ಬೆಳ್ತಂಗಡಿ ನವ ನಿರ್ಮಾಣವಾಗಬೇಕು: ಹರೀಶ್ ಪೂಂಜ

Advt_NewsUnder_1
Advt_NewsUnder_1

ಗೇರುಕಟ್ಟೆ: ಭಾ.ಜ.ಪ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಅತ್ಯಧಿಕ ಬಹುಮತದಿಂದ ಆಯ್ಕೆಯಾದ ಹರೀಶ್ ಪೂಂಜ ರವರಿಗೆ ಅಭಿನಂದನಾ ಸಭೆ ಮತ್ತು ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯ ಕ್ರಮವು ಕಳಿಯ ಮತ್ತು ನ್ಯಾಯತರ್ಪು ಗ್ರಾಮ ಸಮಿತಿ ವತಿಯಿಂದ ಜೂ.೫ ರಂದು ಗೇರುಕಟ್ಟೆ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಅಭಿನಂದಿಸಿ ನೂತನ ಶಾಸಕ ಹರೀಶ್ ಪೂಂಜರವರು ಮಾತನಾಡುತ್ತಾ, ಹಿರಿಯ ಕಾರ್ಯಕರ್ತರು ಭಾರತೀಯ ಜನತಾ ಪಕ್ಷವನ್ನು ಬೆಳೆಸುವಲ್ಲಿ ತುಂಬಾ ಶ್ರಮಪಟ್ಟಿದ್ದಾರೆ. ಅವರನ್ನು ಮೊದಲು ಗೌರವಿಸಬೇಕು ಎಂದರು. ಇವತ್ತು ಬೆಳ್ತಂಗಡಿಯಲ್ಲಿ ನಾನು ಮಾತ್ರ ಶಾಸಕನಲ್ಲ. ನನ್ನ ಗೆಲುವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರು ಶಾಸಕರಾಗಿದ್ದಾರೆ. ನಾವು ಒಟ್ಟು ಸೇರಿ ಕಳಿಯ ನ್ಯಾಯತರ್ಪು ಗ್ರಾಮದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿಕೊಂಡು ಹೋಗಬೇಕು. ಈ ಮೂಲಕ ಬೆಳ್ತಂಗಡಿಯನ್ನು ನವ ನಿರ್ಮಾಣ ಮಾಡಬೇಕು ಎಂದರು.
ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು ಮತ್ತು ಕಳಿಯ ಸೇ.ಸ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ಮಾತನಾಡಿ, ಊರಿನ ಅಭಿವೃದ್ಧಿಗೆ ಶಾಸಕರ ಜೊತೆ ನಾವು ಕೈ ಜೋಡಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಕಳಿಯ, ನ್ಯಾಯತರ್ಪು ಗ್ರಾಮಗಳ ಅಧ್ಯಕ್ಷ ವಿಜಯ ಗೌಡ ಮಾತನಾಡಿ, ಈ ಭಾಗದ ರಸ್ತೆ ಸುಮಾರು ಸಮಯಗಳಿಂದ ಡಾಮರೀಕರಣವಾಗದೇ ದುಸ್ಥಿತಿಯಲ್ಲಿದೆ. ಇದನ್ನು ಶಾಸಕರು ಆದಷ್ಟು ಬೇಗ ಕೆಲಸ ಕಾರ್ಯಗಳನ್ನು ಮಾಡಬೇಕು. ಈ ಭಾಗದ ಅಭಿವೃಧ್ಧಿಗೆ ನಿಮ್ಮ ಜೊತೆ ನಾವಿದ್ದೇವೆ ಎಂದರು.
ಕುವೆಟ್ಟು ಕ್ಷೇತ್ರದ ಜಿ.ಪಂ.ಸದಸ್ಯೆ ಮಮತಾ.ಎಂ ಶೆಟ್ಟಿ, ಪಂಚಾಯತ್ ಸದಸ್ಯರಾದ ದಿವಾಕರ, ಸುಧಾಕರ ಮಜಲು, ನಳಿನಾಕ್ಷಿ, ವಿಜಯ, ಹರಿಪ್ರಸಾದ್, ಬೂತ್ ಅಧ್ಯಕ್ಷ ರತ್ನಾಕರ, ದಿನೇಶ್ ಪೂಜಾರಿ, ಲೋಕೇಶ್, ಪ್ರಕಾಶ್ ಮೆರ್ಲ, ಸೋಮಪ್ಪ, ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ ಪೆಂರ್ಬುಡ ಸ್ವಾಗತಿಸಿ, ಗ್ರಾಮ ಸಮಿತಿಯ ಕಾರ್ಯದರ್ಶಿ ಶೇಖರ್ ನಾಕ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.