ಶಿಬಾಜೆ : ಸಿಡಿಲಿಗೆ 2 ದನ ಸಾವು.

ಕೊಕ್ಕಡ : ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿಯ ನಿವಾಸಿ ಪಿ.ಕೆ. ತೋಮಸ್ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಲಾಗಿದ್ದ 2 ದನಗಳು ಮೇ.8 ರಂದು ರಾತ್ರಿ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಸಂಜೆಯಾಗುತ್ತಲೇ ಬೀಸಿದ ಭಾರಿ ಮಳೆ, ಗಾಳಿಯ ಜೊತೆಗೆ ಸಿಡಿಲಿನ ಆರ್ಭಟವೂ ಜೋರಾಗಿದ್ದು , ಹಟ್ಟಿಯಲ್ಲಿ ಕಟ್ಟಲಾಗಿದ್ದ 1 ಗಬ್ಬದ ದನ ಮತ್ತು ಇನ್ನೊಂದು ಹಾಲು ಕರೆಯುವ ದನ ಸೇರಿದಂತೆ ಅಂದಾಜು 90 ಸಾವಿರ ಬೆಲೆ ಬಾಳುವ ಎರಡು ದನಗಳು ಸಾವನ್ನಪ್ಪಿದೆ. ಬಡತನದಲ್ಲಿರುವ ಕೃಷಿಕರಾದ ಇವರು ಹೈನುಗಾರಿಕೆಯನ್ನೇ ಅವಲಂಬಿತರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.