ಸಾ೦ಕ್ರಾಮಿಕ ರೋಗ ಭೀತಿ ಹುಟ್ಟುಹಾಕಿರುವ ಮಾಲಾಡಿ ಬಳಿಯ ತ್ಯಾಜ್ಯದ ರಾಶಿ

ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೊಣಂದೂರು ಪಣಕಜೆ ಶಾಲಾ ಸಮೀಪ ಹೆದ್ದಾರಿ ಬದಿಯ ಸಾರ್ವಜನಿಕ ಪ್ರದೇಶದಲ್ಲಿ ಅಲ್ಲಲ್ಲಿ ಯಾರೋ ತ್ಯಾಜ್ಯಗಳನ್ನು ಕಟ್ಟು ಕಟ್ಟಾಗಿ ತಂದು ಸುರಿಯುತ್ತಿದ್ದು ಪರಿಸರದ ಜನತೆ ಸಾಂಕ್ರಾಮಿಕ ರೋಗ ಭೀತಿಯಲ್ಲಿದ್ದಾರೆ.
ಮಾಂದ ಕೋಳಿ ಅ೦ಗಡಿಯವರು ರಾತ್ರಿ ಸಮಯದಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಕೆಲವರು ಈ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸುತ್ತಿದ್ದು ಬಹುತೇಕ ಮಂದಿ ವ್ಯಾಪಾರಸ್ತರು ನಿಯಮ ಮೀರಿ ಜನರ ಕಣ್ತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ಗೋಣಿ ಚೀಲದಲ್ಲಿ ತಂದು ಸುರಿಯುತ್ತಿರುವುದು ಕಂಡುಬರುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಮುಖ್ಯ ರಸ್ತೆಯಲ್ಲಿ ಚಲಿಸುವ ತರಕಾರಿ ಸಾಗಾಟದ ವಾಹನಗಳವರು ಕೂಡ ಕೊಳೆತ ತರಕಾರಿಗಳನ್ನು, ಕ್ಯಾಬೇಜ್ ಸಿಪ್ಪೆ ಮತ್ತು ಇತರೇ ತರಕಾರಿ ತ್ಯಾಜ್ಯವನ್ನು ಈ ಪ್ರದೇಶಗಳಲ್ಲಿ ಸುರಿಯುತ್ತಿದ್ದು ತೀವ್ರವಾದ ದುರ್ವಾಸನೆ ಮತ್ತು ಪರಿಸರ ಅಶುಚಿತ್ವಕ್ಕೆ ಕಾರಣರಾಗುತ್ತಿದ್ದಾರೆ.
ಈಗಾಗಲೇ ಮಳೆಗಾಳ ಪ್ರಾರಂಭವಾಗುತ್ತಿದ್ದು, ಈ ತ್ಯಾಜ್ಯದ ಮೂಲಕ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಗ್ರಾಮ ಪಂಚಾಯತ್ ಮಾಲಾಡಿ ವತಿಯಿಂದ ಇಲ್ಲಿ ಸೂಚನಾ ಫಲಕ ಅಳವಡಿಸಿ ಸಾರ್ವಜನಿಕರಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದರೂ ಸದ್ರಿ ಫಲಕದ ಕೆಳಗೆಯೇ ಜನ ತ್ಯಾಜ್ಯ ಎಸೆದು ಒಂದು ರೀತಿಯಲ್ಲಿ ಸ್ಥಳೀಯಾಡಳಿತಕ್ಕೆ ಸವಾಲು ಒಡ್ಡುತ್ತಿದ್ದಾರೆ. ಇಲ್ಲಿ ಮಾತ್ರವಲ್ಲದೆ ತಾಲೂಕಿನ ಇನ್ನೂ ಹಲವೆಡೆ ಇದೇ ರೀತಿಯ ವಾತಾವರಣ ಕಂಡು ಬರುತ್ತಿದೆ. ಆದ್ದರಿಂದ ಆಯಾಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಬಗ್ಗೆ ಎಚ್ಚರ ವಹಿಸುವ ವಿಚಕ್ಷಣಾ ದಳ ರಚನೆ ಮಾಡಿಕೊಂಡು ಮಾಹಿತಿ ಕಲೆ ಹಾಕಿ ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.
ಇದೀಗ ಮಾಲಾಡಿ ಬಳಿ ಎದುರಾಗಿರುವ ಸಮಸ್ಯೆಗೆ ಗ್ರಾ. ಪಂ ಇದಕ್ಕೆ ಸೂಕ್ತ ಕಾನೂನಿನ ದಾರಿ ಹುಡುಕಿ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಈ ಬಗ್ಗೆ ಪರಸ್ಪರ ಚರ್ಚಿಸಿ ಈ ಬಗ್ಗೆ ರೂಪಿಸಬೇಕಾಗಿರುವ ಕಟ್ಟುನಿಟ್ಟಿನ ಕ್ರಮದ ಜಾರಿಗೆ ಕೂಡಲೇ ಕ್ರಮ ಕೈಗೊಂಡು ಪರಿಸರವನ್ನು ದುರ್ವಾಸಣೆ, ರೋಗಮುಕ್ತ ಗೊಳಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.