HomePage_Banner_
HomePage_Banner_

ಕರಾಯ: ಐವರ ತಂಡದಿಂದ ಈರ್ವರಿಗೆ ಹಲ್ಲೆ .

ಉಪ್ಪಿನಂಗಡಿ: ಐವರ ತಂಡವೊಂದು ಅಡ್ಡಗಟ್ಟಿ ಇಬ್ಬರಿಗೆ ಹಲ್ಲೆ ನಡೆಸಿ, ಜೀವಬೆದರಿಕೆಯೊಡ್ಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಣ್ಣೀರುಪಂಥ ಗ್ರಾಮದ ಮುಹಮ್ಮದ್ (56) ಹಾಗೂ ಅವರ ಸಂಬಂಧಿ ಆದಂರವರು ಮೇ.15 ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ಓಮ್ನಿಯಲ್ಲಿ ಬಂದ ಅಬೂಬಕ್ಕರ್, ಮುಹಮ್ಮದ್ ಮದನಿ, ಬಾಪುಂಞಿ, ಸುಲೈಮಾನ್ ಸಅದಿ, ಅಬ್ಬಾಸ್‌ರವರ ತಂಡವು ಇವರನ್ನು ಕರಾಯ ಗ್ರಾಮದ ಶಿವಪ್ಪ ಸ್ಮಾರಕ ಬಸ್ ನಿಲ್ದಾಣದ ಬಳಿ ಅಡ್ಡಗಟ್ಟಿ ಹಲ್ಲೆ ನಡೆಸಿ, ಜೀವಬೆದರಿಕೆ ಯೊಡ್ಡಿದೆ ಎಂದು ಮುಹಮ್ಮದ್ ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.