ಬೆಳ್ತಂಗಡಿ: ಕಳೆಂಜ – ಬಳೆಂಜ ಗ್ರಾಮಗಳಲ್ಲಿ ಶಂಕಿತ ಡೆಂಗ್ಯೂ ಹಾವಳಿ.

ಕೊಕ್ಕಡ : ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶಾಲೆತ್ತಡ್ಕ ಪರಿಸರಗಳಲ್ಲಿ ಈಗಾಗಲೇ ಜ್ವರದ ಭಾದೆಗೊಳಗಾಗಿ ಸುಮಾರು ಹತ್ತಿಪ್ಪತ್ತು ಮಂದಿ ಕಳೆದೊಂದು ವಾರದ ಅವಧಿಯಲ್ಲಿ ಧರ್ಮಸ್ಥಳದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಉಜಿರೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶಂಕಿತ ಡೆಂಗ್ಯೂ ಜ್ವರದ ಭೀತಿಗೊಳಗಾಗಿರುವ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಕೆಲವು ಮಂದಿಯೂ ಈಗಾಗಲೇ ಇದೇ ರೀತಿಯ ಜ್ವರಕ್ಕೊಳಗಾದ ಬಗ್ಗೆ ವರದಿಯಾಗಿದ್ದು ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಗಳು ಈ ಬಗ್ಗೆ ಈಗಾಗಲೇ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.
ಉಜಿರೆ ಮತ್ತು ಧರ್ಮಸ್ಥಳದ ಆಸ್ಪತ್ರೆಗಳಲ್ಲಿ ಈ ಜ್ವರದ ಭಾಧೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ರಕ್ತದ ಮಾದರಿಯನ್ನು ಮಂಗಳೂರಿನ ಜಿಲ್ಲಾ ಆರೋಗ್ಯ ಇಲಾಖಾ ತಂಡ ಈಗಾಗಲೇ ಸಂಗ್ರಹಿಸಿದ್ದು ಜಿಲ್ಲಾ ರಕ್ತ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇನ್ನಷ್ಟೇ ಇದರ ವರದಿ ಬರಬೇಕಾಗಿದೆ. ಶಂಕಿತ ಡೆಂಗ್ಯೂ ಜ್ವರವು ತಾಲೂಕಿಗೂ ಕಾಲಿಟ್ಟ ಅಸ್ಪಷ್ಟ ಮಾಹಿತಿ ದೊರೆಯುತ್ತಲೇ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದ್ದು ಕಳೆಂಜ ಗ್ರಾಮದ ಸುಮಾರು 300 ಮನೆಗಳ ಆಸು ಪಾಸಿನಲ್ಲಿ ಫಾಗಿಂಗ್ ನಡೆಸಿ, ಸ್ಥಳೀಯ ಆಶಾ ಕಾರ್ಯಕರ್ತೆಯರ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.