ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿ ಬಿಜೆಪಿ ಮತಯಾಚನೆ ಸಭೆ.

ಬೆಳ್ತಂಗಡಿ: ಮೇ.10 ರಂದು ಸಂಜೆ ಲಾಯಿಲ ದಿಂದ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಮಂದಿರದ ವರೆಗೆ ನಡೆದ ಬೃಹತ್ ಪಾದಯಾತ್ರೆ, ವಾಹನ ಜಾಥಾ ಬಳಿಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರವಾಗಿ ಮತಯಾಚನೆ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಸಮೀಕ್ಷೆ ಪ್ರಕಾರ ತಾಲೂಕಿನ ಶೇ.೮೫ ಮತದಾರರು ತನ್ನನ್ನು ಬಿಜೆಪಿ ಅಭ್ಯರ್ಥಿ ಎಂದು ಗುರುತಿಸಿದ್ದು, ಪಕ್ದ ಅಭ್ಯರ್ಥಿಯಾಗಿದ್ದೇನೆ. ಪ್ರಧಾನಿ ಮೋದಿ ಜಗತ್ತಿನ ಧೀಮಂತ ನಾಯಕ. ಮೋದಿಯವರ ಚಿಂತನೆ ಹಾಗೂ ಬೆಳ್ತಂಗಡಿಯ ಭವಿಷ್ಯದ ಬದಲಾವಣೆಗೆ ನನ್ನನ್ನು ಈ ಬಾರಿ ಗೆಲ್ಲಿಸಿ. ಮುಂದಿನ ಐದು ವರ್ಷಗಳ ಬಳಿಕ ಅಭಿವೃಧ್ಧಿಯ ನೆಲೆಯಿಂದ ಮತಯಾಚಿಸಿ ನಿಮ್ಮೊಂದಿಗೆ ಬರುತ್ತೇನೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಅರುಣ್ ಪುತ್ತಿಲ, ಕುಂಟಾರು ರವೀಶ್ ತಂತ್ರಿ, ಕುಶಾಲಪ್ಪ ಗೌಡ, ರುಕ್ಮಯ ಕನ್ನಾಜೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.