HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ರೆಖ್ಯ: ಕೊಡಲಿಯಿಂದ ಕಡಿದು ಹಲ್ಲೆ.

ಕೊಕ್ಕಡ : ರೆಖ್ಯ ಗ್ರಾಮದ ಪರಕ್ಕಳ ನಿವಾಸಿ ಲಲಿತ ರವರ ಇಬ್ಬರು ಗಂಡು ಮಕ್ಕಳ ಪೈಕಿ ಹಿರಿಯ ಮಗ ರಾಜು ಎಂಬಾತನಿಗೆ ಈತನ ಸಹೋದರ ಪ್ರಕಾಶ್ ಎಂಬವರು ಕೊಡಲಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ಮೇ.17 ರಂದು ವರದಿಯಾಗಿದೆ.

ಮೇ.16 ರಂದು ರಾತ್ರಿ  ಯಾವುದೋ  ಕ್ಷುಲ್ಲಕ ವಿಚಾರದಲ್ಲಿ ಇವರಿಬ್ಬರ  ನಡುವೆ ಜಗಳ ನಡೆದಿದ್ದು,  ಆರೋಪಿ ಪ್ರಕಾಶ್ ರವರು  ತನ್ನ ಅಣ್ಣ  ರಾಜು ರವರಿಗೆ  ಕೊಡಲಿಯಿಂದ ಕಡಿದು ತೀವ್ರ ಹಲ್ಲೆ ನಡೆಸಿದ್ದು , ಜಗಳವನ್ನು ಬಿಡಿಸಲೆಂದು ಹೋದ ತಾಯಿಗೂ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಗಾಯಾಳು ರಾಜುರವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಉಪನಿರೀಕ್ಷಕ ಅವಿನಾಶ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.