ಅಂಡಿಂಜೆ: ಗ್ರಾ.ಪಂ.ಉಪಚುನಾವಣೆಗೆ ಜಯಂತಿ ನೆಲ್ಲಿಂಗೇರಿ ನಾಮಪತ್ರ

ಬೆಳ್ತಂಗಡಿ : ಅಂಡಿಂಜೆ ಗ್ರಾಮ ಪಂಚಾಯತ್ ನ ಅಂಡಿಂಜೆ 2 ನೇ ವಾರ್ಡ್ ನ ಒಂದು ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸಿಪಿಐ(ಎಂ) ಪಕ್ಷದ ತಾಲೂಕು ಸಮಿತಿ ಸದಸ್ಯೆ , ಸಿಐಟಿಯು ನಾಯಕಿ , ವೇಣೂರು ವಲಯ ಬೀಡಿ ಕೆಲಸಗಾರರ ಸಂಘದ ಕೋಶಾಧಿಕಾರಿಯಾಗಿರುವ ಜಯಂತಿ ನೆಲ್ಲಿಂಗೇರಿಯವರು ಇಂದು (ಜೂ.1)  ಅಂಡಿಂಜೆ ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾರಾವಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ , ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಆನಂದ ನೆಲ್ಲಿಂಗೇರಿ , ಕಾಂಗ್ರೆಸ್ ಮುಖಂಡರುಗಳಾದ ರಾಜೇಶ್ ಗಾಂಧಿನಗರ , ಅಶೋಕ್ ಭಂಡಾರಿ , ಲಕ್ಷ್ಮಣ ಪೂಜಾರಿ , ಲಕ್ಷ್ಮಣ ಭಂಡಾರಿ , ಶಶಿಧರ ಗೌಡ , ಬಾಲಕೃಷ್ಣ ಗೌಡ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರುಗಳಾದ ವಸಂತ ನಡ , ರೋಹಿಣಿ ಪೆರಾಡಿ , ಶೇಖರ್ ಲಾಯಿಲ , ಎಸ್ಎಫ್ಐ ನಾಯಕಿ ಸುಕನ್ಯಾ ನೆಲ್ಲಿಂಗೇರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.