ಬಿಜೆಪಿ ಅಭಿನಂದನಾ ಕಾರ್ಯಕ್ರಮ.

ಬೆಳ್ತಂಗಡಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಸಾಧಿಸಿದ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ರವರನ್ನು ಅಭಿನಂದಿಸುವ ಹಾಗೂ ಪಕ್ಷದ ಗೆಲುವಿಗೆ ಅಹರ್ನಿಶಿ ದುಡಿದ ಕಾರ್ಯಕರ್ತರನ್ನು ಅಭಿವಂದಿಸುವ ಕಾರ್ಯಕ್ರಮವು ಮೇ. 27 ರಂದು ಗುರುವಾಯನಕೆರೆ ಜೈನ್‌ಪೇಟೆಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಜರುಗಿತು.
ಬಿಜೆಪಿಯ ಹಿರಿಯ ಮುಖಂಡ, ನ್ಯಾಯವಾದಿ ನೇಮಿರಾಜ ಶೆಟ್ಟಿ ಹಾಗೂ ಕ್ಷೇತ್ರದ ಸಂಯೋಜಕ ಕುಂಟಾರು ರವೀಶ್ ತಂತ್ರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಕ್ಷದ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಚುನಾವಣಾ ಸಂಚಾಲಕ ಮೋನಪ್ಪ ಭಂಡಾರಿ, ಜಿಲ್ಲಾ ಉಪಾಧ್ಯಕ್ಷೆ ಶಾರದಾ ರೈ, ಜಿ.ಪಂ.ಸದಸ್ಯರಾದ ಮಮತಾ.ಎಂ.ಶೆಟ್ಟಿ, ಸೌಮ್ಯಲತಾ, ತಾ.ಪಂ.ಉಪಾಧ್ಯಕ್ಷೆ ವೇದಾವತಿ, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಸುವರ್ಣ, ತಾ.ಪಂ.ಸದಸ್ಯರಾದ ಧನಲಕ್ಷ್ಮಿ ಜನಾರ್ಧನ್, ಶಶಿಧರ ಕಲ್ಮಂಜ, ಪಕ್ಷದ ಪ್ರಮುಖರಾದ ಭಾಗೀರಥಿ ಮುರುಳ್ಯ, ವಿಭಾಗದ ಸಹಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಮಂಡಲ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಧರ್ಮಸ್ಥಳ ಗ್ರಾ.ಪಂ.ಸದಸ್ಯ ಶ್ರೀನಿವಾಸ ರಾವ್, ಉಮೇಶ್ ನಡ್ತಿಕಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪೂಂಜ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.