ.ಸ. ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ನಂದಕುಮಾರ್ ಪುಂಜಾಲಕಟ್ಟೆ, ಕುವೆಟ್ಟು ಮಹಾ ಶಕ್ತಿಕೇಂದ್ರ ಅಧ್ಯಕ್ಷ ಪದ್ಮನಾಭ ಅರ್ಕಜೆ, ಕಳಿಯ ಶಕ್ತಿಕೇಂದ್ರ ಪ್ರಮುಖ್ ರಾಜೇಶ್ ಪೆಂರ್ಬುಡ, ಕಳಿಯ ಪಂಚಾಯತ್ ಸಮಿತಿ ಅಧ್ಯಕ್ಷ ವಿಜಯ ಗೌಡ, ಕಾರ್ಯದರ್ಶಿ ಶೇಖರ ನಾಯ್ಕ, ಕಳಿಯ ಪಂಚಾಯತ್ ಸದಸ್ಯರಾದ ದಿವಾಕರ ಎಂ, ಸುಧಾಕರ ಮಜಲು, ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.