ವಿಧಾನ ಪರಿಷತ್ ಸದಸ್ಯರಾಗಿ ಹರೀಶ್ ಕುಮಾರ್ ಅವಿರೋಧ ಆಯ್ಕೆ::ಪುಂಜಾಲಕಟ್ಟೆಯಿಂದ ಭಾರೀ ಮೆರವಣಿಗೆಯೊಂದಿಗೆ ಬೆಳ್ತಂಗಡಿಗೆ ಸ್ವಾಗತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1ಬೆಳ್ತಂಗಡಿ: ಕಳೆದ 4 ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ, ನಾಯಕರಾಗಿ ಬೆಳೆದ ಕೆ ಹರೀಶ್ ಕುಮಾರ್ ಅವರು ಇದೀಗ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಮೊದಲ ಬಾರಿಗೆ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆ ಅವರನ್ನು ಜೂ. 5 ರಂದು ಪುಂಜಾಲಕಟ್ಟೆಯಿಂದ ಬಳ್ತಂಗಡಿವರಗೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳ ಭಾರೀ ಮೆರವಣಿಗೆಯೊಂದಿಗೆ ತಾಲೂಕಿಗೆ ಸ್ವಾಗತಿಸಲಾಯಿತು.
ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಬೇಕಾದ 11 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷದಿಂದ ಒಟ್ಟು 4 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಈ ಪೈಕಿ ಬೆಳ್ತಂಗಡಿ ತಾಲೂಕು ಕಿನಿಂಜೆ ಮನೆತನದ ಸುಪುತ್ರ, ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತ, ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಕೆ ಹರೀಶ್ ಕುಮಾರ್ ವಿರೋಧವಾಗಿ ಆಯ್ಕೆಯಾಗಿದ್ದರು. ಹರೀಶ್ ಕುಮಾರ್ ಅವರ ಆಯ್ಕೆ ಬೆಳ್ತಂಗಡಿ ತಾಲೂಕಿನಿಂದ ವಿಧಾನ ಪರಿಷತ್‌ಗೆ ಪ್ರಥಮ ವಾಗಿದ್ದು ಆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳು ಭಾರೀಈ ಸಂಭ್ರಮದಿಂದ ಅವರನ್ನು ಬರಮಾಡಿಕೊಂಡರು.
ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ ಮತ್ತು ಗ್ರಾಮೀಣ ಘಟಕದ ಶ್ರೀನಿವಾಸ ವಿ ಕಿಣಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಉಪಾಧ್ಯಕ್ಷ ಡಿ ಜಗದೀಶ್, ಜಿಲ್ಲಾ ಕಾಂಗ್ರೆಸ್‌ನ ಬಿ.ಎಮ್ ಹಮೀದ್, ಉದ್ಯಮಿ ಯು.ಎ ಹಮೀದ್, ಜಿ.ಪಂ ಹಾಲಿ ಸದಸ್ಯರುಗಳಾದ ಕೆ.ಕೆ ಶಾಹುಲ್ ಹಮೀದ್, ಪಿ ಧರಣೇಂದ್ರ ಕುಮಾರ್, ನಮಿತಾ, ಪ್ರಮುಖರಾದ ಚಂದನ್ ಪ್ರಸಾದ್ ಕಾಮತ್, ಫ್ರಾನ್ಸಿಸ್ ವಿ.ವಿ ಮಡಂತ್ಯಾರು, ಮೋಹನ್ ಕುಮಾರ್ ಕಲ್ಮಂಜ, ತನುಜಾ ಶೇಖರ್, ಶಾಳಿನಿ ವಿಜಯ ಕುಮಾರ್, ಚಂದ್ರಾವತಿ ಉಮೇಶ್ ಮುಂಡಾಜೆ, ಬಿ.ಕೆ ವಸಂತ, ಚಂದು ಎಲ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ರಮೇಶ್ ಕುಮಾರ್, ಗಣೇಶ್ ಕಣಾಲ್, ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ಹಾಜಿ ಉಮರ್ ಕುಂಞಿ ಮುಸ್ಲಿಯಾರ್, ಮನೋಹರ ಇಳಂತಿಲ, ಜನಾರ್ದನ ಬಂಗೇರ ಮೂಡಾಯಿಗುತ್ತು, ಮುಕುಂದ ಸುವರ್ಣ, ಚಾರ್ಮಾಡಿ ಹಸನಬ್ಬ,ಅಬ್ಬಾಸ್ ಬಸ್ತಿಕಾರ,ಅಬ್ದುಲ್ ಶುಕೂರ್, ಲಕ್ಷ್ಮಣ ಗೌಡ ಇರ್ತಿಲಾಲ್, ನಾರಾಯಣ ಗೌಡ ದೇವಸ್ಯ ಮುಂಡಾಜೆ,ಮೋಹನ್ ಶೆಟ್ಟಿಗಾರ್ ಉಜಿರೆ, ಮಹಾವೀರ ಜೈನ್ ಮಡಂತ್ಯಾರು, ತಾ.ಪಂ ಮಾಜಿ ಸದಸ್ಯ ವಿನ್ಸೆಂಟ್ ಟಿ ಡಿಸೋಜಾ, ಯೋಗೀಶ್ ಕುಮಾರ್ ನಡಕರ, ಜೆಸಿಂತಾ ಮೋನಿಸ್, ನಾಮದೇವ ರಾವ್ ಮುಂಡಾಜೆ, ಗುರುಪ್ರಸಾದ್ ಬಂಗಾಡಿ, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.