ಪಿಯುಸಿ: ದಾಖಲಾತಿ ಹೆಚ್ಚಳಕ್ಕೆ ಆಂದೋಲನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಆಂದೋಲನ ಕೈಗೊಳ್ಳಲು ಸತ್ತೋಲೆ ಹೊರಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರಿಗೆ ವಿದ್ಯಾರ್ಥಿಗಳನ್ನು ದತ್ತು ನೀಡುವ ಮೂಲಕ ದಾಖಲಾತಿ ಹಾಜರಾತಿ ಹಾಗೂ ಗುಣಮಟ್ಟದ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಿದೆ.
ಈ ಆಂದೋಲನಕ್ಕಾಗಿ ಕಾಲೇಜಿನಲ್ಲಿರುವ ಸಂಪನ್ಮೂಲ ಸೌಲಭ್ಯ, ಸರಕಾರದ ಯೋಜನೆ ಬಿಂಬಿಸುವಂತಹ ಆರ್ಕಣೀಯವಾದ ಕರಪತ್ರ, ದೂರವಾಣಿ, ವಾಟ್ಸಾಪ್, ಫೇಸ್‌ಬುಕ್ ಮೂಲಕ ಅಭಿಯಾನ ಕೈಗೊಳ್ಳುವುದು. ಇದಕ್ಕಗಿ ಕಾಲೇಜುಗಳ ಸಂಚಿತ ನಿಧಿಯಲ್ಲಿರುವ ಅನುದಾನದಲ್ಲಿ ರೂ.1000/-  ಮೊತ್ತಕ್ಕೆ ಮೀರದಂತೆ ಭರಿಸಬಹುದು ಎಂದು ಇಲಾಖೆ ಸುತ್ತೋಲೆಯಲ್ಲಿ ಸೂಚಿಸಿದೆ.
ಪ್ರತಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರೌಢ ಶಾಲೆಗಳಲ್ಲಿ ಎಸ್.ಎಸ್. ಎಲ್.ಸಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ಪೋಷಕರನ್ನು ಸಂರ್ಕಿಸಿ ಕಾಲೇಜಿಗೆ ಸೇರಿಸಲು ಉತ್ತೇಜನ ನೀಡಬೇಕು, ಸ್ಥಳೀಯ ಕೇಬಲ್ ಟಿವಿಗಳಲ್ಲಿ, ಕಾಲೇಜಿನ ಸೌಲಭ್ಯ, ಸಾಧಕ ವಿದ್ಯಾರ್ಥಿಗಳ ವಿವರ ಬಿತ್ತರ ಹಾಗೂ ವಿದ್ಯಾರ್ಥಿಗಳ ಭಾವವಿತ್ರಗಳನ್ನು ಫ್ಲೇಕ್ಸ್ ರೂಪದಲ್ಲಿ ಪ್ರಕಟಿಸಲು ಸೂಚಿಸಲಾಗಿದೆ.
2017-18 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತ್ಯತ್ತಮ ಸಾಧನೆ ಮಾಡಿದ ಎರಡು ಸರಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವಿವರ ಸಂಗ್ರಹಿಸಬೇಕು, ಅದೇ ರೀತಿ ಕ್ರೀಡೆ, ಬರವಣಿಗೆ, ಸಾಹಿತ್ಯ ಸಮಾಜ ಸೇವೆಯಲ್ಲಿ ಉತ್ತಮ ಸಾಧನೆಗೈದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವಿವರಗಳನ್ನು ಭಾವಚಿತ್ರ ಸಮೇತ ಇಲಾಖೆಯ ಶೈಕ್ಷಣಿಕ ಕಚೇರಿಗೆ ಇ-ಮೇಲ್ ಮೂಲಕ ಕಳಿಸಬೇಕು. ಈ ಪೈಕಿ ಅರ್ಹರನ್ನುಪರಿಶೀಲಿಸಿ ವೆಬ್‌ಸೈಟ್‌ಗೆ ಅಳವಡಿಸಲಾಗುವುದು ಎಂದು ಇಲಾಖೆಯ ಸಹಾಯಕ ನಿದೇಶಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.