ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಹರೀಶ್ ಕುಮಾರ್ ಹೆಸರು ಪ್ರಕಟ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 11 ಸ್ಥಾನಗಳಿಗೆ ನಡೆಯುವ  ಚುನಾವಣೆಗೆ ಕಾಂಗ್ರೆಸ್ ಪಕ್ಷದ ನಾಲ್ಕು ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದ್ದು, ಈ ಪೈಕಿ ದ. ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕೆ ಹರೀಶ್ ಕುಮಾರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಚುನಾವಣೆಗೆ ಸಂಬಂಧಿಸಿದಂತೆ 11 ಸ್ಥಾನಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನಿಂದ 4, ಜೆಡಿಎಸ್‌ನಿಂದ 2 ಮತ್ತು ಬಿಜೆಪಿಯಿಂದ 5 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದ್ದು, ಕಾಂಗ್ರೆಸ್ ಆಯ್ಕೆಗೊಳಿಸಿರುವ ನಾಲ್ವರ ಪೈಕಿ ಹರೀಶ್ ಕುಮಾರ್ ಅವರ ಹೆಸರು ಒಳಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರವಿರುವುದರಿಂದ ಮತ್ತು  ಒಟ್ಟು 4-2 ಸೇರಿ 6 ಸ್ಥಾನಗಳು ಆಡಳಿತ ಸರಕಾರದ ಕಡೆಗೆ ಲಭಿಸಲಿದೆ.
ಮೇ. 31 ರಂದು ಹರೀಶ್ ಕುಮಾರ್ ರವರು ತಮ್ಮ ಉಮೇದ್ವಾರಿಕೆ ಸಲ್ಲಿಸಲಿದ್ದಾರೆ. ನಿಯಮದಂತೆ ಜೂ. 11 ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಡೆಯಿಂದ ಇರುವ 6 ಮಂದಿಯನ್ನೂ ಕೂಡ ಗೆಲ್ಲಿಸುವಂತೆ ಉಭಯ ಪಕ್ಷದ ಶಾಸಕರಿಗೆ ವಿಪ್ ಜಾರಿಯಾದಲ್ಲಿ ಹರೀಶ್ ಕುಮಾರ್ ಅವರು ವಿಧಾನ ಪರಿಷತ್‌ನ ಶಾಸಕರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.