ಸಿಪಿಐಎಂ : ಕಾಂಗ್ರೆಸ್‌ಗೆ ಬೆಂಬಲ

 

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಜ್ಯದ ಸೌಹಾರ್ದತೆ ಪರಂಪರೆಯನ್ನು ಉಳಿಸಿ ಬೆಳಸಲು ಹಾಗೂ ಜನತೆಯ ಪ್ರಜಾ ಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ಮತ್ತು ಈ ದೇಶದ ಜಾತ್ಯಾತೀತ ಸಂವಿಧಾನದ ಉಳಿವಿಗಾಗಿ ಮತಾಂಧ ಮತ್ತು ಸರ್ವಾಧಿಕಾರಿ ಧೋರಣೆಯ ಬಿ.ಜೆ.ಪಿ ಯನ್ನು ಸೋಲಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಕರೆ ನೀಡಿದ್ದು ಈ ಚುನಾವಣೆಯಲ್ಲಿ ಪಕ್ಷವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಜಾತ್ಯಾತೀತ ನಿಲುವಿನ ಪ್ರತಿಪಾದಕ ಕೆ.ವಸಂತ ಬಂಗೇರ ಅವರನ್ನು ಬೆಂಬಲಿಸಲು ತೀರ್ಮಾನಿಸಿದೆ.
ರಾಷ್ಟ್ರಕವಿ ಕುವೆಂಪು, ನಾರಾಯಣ ಗುರು, ಬಸವಣ್ಣ, ಪೆರಿಯರ್ ಜನ್ಮ ತಾಳಿದ ಈ ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸುವ ಮೂಲಕ ನಾವೆಲ್ಲರೂ ಭಾರತದ ಭವ್ಯ ಪರಂಪರೆಯನ್ನು ಎತ್ತಿಹಿಡಿಯಬೇಕಾಗಿದೆ. ಆದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶಾದ್ಯಂತ ಮತೀಯ ಸೌಹಾರ್ದತೆಯನ್ನು ಕೆಡಿಸುವ ಕೆಲಸವಾಗುತ್ತಿದೆ. ನಾವು ತಿನ್ನುವ ಆಹಾರ, ಉಡುವ ಬಟ್ಟೆ ಸೇರಿದಂತೆ ಮನುಷ್ಯನ ವೈಯಕ್ತಿಕ, ಖಾಸಗಿ ಬದುಕಿನಲ್ಲಿ ಮದ್ಯ ಪ್ರವೇಶ ಮಾಡುವಂತಹ ಅನಾಗರೀಕ ಸಂಸ್ಕೃತಿ ದೇಶದಲ್ಲಿ ಅಲಿಖಿತವಾಗಿ ಜಾರಿಯಲ್ಲಿದೆ. ಬಿಜೆಪಿ ಸಂಘ ಪರಿವಾರದ ವಿರುದ್ಧವಾಗಿರುವವರ ಮೇಲೆ ದಾಳಿ, ದೌರ್ಜನ್ಯ ಮೀತಿ ಮೀರಿದೆ. ಕರ್ನಾಟಕದಲ್ಲಿಯೂ ಮುಖ್ಯವಾಗಿ ಕರಾವಳಿ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಕ್ಷುಲ್ಲಕ ವಿಚಾರಗಳನ್ನು ಭಾವನಾತ್ಮಕವಾಗಿ ಕೆರಳಿಸಿ ಮತೀಯ ಸಂಘರ್ಷಕ್ಕೆ ಎಣೆ ಮಾಡಿಕೊಡುವಲ್ಲಿ ಬಿಜೆಪಿ ಜನ ಪ್ರತಿನಿಧಿಗಳು ನಿರತರಾಗಿದ್ದಾರೆ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಉಳ್ಳಾಲದ ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಇಡೀ ಜಿಲ್ಲೆಗೆ ಬೆಂಕಿ ಹಚ್ಚುವ ಬೆದರಿಕೆಯೊಡ್ಡಿದ್ದರು. ಮತ್ತೊಂದೆಡೆ ಉತ್ತರಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆಯ ನೇತೃತ್ವದಲ್ಲಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವುದು ಬಿಜೆಪಿಯಿಂದ ಈ ರಾಜ್ಯಕ್ಕೆ ನೆಮ್ಮದಿ ಇಲ್ಲ. ಜನರ ನೆಮ್ಮದಿಯನ್ನು ಭಾವನಾತ್ಮಕವಾಗಿ ಕೆರಳಿಸಿ ಕೋಮು ಸಂಘರ್ಷಕ್ಕೆ ಎಡೆ ಮಾಡಿ ರಾಜಕೀಯ ಬೇಳೆ ಬೇಯಿಸುವ ಬಿಜೆಪಿಯನ್ನು ಮೇ.12ರ ಚುನಾವಣೆಯಲ್ಲಿ ಜನತೆ ತಿರಸ್ಕರಿಸಬೇಕಾಗಿದೆ.
ಮಹಿಳೆಯನ್ನು ಮಾತೆ, ದೇವತೆ ಎಂದೇಳುವ ಬಿಜೆಪಿಗರು ಕಥುವಾ ಮತ್ತು ಉನ್ನಾವಿನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲಿನ ಬರ್ಬರ ಹತ್ಯಾಚಾರದ ಬೀಕರ ಪ್ರಕರಣಗಳಲ್ಲಿ ಬಿಜೆಪಿಯ ಶಾಸಕ, ಮಂತ್ರಿಗಳ ಪಾತ್ರ ಮತ್ತು ಅಪರಾಧಿಗಳ ರಕ್ಷಣೆಗೆ ಬಿಜೆಪಿ ಸರ್ಕಾರಗಳ ಪ್ರಯತ್ನ ಮಹಿಳೆಯರ ಬಗೆಗಿನ ಬಿಜೆಪಿಯ ಧೋರಣೆಯನ್ನು ಬಹಿರಂಗಪಡಿಸಿದೆ. ದಲಿತರ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಗುಜರಾತಿನ ಊನ ಪ್ರಕರಣದಿಂದಿಡಿದು ದೇಶಾದ್ಯಂತ ಸಾವಿರಾರು ಪ್ರಕರಣಗಳಲ್ಲಿ ದಾಳಿ ದೌರ್ಜನ್ಯ ನಡೆಸಲಾಗಿದೆ. ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಮೀಸಲಾತಿಯನ್ನು ರದ್ದು ಮಾಡಲಾಗಿದೆ. ಈ ರೀತಿಯಾಗಿ ಬಿಜೆಪಿ ಆಡಳಿತ ಸರ್ವಾಧಿಕಾರಿ ದೋರಣೆಯ ಪ್ರತಿಬಿಂಬವಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕದ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಸೌಹಾರ್ದ ಕರ್ನಾಟಕ ಉಳಿಸಲು, ಜನ ವಿರೋಧಿ ನೀತಿಗಳನ್ನು ಹಿಮ್ಮಟ್ಟಿಸಲು ಬಿಜೆಪಿ ಪಕ್ಷವನ್ನು ಸೋಲಿಸಬೇಕೆಂದು ತಾಲೂಕಿನ ಜನತೆಗೆ ಕರೆ ನೀಡುತ್ತಾ ಜಾತ್ಯಾತೀತ ನಿಲುವಿನ ಪ್ರತಿಪಾದಕ. ಕಾಂಗ್ರೆಸ್ ಅಭ್ಯರ್ಥಿ ಕೆ.ವಸಂತ ಬಂಗೇರ ಅವರನ್ನು ಬೆಂಬಲಿಸಬೇಕೆಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ತಾಲೂಕಿನ ಜನತೆಯನ್ನು ವಿನಂತಿಸುತ್ತದೆ
ಪತ್ರಿಕಾ ಗೋಷ್ಠಿಯಲ್ಲಿ ಶೇಖರ್ ಎಲ್. ವಸಂತ ನಡ, ರೋಹಿಣಿ ಪೆರಾಡಿ, ಸುಕನ್ಯಾ ಹೆಚ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.