4 ತಿಂಗಳ ಹಿಂದೆ ತಿರುಪತಿಯಲ್ಲಿ ಕಾಣೆಯಾದ ವ್ಯಕ್ತಿ ಮರಳಿ ಮನೆಗೆ

ಬೆಳ್ತಂಗಡಿ : ಸುಮಾರು 4 ತಿಂಗಳ ಹಿಂದೆ ತಿರುಪತಿಯಲ್ಲಿ ಕಾಣೆಯಾದ ತೋಟತ್ತಾಡಿಯ ವ್ಯಕ್ತಿ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.
ಜ.19 ರಂದು ರುಕ್ಮಯ ಗೌಡ ಅವರು ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ್ದ ಸಂದರ್ಭದಲ್ಲಿ ಕಾಣೆಯಾಗಿದ್ದರು. ಅವರ ಮಕ್ಕಳು ಮತ್ತು ಕುಟುಂಬಸ್ಥರು 15 ದಿನಗಳ ಕಾಲ ಅಲ್ಲಿಯೇ ಉಳಿದು ಅವರನ್ನು ಹುಡುಕಿದ್ದು ಪುನಃ ಮನೆಗೆ ಬಂದ ಬಳಿಕವೂ ತಿರುಪತಿಗೆ ತೆರಳಿ ಹುಡುಕಾಟ ನಡೆಸಿದ್ದರು. ಆದರೆ ಅವರು ಪತ್ತೆಯಾಗಿರಲಿಲ್ಲ ಆದರೆ ಮೇ.25 ರಂದು ಪುದುವೆಟ್ಟು ಬಳಿ ಮನೆಯತ್ತ ತೆರಳಲು ಬೈಕ್ ಸವಾರರೊಬ್ಬರ ಬಳಿ ವಿನಂತಿಸಿದ್ದಾರೆ ಇದೇ ವೇಳೆಯಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಅವರ ಮನೆಯವರು ಇವರನ್ನು ನೋಡಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇವರು ಸಂಪೂರ್ಣ ಆರೋಗ್ಯದಿಂದಿದ್ದು ಯಾವುದೇ ಅಪಾಯವಿಲ್ಲದೇ ಮನೆ ಸೇರಿದ್ದಾರೆ. ಇವರನ್ನು ವಿಚಾರಿಸಿದಾಗ ತಿರುಪತಿಯಿಂದ ನಡೆದುಕೊಂಡೇ ಬಂದಿರುವುದು ಎಂದು ತಿಳಿಸಿರುವುದಾಗಿ ಮನೆಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.