ಜ್ಞಾನ ನೀಡುವ ಮೂಲಕ ಕೇಸರಿಯ ಘನತೆ ಎತ್ತಿ ಹಿಡಿಯೋಣ: ಮಹೇಶ್ ಶೆಟ್ಟಿ ತಿಮರೋಡಿ

ಬೆಳ್ತಂಗಡಿ: ಕೇಸರಿ ರಾಜಕೀಯ ಮಾಡಲು ಇರುವ ವಸ್ತುವಲ್ಲ. ಅದು ಧರ್ಮದ ಸಂಕೇತ. ಕೇಸರಿಯನ್ನು ಕಯ್ಯಲ್ಲಿ ಹಿಡಿದು ಬೀಸಿದರೆ ಧರ್ಮ ಸ್ಥಾಪನೆಯಾಗೂದಿಲ್ಲ, ಶನೀಶ್ವರ ಪೂಜೆಯಂತಹಾ ಕಾರ್ಯಕ್ರಮ ನಡೆಸಿ ಜನರಿಗೆ ಜ್ಞಾನ ಕೊಡುವ ಕೆಲಸದ ಮೂಲಕ ಕೇಸರಿಯ ಘನತೆ ಎತ್ತಿಹಿಡಿಯೋಣ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ಇದರ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ರಾಜಕೇಸರಿ ಬೆಳ್ತಂಗಡಿ ತಾಲೂಕು ಇದರ 2ನೇ ವಾರ್ಷಿಕೋತ್ಸವ ಪ್ರಯುಕ್ತ ಮೇ. 19 ರಂದು ರೆಂಕೆದಗುತ್ತು ಕುತ್ಯಾರು ಹೊಸಮನೆ ಮೈದಾನದಲ್ಲಿ ನಡೆದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ರಾಜಕೇಸರಿ ಸಂಚಾಲಕ ಪ್ರದೀಪ್ ಶೆಟ್ಟಿ ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಲಾಲ ಕುಂಬಾರರ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಲ| ಹರೀಶ್ ಕಾರಿಂಜ, ಅಮೆಚೂರ್ ಕಬಡ್ಡಿ ತೀರ್ಪುಗಾರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ನೆಲ್ಯಾಡಿ ಮಹಾವಿಷ್ಣು ಗೆಳೆಯರ ಬಳಗ ಅಧ್ಯಕ್ಷ ಶಿವಪ್ರಕಾಶ್ ಬೀದಿಮಜಲು, ನ.ಪಂ ಸದಸ್ಯೆ ಮಮತಾ ವಿ ಶೆಟ್ಟಿ, ಉದ್ಯಮಿ ಶಿವಶಂಕರ್ ಗುರುವಾಯನಕೆರೆ, ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ರಾಜಶೇಖರ ಶೆಟ್ಟಿ ಮಡಂತ್ಯಾರು, ದೀಕ್ಷಿತ್ ಗಾಣಿಗ ಆರ್‌ಎಫ್‌ಸಿ ಗಾಸ್ ರೆಂಕೆದಗುತ್ತು, ಬಾಬು ಪಿ ಸತ್ಯಶ್ರೀ ಫ್ರೆಂಡ್ಸ್ ಕೆಲ್ಲಗುತ್ತು, ಅನ್ಸಫ್ ಕ್ರೇಝಿ ಭಾಯ್ಸ್ ರೆಂಕೆದಗುತ್ತು, ರಾಜೀವ ಬಿ.ಎಚ್ ತುಳುನಾಡು ಒಕ್ಕೂಟ ನಗರ ಬೆಳ್ತಂಗಡಿ, ಸುಶಾಂತ್ ಚಕ್ರತೀರ್ಥ ರಾಜಕೇಸರಿ ಗಂಜಿಮಠ ಮಂಗಳೂರು, ಸುರೇಶ್ ಕಟೀಲು ರಾಜಕೇಸರಿ ಮಂಗಳೂರು, ರಾಜಕೇಸರಿ ತಾ. ಅಧ್ಯಕ್ಷ ಅರ್ಪಣ್ ಶೆಟ್ಟಿ, ರಾಜಕೇಸರಿ ವಿವಿಧ ಘಟಕಗಳ ಅಧ್ಯಕ್ಷರುಗಳಾದ ಶ್ರೀಕಾಂತ್ ಹುಣ್ಸೆಕಟ್ಟೆ, ದಿನೇಶ್ ಪೂಜಾರಿ ಗೋವಿಂದೂರು, ಲೋಕೇಶ್ ಕುಮಾರ್ ಕುತ್ಲೂರು, ಪ್ರವೀಣ್ ಮಡಂತ್ಯಾರು, ಗಣ್ಯರಾದ ಜೆರ್ಮಿ ಡೇಸಾ, ಸಂಜೀವ ಮೂಲ್ಯ, ಬೆಳಾಲು ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಕೃಷ್ಣಾನಂದ ರಾವ್ ಮುಂಡಾಜೆ, ಪ್ರಭಾಕರ ಹೆಗ್ಗಡೆ ಹಟ್ಟಾಜೆಗುತ್ತು ಮೊದಲಾದವರು ಶುಭ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.