ಡಿ.ಎಸ್.ಎಸ್(ರಾಷ್ಟ್ರೀಯವಾದ) ಸಂಘಟನೆ ಹರೀಶ್ ಪೂಂಜಗೆ ಬೆಂಬಲ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಧರ್ಮ ಸಂಘರ್ಷ ಸಮಿತಿ (ರಾಷ್ಟ್ರೀಯವಾದ) ಡಿ.ಎಸ್.ಎಸ್ ಸೋಷಿಯಲ್ ಮೀಡಿಯಾ ಸಂಘಟನೆಯು ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹರೀಶ್ ಪೂಂಜ ರಿಗೆ ಬೆಂಬಲಿಸಲಿದೆ ಎಂದು ಮೇ.9 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಸಂಘಟನೆಯ ಅನಂತ ಮುಂಡಾಜೆ ಹೇಳಿದರು.
ಅಂಬೇಡ್ಕರ್ ಚಿಂತನೆಗೆ ಪೂರಕವಾಗಿ ಸಮಾಜದಲ್ಲಿನ ಜಾತಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಉಪೇಕ್ಷಿತ ಬಂಧುಗಳ ಮನಸ್ಸಿನಾಳದಲ್ಲಿ ಅಡರಿಕೊಂಡಿರುವ ಸಂಕುಚಿತ ಮನೋಭಾವನೆಯನ್ನು ನಾಶಗೊಳಿಸಲು ಮತ್ತು ದಲಿತ ಬಂಧುಗಳಲ್ಲಿ ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಲು ಸಂಕಲ್ಪ ತೊಟ್ಟ ಸಂಘಟನೆಯೇ ಡಿ.ಎಸ್.ಎಸ್ (ರಾಷ್ಟ್ರೀಯವಾದ) ಧರ್ಮ ಸಂಘರ್ಷ ಸಮಿತಿ ಎಂಬುದು ಜಾಗೃತ ಉಪಕ್ಷಿತ ಬಂಧುಗಳ ಒಂದು ಸೋಷಿಯಲ್ ಮೀಡಿಯಾ ಸಂಘಟನೆ.
ಹರೀಶ್ ಪೂಂಜ ಇವರು ದಲಿತರ ಏಳಿಗೆಗೆ ಶ್ರಮಿಸುವ ಭರವಸೆ ನೀಡಿದ್ದು ಅತ್ಯಂತ ವೇಗವಾಗಿ ಸ್ಪಂದಿಸುವ ಗುಣ ಇರುವುದರಿಂದ ನಾವು ದಲಿತರು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಈ ಹಿಂದೆ ದಲತ ಬಂಧುಗಳೇ ನಿರ್ವಹಿಸುವ ದೈವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡಿರುವ ಹರೀಶ್ ಪೂಂಜ ಪಿಲಿಚಾಮುಂಡಿ ಕಲ್ಲಿನ ದೈವ ಸಾನಿಧ್ಯದಲ್ಲಿ ಮತಾಂಧರು ಅಪವಿತ್ರ ಗೊಳಿಸಿದಾಗ ಗಟ್ಟಿ ಧ್ವನಿಯಲ್ಲಿ ವಿರೋಧಿಸಿದ್ದು ಹರೀಶ್ ಪೂಂಜ ಮಾತ್ರ. ದಲಿತರು ದೈವಾರಾಧನೆಯ ತುಳುನಾಡ ಸಂಸ್ಕೃತಿ ಆಚಾರ ವಿಚಾರಗಳ ಪ್ರಮುಖ ಕೊಂಡಿ ಆಗಿರುವುದರಿಂದ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ನಿಂದನೆಯು ದಲಿತರ ನಿಂದನೇಯೇ ಆಗಿದೆ. ಇಂತಹ ಸಂದರ್ಭದಲ್ಲಿ ಸೂಕ್ತವಾಗಿ ಮತ್ತು ವೇಗವಾಗಿ ಸ್ಪಂದಿಸುವ ನಾಯಕ ಹರೀಶ್ ಪೂಂಜ ದಲಿತರಿಗಾಗಿ, ದಲಿತರು ವಾಸಿಸುವ ಕಾಲನಿ, ವಸತಿ ಪ್ರದೇಶಗಳ ಅಭಿವೃದ್ಧಿಯ ಭರವಸೆ ನೀಡುವ ನಾಯಕನಿಗೆ ತಾಲೂಕಿನ ಎಲ್ಲಾ ದಲಿತ ಬಂಧುಗಳ ಸಹಕರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಪ್ಪ ಸಿ. ಪುತ್ರಬೈಲು, ಹರೀಶ ನಾವೂರು, ಲಾಯಿಲ ಗ್ರಾ.ಪಂ. ಸದಸ್ಯ ಮೋಹನದಾಸ, ರವಿ ಆರ್. ಮುಂಡಾಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.