ಬೇಸಿಗೆ ರಜಾ ಮಕ್ಕಳ ಪಾಲಿಗೆ ಮುಳುವಾಗದಿರಲಿ ನೀರಿನಾಟದ ವೇಳೆಯಲ್ಲಿ ಮಕ್ಕಳ ಮೇಲೆ ನಿಗಾ ಇರಲಿ.

ಬೇಸಿಗೆ ರಜಾ ಬಂತೆಂದರೆ ಸಾಕು, ಮಕ್ಕಳು ಪಠ್ಯದ ಬಗ್ಗೆ ಚಿಂತೆಯಿಲ್ಲದೆ ಸ್ವತಂತ್ರರಾಗುತ್ತಾರೆ. ಅಂತಿಮ ಪರೀಕ್ಷೆ ಮುಗಿದಿದೆಯಲ್ಲ, ರಿಲ್ಯಾಕ್ಸ್ ಆಗಲೆಂದು ಪೋಷಕರು ಸಹ ಮಕ್ಕಳನ್ನು ತನ್ನ ಪಾಡಿಗೆ ಬಿಟ್ಟು ಬಿಡುತ್ತಾರೆ. ಆದರೆ ಎಚ್ಚರವಿರಲಿ ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ನಿಗಾ ಇಡಿ. ನೀರಿನಲ್ಲಿ ಆಟ: ಮಕ್ಕಳು ಹೆಚ್ಚಾಗಿ ಬೇಸಿಗೆ ರಜೆಯ ಮಜಾ ಉಡಾಯಿಸಲು ಉಪಯೋಗಿಸುವುದು ನದಿ, ಕೆರೆ, ಕಾಲುವೆಗಳಲ್ಲಿನ ಈಜಾಟದ ಮೋಜನ್ನು. ಆದರೆ ನೀರಿನಾಟ ಎಷ್ಟು ಖುಷಿ ನೀಡುತ್ತದೋ ಅಷ್ಟೇ ಅಪಾಯಕಾರಿ ಅನ್ನುವುದನ್ನು ಪೋಷಕರು ಅರಿಯಬೇಕು. ಮನೆಯ ಪಕ್ಕ ನದಿ, ಕೆರೆಗಳಲ್ಲಿ ಸ್ನಾನ ಮಾಡಲು, ಈಜಾಡಲು ಮಕ್ಕಳು ಬಯಸಿದರೆ ಅವರ ಜತೆ ನೀವೂ ತೆರಳಿ. ಕೇವಲ ಮಕ್ಕಳನ್ನೇ ತೆರಳಲು ಬಿಡುವುದಾದರೆ ಹೆಚ್ಚಿನ ಹೊತ್ತು ಆಡಲು ಬಿಡದೆ ನಿಗದಿತ ಸಮಯಕ್ಕೆ ಬರುವಂತೆ ತಿಳಿಸಿಬಿಡಿ.
ಹೆಚ್ಚಿನ ಮಕ್ಕಳು ಸಂಬಂಧಿಕರ ಮನೆಗೆ ತೆರಳಿ ನದಿ, ಕೊಳವೆಗಳಲ್ಲಿ ಆಟ ಆಡಲು ತೆರಳುತ್ತಾರೆ. ಆಗಾಗಿ ಸಂಬಂಧಿಕರಿಗೆ ನಿಗಧಿತ ಅತ್ಯಲ್ಪ ಸಮಯದಲ್ಲಿ ಮಕ್ಕಳನ್ನು ನೀರಿನಾಟಕ್ಕೆ ಬಿಡುವಂತೆ ಗಂಭೀರವಾಗಿ ತಿಳಿಸಿ. ಮಕ್ಕಳು ನೀರಿನಾಟದ ಬಳಿಕ ಹೆಚ್ಚಾಗಿ ಇಷ್ಟ ಪಡುವುದು ಮೈದಾನದ ಮಣ್ಣಿನ ಆಟಗಳನ್ನು. ಈ ವೇಳೆಯಲ್ಲಿಯೂ ಮಕ್ಕಳು ಕೆಲವೊಂದು ಅನಾಹುತ ಮಾಡಿಕೊಳ್ಳುವ ಉದಾ ಹರಣೆಗಳಿವೆ. ಈ ಬಗ್ಗೆಯೂ ಪೋಷಕರು ಎಚ್ಚರಿಕೆ ವಹಿಸುವುದು ಅಗತ್ಯ. ಮಕ್ಕಳನ್ನು ಕೇವಲ ಸಂಜೆಯ ವೇಳೆಯಲ್ಲಿ ಆಟವಾಡಲು ಬಿಡಿ. ಮತ್ತು ದೂರದ ಮೈದಾನಗಳಿಗೆ ಆಟವಾಡಲು ತೆರಳಲು ಬಿಡಬೇಡಿ. ಮಕ್ಕಳನ್ನು ಆಟಕ್ಕೆ ಕಳುಹಿಸುವ ತಾವು ಒಮ್ಮೆಯಾದರೂ ಅವರ ಆಟವಾಡುವ ಸ್ಥಳ ವೀಕ್ಷಿಸಿ ಬನ್ನಿ. ಆಟವಾಡುವ ವೇಳೆಯಲ್ಲಿ ಸಣ್ಣ ವಿಷಯಗಳಿಗೂ ಮಕ್ಕಳಲ್ಲಿ ಗುಂಪು ಘರ್ಷಣೆ ಸ್ವಾಭಾವಿಕ. ಹಾಗಂತ ಅದು ಮಿತಿಮೀರಿದರೆ ಸಮಸ್ಯೆಯಾಗಬಹುದು. ಅಂತಹ ಸುಳಿವು ಸಿಕ್ಕರೆ ಪೋಷಕರು ಮಕ್ಕಳನ್ನು ಅಲ್ಲಿಗೆ ಆಟವಾಡುವ ಕಳುಹಿಸಲು ಬಿಡದೆ ನಿರ್ಬಂಧ ಹೇರಿ.
ದೂರದ ಪ್ರಯಾಣ: ಬೇಸಿಗೆ ರಜೆ ಬಂತೆಂದರೆ ಸಾಕು ಕುಟುಂಬಿಕರು ಒಟ್ಟಾಗಿ ದೂರದ ಸಂಬಂಧಿಕರ ಮನೆಗೋ, ಪ್ರವಾಸ ಹಾಗೂ ತೀರ್ಥಯಾತ್ರೆಗೂ ಪ್ರಯಾಣ ಕೈಗೊಳ್ಳುತ್ತಾರೆ. ಖುಷಿಯಲ್ಲಿ ಮೈಮರೆಯದೆ ಈ ವೇಳೆ ಮಕ್ಕಳ ಮೇಲೆ ನಿಗಾ ಇಡಿ. ರಸ್ತೆ, ಹೆದ್ದಾರಿ ದಾಟುವ ವೇಳೆ ಹೆಚ್ಚಿನ ಜಾಗೃತೆ ವಹಿಸಿ.
ವಾಹನ ಮೋಜು: ರಜಾ ದಿನಗಳಲ್ಲಿ ಹೆಚ್ಚಾಗಿಯೇ ಮಕ್ಕಳು ದ್ವಿಚಕ್ರ, ಲಘು ವಾಹನಗಳನ್ನು ಅಭ್ಯಾಸಿಸುತ್ತಾರೆ. ಡ್ರೈವಿಂಗ್ ಕ್ಲಾಸ್ ತೆರಳಿ ಕಲಿಯುವುದಾದರೆ ಅಡ್ಡಿಯಿಲ್ಲ. ಆದರೆ ಮನೆಯವರೇ ಕಲಿಸುವುದಾದರೆ ಎಚ್ಚರಿಕೆ ಅಗತ್ಯ. ಕೆಲವೇ ಸಮಯ ಕಲಿತು ಧೈರ್ಯವಾಗಿ ವಾಹನ ಚಲಾಯಿಸಲು ಮಕ್ಕಳು ಮುಂದಾಗು ತ್ತಾರೆ, ಈ ವೇಳೆ ಪೋಷಕರು ಜಾಗೃತೆ ವಹಿಸಬೇಕು. ಸರಿಯಾಗಿ ಅಭ್ಯಾಸವಾ ಗದೆ ರಸ್ತೆಗೆ ವಾಹನ ತರಲು ಬಿಡಬೇಡಿ, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಸರಿಯಾಗಿ ಅಭ್ಯಾಸವಾಗಿದೆ ಎಂದು ನಿಮಗೆ ದೃಢವಾದ ಮೇಲೆಯೇ ಮಕ್ಕಳಿಗೆ ರಸ್ತೆಯಲ್ಲಿ ವಾಹನ ಚಲಾಯಿಸಲು ಬಿಡಿ. ಆದರೆ ವಾಹನ ಚಲಾಯಿಸಲು ಆರ್‌ಟಿಒ ಪರವಾನಿಗೆ ಕಡ್ಡಾಯ ಅನ್ನುವುದನ್ನು ಮರೆಯಬೇಡಿ.

ಲೇಖನ: ಪದ್ಮನಾಭ ವೇಣೂರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.