ಮೊಬೈಲ್ ಆಪ್ ತರಬೇತಿ ಕಾರ್ಯಾಗಾರ.

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಧರ್ಮಸ್ಥಳದ ಜ್ಞಾನವಿಕಾಸ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕಿನ 30ಮಂದಿ ಸಿಬ್ಬಂದಿಗಳಿಗೆ, ಎಸ್.ಶ್ರೇಣಿ ಗುಂಪುಗಳಿಗೆ ಮೊಬೈಲ್ ಆಪ್ ಅಳವಡಿಕೆಯ ತರಬೇತಿ ಕಾರ್ಯಾಗಾರ ಇತ್ತೀಚೆಗೆ  ನಡೆಯಿತು.

 ಗ್ರಾಮಾಭಿವೃದ್ದಿ ಯೋಜನೆಯ ಪ್ರತಿಯೊಬ್ಬ ಕಾರ್ಯಕರ್ತರು ಸೇವಾ ಮನೋಭಾವದೊಂದಿಗೆ ಕೆಲಸವನ್ನು ಸಮರ್ಪಣಾ ಮನೋಭಾವದಿಂದ ಬೆಳೆಸಿಕೊಂಡಾಗ ಆತನ ವ್ಯಕ್ತಿತ್ವ ರೂಪುಗೊಳ್ಳುವುದರೊಂದಿಗೆ ಸಂಘಟನೆ ಬಲಗೊಳ್ಳಲು ಸಾಧ್ಯ. ಪ್ರಸ್ತುತ 3 ವರ್ಷ ಪೂರೈಸಿದ S ಗ್ರೇಡ್ ಸಂಘಗಳಿಗೆ ಸ್ವತಂತ್ರವಾಗಿ ಸಾಲ ಸೌಲಭ್ಯವನ್ನು ಶೀಘ್ರವಾಗಿ ಪಡೆಯಲು ಸಂಘದ ಸದಸ್ಯರಿಗೆ ವಿಶೇಷವಾದ ಅವಕಾಶವನ್ನು ನೀಡಲಾಗುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ 2000 ಸಂಘಗಳು S ಶ್ರೇಣಿಯಲ್ಲಿದ್ದು ಇವರಿಗೆ ಮೊಬೈಲ್ ಆಪ್ ಮೂಲಕ ಸಾಲದ ಬೇಡಿಕೆಯನ್ನು ಕಳುಹಿಸಿಕೊಡುವ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ  ಡಾ| ಎಲ್.ಎಚ್. ಮಂಜುನಾಥ್ ರವರು ಮೊಬೈಲ್ ಆಪ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಕೆ.ಮಹಾವೀರ ಅಜ್ರಿ, ಸ್ವ ಸಹಾಯ ಸಂಘಗಳ ನಿರ್ವಹಣಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಬೂದಪ್ಪ ಗೌಡ, ಹಣಕಾಸು ವಿಭಾಗದ ಪ್ರಾದೇಶಿಕ ನಿರ್ದೇಶಕ ಶಾತರಾಮ್ ಪೈ, ತಂತ್ರಜ್ಞಾನ ವಿಭಾಗದ ನಿರ್ದೇಶಕ  ಜಯರಾಮ್ ಡಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ  ಚಂದ್ರಶೇಖರ್, ತರಬೇತಿ ಸಂಸ್ಥೆಯ ಪ್ರಾಂಶುಪಾಲ ಚಂದ್ರಶೇಖರ್, ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಕಛೇರಿ ಪ್ರಬಂಧಕರು, ಐಟಿ ಮ್ಯಾನೇಜರ್, ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.