ಬಾಲಕಿಯ ಅಪಹರಿಸಿ ದೌರ್ಜನ್ಯ: ಆರೋಪಿ ವೆಂಕಟೇಶ್ ಬಂಧನ

Advt_NewsUnder_1
Advt_NewsUnder_1
Advt_NewsUnder_1

ಕಣಿಯೂರು : ಬಾಲಕಿಯೋರ್ವಳನ್ನು ಅಪಹರಿಸಿ, ಆಕೆಯನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಮಹತ್ವದ ಸುಳಿವಿಲ್ಲದೆ ಕ್ಲಿಷ್ಟಕರದಿಂದ ಕೂಡಿದ್ದ ಪ್ರಕರಣವನ್ನು ಬೇಧಿಸುವ ಮೂಲಕ ಉಪ್ಪಿನಂಗಡಿ ಪೊಲೀಸರು ಮತ್ತೊಮ್ಮೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಹಾವೇರಿ ಮೂಲದ ವೆಂಕಟೇಶ್ ವಡ್ಡಾರ (35) ಬಂಧಿತ ಆರೋಪಿ. ಈತ ಪತ್ನಿ ಹಾಗೂ ಮಕ್ಕಳೊಂದಿಗೆ ಕಣಿಯೂರು ಗ್ರಾಮದ ವ್ಯಕ್ತಿಯೋರ್ವರ ಮನೆಯಲ್ಲಿ ತೋಟದ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಅದೇ ಪರಿಸರದ 17 ರ ಬಾಲಕಿಯೋರ್ವಳು ಕೆಲಸಕ್ಕೆ ಬರುತ್ತಿದ್ದಳು. ಈ ಬಾಲಕಿಯಲ್ಲಿ ಸ್ನೇಹ ಬೆಳಸಿಕೊಂಡಿದ್ದ ವೆಂಕಟೇಶ್ ತನ್ನ ಸಣ್ಣ ಮಗುವೊಂದನ್ನು ಕರೆದುಕೊಂಡು ಆ ಬಾಲಕಿಯೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಉಪ್ಪಿನಂಗಡಿ ಪೊಲೀಸರು ಸೋಮವಾರಪೇಟೆಯಲ್ಲಿ ಕಾಫಿ ತೋಟವೊಂದರಲ್ಲಿ ಕೆಲಸಕ್ಕೆ ಸೇರಿದ ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕ್ರಿಮಿನಲ್ ಮೈಂಡ್!: ವೆಂಕಟೇಶ್ ವಡ್ಡಾರನ ಮೊದಲ ಪತ್ನಿ ತೀರಿ ಹೋಗಿದ್ದು, ಅದರಲ್ಲಿ ಒಂದು ಮಗು ಪಡೆದಿದ್ದ. ಬಳಿಕ ಮತ್ತೊಂದು ಮದುವೆಯಾಗಿ ಅದರಲ್ಲಿ ನಾಲ್ಕು ಮಕ್ಕಳನ್ನು ಪಡೆದಿದ್ದ. ಐದು ಮಕ್ಕಳ ಪೈಕಿ ಓರ್ವಳನ್ನು ಕಳೆದ ಏಳು ತಿಂಗಳ ಹಿಂದೆ ತನ್ನ ಪತ್ನಿಯ ವಿರೋಧದ ಮಧ್ಯೆಯೇ ಹಾವೇರಿಯಲ್ಲಿ ಯಾರಿಗೋ ಕೊಟ್ಟು ಬಂದಿದ್ದ. ಈಗ ಬಾಲಕಿಯೊಂದಿಗೆ ಪರಾರಿಯಾಗುವ ಸಮಯದಲ್ಲಿ ತನ್ನ ಸಣ್ಣ ಮಗುವೊಂದನ್ನು ಕರೆದುಕೊಂಡು ಹೋಗಿದ್ದಲ್ಲದೇ, ಸೋಮವಾರಪೇಟೆಯಲ್ಲಿ ತಾವು ಪತಿ, ಪತ್ನಿ, ಮಕ್ಕಳು ಎಂದು ನಂಬಿಸಿ, ಕೆಲಸ ಹಾಗೂ ರೂಂ ಪಡೆದುಕೊಂಡಿದ್ದ. ಅಲ್ಲದೇ ಮೊಬೈಲ್ ಫೋನ್ ಕೂಡಾ ಈತ ಬಳಸುವುದನ್ನು ಬಿಟ್ಟಿದ್ದ. ಇಷ್ಟೊಂದು ಚಾಕಚಕ್ಯತೆಯಿಂದ ತನ್ನ ಕ್ರಿಮಿನಲ್ ಬುದ್ಧಿ ಉಪಯೋಗಿಸಿ ಪರಾರಿಯಾಗಿದ್ದನಾದರೂ, ಯಾವುದೇ ಮಹತ್ವದ ಸುಳಿವಿಲ್ಲದೆ ಕ್ಲಿಷ್ಟಕರವಾದ ಈ ಪ್ರಕರಣವನ್ನು ಬೇಧಿಸಿದ ಉಪ್ಪಿನಂಗಡಿ ಪೊಲೀಸರು ಈತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾನವೀಯತೆ ಮೆರೆದಿದ್ದ ಎಸ್.ಐ: ವೆಂಕಟೇಶನ ಪತ್ನಿಯ ಮನವಿಯಂತೆ ಉಪ್ಪಿನಂಗಡಿ ಎಸ್.ಐಯವರು ಹಾವೇರಿಯಲ್ಲಿ ಯಾರದೋ ವಶದಲ್ಲಿದ್ದ ಮಗುವನ್ನು ತರಿಸ, ಆತನ ಪತ್ನಿಗೆ ಕೊಟ್ಟಿದ್ದಲ್ಲದೇ, ಬಾಲಕಿಯೊಂದಿಗೆ ಪರಾರಿಯಾಗುವ ಸಂದರ್ಭ ಕರೆದುಕೊಂಡು ಹೋಗಿದ್ದ ಮಗುವನ್ನು ಕೂಡಾ ಪತ್ನಿಯ ವಶಕ್ಕೆ ಒಪ್ಪಿಸಿದ್ದಾರೆ. ಉಪ್ಪಿನಂಗಡಿ ಎಸ್.ಐ ನಂದಕುಮಾರ್‌ರವರ ಮಾನವೀಯ ಕಾಳಜಿಯಿಂದಾಗಿ ಕಳೆದುಕೊಂಡಿದ್ದ ತನ್ನಿಬ್ಬರು ಮಕ್ಕಳು ಹೆತ್ತಬ್ಬೆಗೆ ಸಿಗುವಂತಾಗಿದೆ.

ಅಪ್ರಾಪ್ತ ಬಾಲಕಿಯನ್ನು ಪ್ರಜ್ಞಾ ಸಲಹಾ ಕೇಂದ್ರಕ್ಕೆ ಕಳುಹಿಸಲಾಗಿದ್ದು ಫೋಕ್ಸೋ, ಅತ್ಯಾಚಾರ ಹಾಗೂ ಅಪಹರಣ ಪ್ರಕರಣ ದಾಖಲಿಸಲ್ಪಟ್ಟ ವೆಂಕಟೇಶ ವಡ್ಡಾರನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ನಂದಕುಮಾರ್‌ರವರ ನೇತೃತ್ವದಲ್ಲಿ ನಡೆದ ಈ ಕಾರ್‍ಯಾಚರಣೆಯಲ್ಲಿ ಪೊಲೀಸರಾದ ಹರೀಶ್ಚಂದ್ರ, ಪ್ರವೀಣ್ ರೈ, ಇರ್ಷಾದ್, ಜೀಪು ಚಾಲಕ ನಾರಾಯಣ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.