ಕುಖ್ಯಾತ ದರೋಡೆಕೋರರ ಮೇಲೆ ಬಂಟ್ವಾಳ ಪೊಲೀಸರಿಂದ ಗುಂಡಿನ ದಾಳಿ.

ಬೆಳ್ತಂಗಡಿ:  ದರೋಡೆ ಹಾಗೂ ದನ  ಕಳ್ಳತನಕ್ಕೆ ಯತ್ನಿಸುತ್ತಿದ್ದ ಕುಖ್ಯಾತ ದರೋಡೆಕೋರರ ಮೇಲೆ  ಗುಂಡಿನ ದಾಳಿ ನಡೆಸಿ, ಮೂವರು  ಆರೋಪಿಗಳನ್ನು ಬಂಧಿಸುವ ಕಾರ್ಯದಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಮುಕ್ಸಿನ್( 23.ವ) ಸುರತ್ಕಲ್ , ಮೊಹಮ್ಮದ್ ಇರ್ಷಾದ್ (29.ವ) ಕುಪ್ಪೆಪದವು ಮಂಗಳೂರು, ಸದ್ದಂ ಮಾರಿಪಳ್ಳ  ಎಂದು ಗುರುತಿಸಲಾಗಿದೆ.

ಮೇ.31 ರಂದು ಬೆಳ್ತಂಗಡಿ ಗೇರುಕಟ್ಟೆ ನಿವಾಸಿ ಕರಿಂ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಫೋನ್ ಕರೆಮಾಡಿ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಸುಮಾರು 4 ರಿಂದ 5 ಜನ ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದು ಕೊಂಡು ಓಡಾಡುತ್ತಿದ್ದು, ನಾವು ಕೂಗಿ ಕೊಂಡಾಗ ಕಾರ್ ನಲ್ಲಿ  ಗುರುವಾಯನ ಕೆರೆ ಕಡೆಗೆ ಓಡಿ ಹೊಗುತ್ತಿದ್ದಾರೆ ಎಂದು ತಿಳಿಸಿದರು. ಆ ಕೂಡಲೇ ಶೀಘ್ರ ಕಾರ್ಯಾಚರಣೆ ನಡೆಸಿದ ಪೋಲೀಸರು ಗುರುವಾಯನಕೆರೆ ಚೆಕ್ ಪೊಸ್ಟ್ ನಲ್ಲಿ ಕೆಂಪುಬಣ್ಣದ ಸ್ವಿಫ್ಟ್ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಕಾರನ್ನು ನಿಲ್ಲಿಸದೆ ಬಿ.ಸಿ ರೋಡ್ ಕಡೆ ವೇಗವಾಗಿ ಚಲಾಯಿಸುತ್ತಿದ್ದಾರೆ ಎಂದು ವೈರ್ ಲೆಸ್ ಮೂಲಕ ತಿಳಿಸಿದ ಮೇರೆಗೆ ಕಾರ್ಯ ಪ್ರವ್ರತ್ತರಾದ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್, ಮಣಿಹಳ್ಳದ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಕೊಂಡು ವಾಹನ ತಪಾಸಣೆ ನಡೆಸುತ್ತಿರುವಾಗ ಪುಂಜಾಲಕಟ್ಟೆ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ಕೂಡ ನಿಲ್ಲಿಸದೆ ಮುಂದೆ ಬರುತ್ತಿದ್ದಾರೆ ಎಂದು ವೈರ್ ಲೆಸ್ ನಲ್ಲಿ ತಿಳಿಸುತ್ತಾರೆ.

ನಂತರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಮದ್ವ ಚೆಕ್ ಪಾಯಿಂಟ್ ನಲ್ಲಿ ಇದ್ದ ಸಿಬ್ಬಂದಿಯವರಾದ ಪಿಸಿ ಆದರ್ಶ ಮತ್ತು ಹೊಮ್ ಗಾರ್ಡ್ ಭಾಸ್ಕರ್ ರವರು ಕಾರನ್ನು ನಿಲ್ಲಿಸಿ ಎಂದು ಹೇಳಿದಾಗ ಕಾರನ್ನು ನಿಲ್ಲಿಸದೆ ಚಲಾಯಿಸಿಕೊಂಡು ಬಿ.ಸಿ ರೊಡ್ ಕಡೆ ಬರುತ್ತಿದ್ದು, ನಾವು ಹಿಂಬಾಲಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದ ಮೇರೆಗೆ ಮಣಿಹಳ್ಳ ಜಂಕ್ಷನ್ ನಲ್ಲಿ ಇಲಾಖಾ ವಾಹನವನ್ನು ರಸ್ತೆಗೆ ಅಡ್ಡ ಇಟ್ಟು ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕೆಂಪು ಬಣ್ಣದ ಸ್ವಿಫ್ಟ್ ಕಾರನ್ನು ದೂರದಲ್ಲಿರುವಾಗಲೆ ನಿಲ್ಲಿಸಲು ಸೂಚನೆ ನೀಡಿದಾಗ ವಾಹನವನ್ನು ಅತಿ ವೇಗದಿಂದ ಚಲಾಯಿಸಿಕೊಂಡು ಬಂದು ಪೊಲೀಸ್ ಸಿಬ್ಬಂದಿಯವರ ಮೇಲೆ ರಾಡ್ ಮತ್ತು ತಲವಾರಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದಾಗ ತಮ್ಮ ಮತ್ತು ಸಿಬ್ಬಂದಿಯವರ ರಕ್ಷಣೆಗಾಗಿ ಬಂಟ್ವಾಳ ನಗರ ಠಾಣೆ ಪಿ.ಎಸ್.ಐ ಚಂದ್ರಶೇಖರ ರವರು ತಮ್ಮ ಕೈಯಲ್ಲಿದ್ದ ಪಂಪ್ ಆಕ್ಷನ್ ವೆಪನ್ ನಿಂದ ಕಾರಿನ ಮೇಲೆ ಮತ್ತು ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ರವರು ತಮ್ಮ ಪಿಸ್ತೂಲ್ ನಿಂದ ಕಾರಿನ ಮೇಲೆ ಗುಂಡು ಹಾರಿಸಿದರು.

ನಂತರ ದರೋಡೆಕೋರರು ಕಾರನ್ನು ನಾವುರು ಕಡೆಗೆ ತಿರುಗಿಸಲು ಯತ್ನಿಸಿದಾಗ ಕಾರ್ ಚರಂಡಿಯಲ್ಲಿ ಸಿಲುಕಿಕೊಂಡಿದ್ದು ,ತಕ್ಷಣ ಹಿಂಬದಿಯಲ್ಲಿ ಕುಳಿತಿದ್ದ  ಇಬ್ಬರು ಓಡಿಹೋಗಿರುತ್ತಾರೆ.   ಸಿಬ್ಬಂದಿಯವರು ಕಾರನ್ನು ಸುತ್ತುವರೆದು ಕಾರಿನಲ್ಲಿದ್ದ ಮೂರು ಜನರನ್ನು ಹಿಡಿದು ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಎರಡು ತಲವಾರು, ಒಂದು ರಾಡ್, ಮೆಣಸಿನಪುಡಿ, ಮಂಕಿ ಕ್ಯಾಪ್, ಹಗ್ಗಗಳಿದ್ದು, ವಿಚಾರಿಸಿದಾಗ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಡಾಕಾಯತಿ ಮಾಡಲು ಮತ್ತು ದಾರಿಯಲ್ಲಿ ಸಿಕ್ಕಿದ ಯಾವುದಾದರೂ ಮನೆಯಲ್ಲಿ ದನ ಕಳ್ಳತನ ಮಾಡಲು  ಹೊರಟಿರುವುದಾಗಿ ತಿಳಿಸಿರುತ್ತಾರೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ ಸಂಖ್ಯೆ 94/18 ಕಲಂ 307,353,399,402 IPC ರಂತೆ ಪ್ರಕರಣ ದಾಖಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಅಕ್ಷಯ್ ಎಮ್ ಹಾಕೆ ಪ್ರೊಬೇಷನರಿ IPS, ಬಂಟ್ವಾಳ ಗ್ರಾಮಾಂತರ ಠಾಣೆ ಪಿ.ಎಸ್.ಐ ಪ್ರಸನ್ನ, ಬಂಟ್ವಾಳ ನಗರ ಪಿ.ಎಸ್.ಐ ಚಂದ್ರಶೇಖರ, ಸಿಬ್ಬಂದಿಯವರಾದ ನಜೀರ್, ಸಂಪತ್, ಆದರ್ಶ, ಭಾಸ್ಕರ್ ರವರಯ ಪಾಲ್ಗೊಂಡಿದ್ದರು.

ಈ ರೀತಿ ಕಾನೂನು ಬಾಹಿರ ಕೃತ್ಯವೆಸಗುವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಪೊಲೀಸ್ ಅಧೀಕ್ಷಕರಾದ ರವಿಕಾಂತೇ ಗೌಡ ಐ.ಪಿ.ಎಸ್ ರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.