ಮೇ.18 ರಂದು ಉಜಿರೆ ಶ್ರೀ.ಧ.ಮಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ.

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯವು ಅಂತರಾಷ್ಟ್ರೀಯ ಮಟ್ಟದಲ್ಲಿ ರಿಸೆಂಟ್ ಟ್ರೆಂಡ್ಸ್ ಇನ್ ಟೆಕ್ನಾಲಜಿ(ICRTT 2K18) ಅಂತರಾಷ್ಟ್ರೀಯ ಸಂಶೋಧನ ಸಮ್ಮೇಳನವನ್ನು ಮೇ.18 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಡಾ.ಕೆ.ಸುರೇಶ್ ಮೇ.10 ರಂದು ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಈ ಅಂತರಾಷ್ಟ್ರೀಯ ಸಂಶೋಧನ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಪ್ರತಿಷ್ಠಿತ ಕುವೆಂಪು ವಿಶ್ವ ವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ| ಚಿದಾನಂದ ಗೌಡ ರವರು ಅಂತರಾಷ್ಟ್ರೀಯ ಸಮ್ಮೇಳನದ ಮುಖ್ಯ ಅತಿಥಿಗಳಾಗಿರುತ್ತಾರೆ. ಸಮ್ಮೇಳನದ ಮುಖ್ಯ ಟಿಪ್ಪಣಿಯನ್ನು ಪ್ರೊ| ಮಹಾದೇವ ಪ್ರಸನ್ನ, ಐ.ಟಿ.ಐ ಧಾರವಾಡ ಇವರು ನಡೆಸಿಕೊಡುತ್ತಾರೆ.
ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಬಿ.ಯಶೋವರ್ಮ ಹಾಗೂ ಎಸ್.ಡಿ.ಎಮ್ ಐಟಿಐ ಪ್ರಾಂಶುಪಾಲರಾದ ಡಾ| ಕೆ.ಸುರೇಶ್ ಇವರು ಉದ್ಘಾಟನೆಯಲ್ಲಿ ಉಪಸ್ಥಿತರಿರುತ್ತಾರೆ.
ಪಧವೀಧರರಿಗೆ ಪ್ರಾಧ್ಯಾಪಕರಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ತಮ್ಮ ಜ್ಞಾನ ಭಂಡಾರ ಮತ್ತು ನೈಜ ಸಂಶೋಧನಾ ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಇದು ಒಂದು ಅಪರೂಪದ ವೇದಿಕೆಯಾಗಿದೆ ಎಂದು ಕಾರ್ಯಕ್ರಮದ ವಿವರಗಳನ್ನು ವಿವರಿಸಿದರು.

ಹಲವಾರು ದೇಶ ವಿದೇಶಗಳಿಂದ ಸಂಶೋಧನೆಯ 150 ಪತ್ರಿಕೆಗಳನ್ನು ಸ್ವೀಕರಿಸಲಾಗಿದೆ. ಸುಮಾರು 450ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ.
ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ| ಧರ್ಮಣ್ಣ ಎಲ್. ಸಂಚಾಲಕರಾಗಿ, ಪ್ರೋ| ಶ್ವೇತಾ ಎಸ್.ವಿ ಸಂಯೋಜಕರಾಗಿ ಕಾರ್ಯ ನಿರ್ವಹಿಸುವರು. ಭೋದಕ ಹಾಗೂ ಬೋದಕೇತರ ಸಿಬ್ಬಂದಿ ವರ್ಗದವರು ಈ ಅಂತರಾಷ್ಟ್ರೀಯ ಸಮ್ಮೇಳನದ ಯಶಸ್ಸಿಗೆ ಸಹಕರಿಸುವರು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮನೋಜ್.ಟಿ ಗಡಿಯಾರ, ಡಾ| ಧರ್ಮಣ್ಣ ಎಲ್, ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.