ತಾಲೂಕಿನಾದ್ಯಂತ ಪೂಂಜ ಅಭಿಮಾನಿಗಳ ಸಂಭ್ರಮಾಚರಣೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಪುಂಜಾಲಕಟ್ಟೆಯಲ್ಲಿ ಕಾರ್ಯಕರ್ತರ ವಿಜಯೋತ್ಸವ

 

ಪುಂಜಾಲಕಟ್ಟೆ ಯಲ್ಲಿ ಪೂಂಜ ಅಭಿಮಾನಿಗಳ ಸಂಭ್ರಮಾಚರಣೆ.

 

ಮಡಂತ್ಯಾರಿನಲ್ಲಿ ಬಿಜೆಪಿ ಬಾವುಟ ಹಿಡಿದು ಕಾರ್ಯಕರ್ತರ ಸಂಭ್ರಮ

 

ಮಡಂತ್ಯಾರು ಪೇಟೆಯಲ್ಲಿ ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದವಾದ ಸಲ್ಲಿಸುತ್ತಿರುವ ಪೂಂಜ.

 

ಮದ್ದಡ್ಕ ಪೇಟೆಯಲ್ಲಿ ಪೂಂಜ ಅಭಿಮಾನಿಗಳ ಹರ್ಷಾಚರಣೆ
ಕುಪ್ಪೆಟ್ಟಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ತಿಂಡಿ ಹಂಚಿ ಸಂಭ್ರಬಾಚರಣೆ

ಬೆಳ್ತಂಗಡಿ: ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಭರ್ಜರಿ ಗೆಲುವು ಸಾಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕಿನಾದ್ಯಂತ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಬೆಳ್ತಂಗಡಿ ನಗರವಲ್ಲದೆ ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲೂ ಕಾರ್ಯಕರ್ತರು ಮೆರವಣಿಗೆ, ಬೈಕ್, ಕಾರು ಇತರ ವಾಹನಗಳ ರ್‍ಯಾಲಿಯ ಮೂಲಕ ಜೈಕಾರ ಹಾಕುತ್ತಾ, ಪಟಾಕಿ ಸಿಡಿಸಿ, ಕುಣಿದು-ಕುಪ್ಪಳಿಸಿ ಸಂಭ್ರಮಿಸಿದರು.
ಸಂಜೆ ೪.೩೦ಕ್ಕೆ ವಿಜೇತ ಅಭ್ಯರ್ಥಿ ಹರೀಶ್ ಪೂಂಜ ತಾಲೂಕಿನ ಗಡಿ ಭಾಗ ಮೂರ್ಜೆಗೆ ಆಗಮಿಸುತ್ತಿದ್ದಂತೆ ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಕಾರ್ಯಕರ್ತರು, ಪಕ್ಷದ ನಾಯಕರುಗಳು, ಪುಂಜ ಅಭಿಮಾನಿಗಳು, ಯುವಕ ಸಮೂಹ ಅವರನ್ನು ಆದ್ದೂರಿಯಾಗಿ ಕ್ಷೇತ್ರಕ್ಕೆ ಸ್ವಾಗತಿಸಿ ಜೈಕಾರ ಕೂಗುತ್ತಾ ಸಂಭ್ರಮಿಸಿದರು.
ಸಂಭ್ರಮದ ಮೆರವಣಿಗೆ: ನಂತರ ಮೂರ್ಜೆಯಿಂದ ತೆರೆದ ವಾಹನದಲ್ಲಿ ನೂತನ ಶಾಸಕ ಹರೀಶ್ ಪೂಂಜ ಅವರ ಆದ್ದೂರಿಯ ವಿಜಯೋತ್ಸವ ಮೆರವಣಿಗೆ ಸಾಗಿತು. ಪುಂಜಾಲಕಟ್ಟೆ ಮೂಲಕ ಮಡಂತ್ಯಾರುಗೆ ಬಂದಾಗ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಅಭಿಮಾನಿಗಳು ಪೂಂಜರಿಗೆ ಹೂಹಾರ ಹಾಕಿ ಅಭಿನಂದಿಸಿದರು. ಅಲ್ಲಿಂದ ಮಾಲಾಡಿ, ಪಣಕಜೆ, ಮದ್ದಡ್ಕ, ಗುರುವಾಯನಕೆರೆ, ಮೂಲಕ ಮೆರವಣಿಗೆ ಬೆಳ್ತಂಗಡಿ ನಗರಕ್ಕೆ ಆಗಮಿಸಿದಾಗ ಸಹಸ್ರರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಿಸಿದರು. ಯುವಕರು ಜೈಕಾರ ಹಾಕುತ್ತಾ, ಬಿಜೆಪಿ ಧ್ವಜವನ್ನು ಹಾರಿಸುತ್ತಾ ಕುಣಿದು ಕುಪ್ಪಳಿಸಿದರು. ಶಾಸಕ ಹರೀಶ್ ಪೂಂಜ ಸೇರಿದ ಜನ ಸಮೂಹಕ್ಕೆ ವಂದಿಸಿ, ಕೈಬೀಸಿ ಕೃತಜ್ಞತೆಗಳನ್ನು ಸಲ್ಲಿಸಿದರು. ಬೆಳ್ತಂಗಡಿ ಬಿಜೆಪಿ ಕಚೇರಿಗೆ ಹೋಗಿ ಅಲ್ಲಿ ಸ್ವಲ್ಪ ಹೊತ್ತು ಇದ್ದು ಅಲ್ಲಿಂದ ಮೆರವಣಿಗೆ ಉಜಿರೆಗೆ ತೆರಳಿತು.
ಉಜಿರೆಯಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ನೂತನ ಶಾಸಕರನ್ನು ಸ್ವಾಗತಿಸಿ ಸಂಭ್ರವಿಸಿದರು. ಅಲ್ಲಿಂದ ಕನ್ಯಾಡಿ ಮೂಲಕ ಮೆರವಣಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿತು. ಧರ್ಮಸ್ಥಳದಲ್ಲೂ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದರು. ನೂತನ ಶಾಸಕ ಹರೀಶ್ ಪೂಂಜ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ಪುಂಜಾಲಕಟ್ಟೆಯಿಂದ ಧರ್ಮಸ್ಥಳ ತನಕ ದಾರಿಯುದ್ದಕ್ಕೂ ಜನರು ನೂತನ ಶಾಸಕರ ಮೆರವಣಿಗೆಗಾಗಿ ಆಗಮನಕ್ಕಾಗಿ ಮಧ್ಯಾಹ್ನವೇ ಬಂದು ಕಾದು ಕುಳಿತ್ತಿದ್ದು, ಸಂಜೆ ಮೆರವಣಿಗೆ ಹೋಗುವಾಗ ಕೈಬೀಸಿ ತಮ್ಮ ಅಭಿನಂದನೆ, ಅಭಿವಂದನೆಗಳನ್ನು ಸಲ್ಲಿಸಿದರು.
ವಾಹನ ರ್‍ಯಾಲಿ: ಮೆರವಣಿಗೆಯೂದ್ದಕ್ಕೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಬೈಕ್, ಕಾರು, ಆಟೋರಿಕ್ಷಾ ಸೇರಿದಂತೆ ವಿವಿಧ ವಾಹನಗಳಲ್ಲಿ ಪಕ್ಷದ ಧ್ವಜ ಮತ್ತು ಮೋದಿ ಹಾಗೂ ಷಾ ಅವರ ಕಟೌಟ್ ಹಾಕಿ, ಧ್ವಜ ಬೀಸುತ್ತಾ ಜೈಕಾರ ಹಾಕುತ್ತಾ ರ್‍ಯಾಲಿ ನಡೆಸಿ ಸಂಭ್ರಮಿಸಿದರು.
ಎಲ್ಲೆಲ್ಲೂ ಮೋದಿ ಜೈಕಾರ: ಹರೀಶ್ ಪೂಂಜ ಗೆಲುವು ಸಾಧಿಸುತ್ತಿದ್ದಂತೆ ಬೆಳ್ತಂಗಡಿ ಪಕ್ಷದ ಕಚೇರಿ ಸೇರಿದಂತೆ ತಾಲೂಕಿನ ಪ್ರಮುಖ ನಗರಗಳಲ್ಲಿ ಕಾರ್ಯಕರ್ತರು ಬೀದಿಗಿಳಿದು ಮೋದಿ, ಅಮಿತ್ ಷಾ ಮತ್ತು ವಿಜೇತ ಅಭ್ಯರ್ಥಿಗೆ ಜೈಕಾರ ಹಾಕಿ ಸಂತೋಷ ಪಟ್ಟರು. ವಿಜೇತ ಅಭ್ಯರ್ಥಿ ಹರೀಶ್ ಪೂಂಜರ ಜೊತೆ ತಾಲೂಕಿನ ಪಕ್ಷದ ನಾಯಕರು ಉಪಸ್ಥಿತರಿದ್ದರು.
ಮಂಗಳೂರಿನಲ್ಲೂ ಸ್ವಾಗತ: ಮಂಗಳೂರಿನ ಬೋಂದೇಲ್ ಮಹಾತ್ಮಾಗಾಂಧಿ ಸೆಂಟಿನರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಮುಕ್ತಾಯಗೊಂಡು ವಿಜೇತ ಅಭ್ಯರ್ಥಿ ಹರೀಶ್ ಪೂಂಜ ಹೊರಬರುತ್ತಿದ್ದಂತೆ ನೂತನ ಶಾಸಕರನ್ನು ಪಕ್ಷದ ತಾಲೂಕಿನ ಮುಖಂಡರು, ಕಾರ್ಯಕರ್ತರು ಹೂ ಹಾರ ಹಾಕಿ ಸ್ವಾಗತಿಸಿದರು.
ಶಾಂತಿಯುತವಾಗಿ ನಡೆದ ಮೆರವಣಿಗೆ: ಮೂರ್ಜೆಯಿಂದ ಧರ್ಮಸ್ಥಳ ತನಕ ವಿಜೇತ ಅಭ್ಯರ್ಥಿಯ ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯಲ್ಲಿ ಸೆಕ್ಷನ್ ೧೪೪ರನ್ವಯನಿಷೇಧಾಜ್ಞೆ ಮತ್ತು ವಿಜಯೋತ್ಸವ ಆಚರಣೆಗೆ ನಿರ್ಭಂಧ ಇದ್ದರೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯ ಸಂಭ್ರಮಾಚರಣೆಯ ಮೆರವಣಿಗೆಗೆ ಪೊಲೀಸರು ಯಾವುದೇ ಅಡಚಣೆ ಮಾಡಲಿಲ್ಲ. ಮೆರವಣಿಗೆಯಿಂದಾಗಿ ಅಲ್ಲಲ್ಲಿ ರಸ್ತೆ ತಡೆಯುಂಟಾದಾಗ ಪೊಲೀಸರು ಹಾಗೂ ಕಾರ್ಯಕರ್ತರು ವಾಹನಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಟ್ಟರು. ಮೆರವಣಿಗೆಯುದ್ದಕ್ಕೂ ಕೇಸರಿ ಶಾಲು, ಪಕ್ಷದ ಧ್ವಜ ವಿಜೃಂಭಿಸಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.