ಕಾಶಿಬೆಟ್ಟುವಿನಲ್ಲಿ ರಮ್ಜಾನ್ ಕಿಟ್ ವಿತರಣೆ.

ಲಾಯಿಲ : ಉಜಿರೆ ಕಾಶಿಬೆಟ್ಟು ರದಲಾಕ್ ಮೆನ್ಸನ್‌ನಲ್ಲಿ ಮೇ.14 ರಂದು ಮುಸ್ಲಿಂರ ಪವಿತ್ರ ಉಪವಾಸ ನಿಮಿತ್ತ ಸುಮಾರು 110 ಕುಟುಂಬಗಳಿಗೆ ರಮ್ಜಾನ್ ಕಿಟ್ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಹನೀಫ್ ಹಾಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಬೂಬಕ್ಕರ್ ಸಹದಿ ಆತೂರು ವಹಿಸಿ ಶುಭ ಹಾರೈಸಿದರು. ಉಜಿರೆಯ ನಿವಾಸಿ ರಿಯಾಜ್‌ನಲ್ಲಿರುವ ರಝಾಕ್ ಹಾಜಿಯವರು ರಮ್ಜಾನ್ ಕಿಟ್ ನೀಡಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಉಸ್ಮಾನ್, ಹಮೀದ್, ಹಾರೀಸ್ 110 ಮನೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಉಜಿರೆಯ ಹೈದರ್ ಹಾಜಿ ಮದನಿ ಸ್ವಾಗತಿಸಿದರು. ಜಾಕೀರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.