ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆಯಲ್ಲಿ ಜೆಡಿಎಸ್ ರೋಡ್‌ಶೋ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜನತಾದಳ (ಜಾತ್ಯತೀತ) ಪಕ್ಷದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆ ಅವರ ಪರವಾಗಿ ಮೇ. 8 ರಂದು ಬೆಳ್ತಂಗಡಿ, ಉಜಿರೆ, ಮತ್ತು ಗುರುವಾಯನಕೆರೆ ಪೇಟೆಯಲ್ಲಿ ರೋಡ್ ಶೋ ನಡೆಸಿ ಮತಯಾಚನೆ ನಡೆಯಿತು. ಅಭ್ಯರ್ಥಿ ಸುಮತಿ ಎಸ್ ಹೆಗ್ಡೆ ಅವರ ಪುತ್ರಿ ಚಲನ ಚಿತ್ರ ನಟಿಯೂ ಆಗಿರುವ ಸ್ಥಳೀಯ ಚಾನೆಲ್ ನ ಕಾರ್ಯಕ್ರಮ ನಿರೂಪಕಿ ಸೌಜನ್ಯಾ ಹೆಗ್ಡೆ ರೋಡ್‌ಶೋದಲ್ಲಿ ವಿಶೇಷ ಆಕರ್ಷಣೆಯಾಗಿದ್ದರು.
ಪಕ್ಷದ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್‌ಕುಂಞಿ, ಮಾಜಿ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಚುನಾವಣಾ ಉಸ್ತುವಾರಿ ಎಂ.ಬಿ ಸದಾಶಿವ ಸುಳ್ಯ, ರಾಜ್ಯ ಮಹಿಳಾ ಜನತಾದಳ ಉಪಾಧ್ಯಕ್ಷೆ ರೇಖಾ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ನೇತ್ರಾವತಿ ಹಾಸನ, ತಾಲೂಕು ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್, ಜಿಲ್ಲಾ ಯುವ ವಿಭಾಗದ ಅಧ್ಯಕ್ಷ ಅಕ್ಷಿತ್ ಸುವರ್ಣ, ಉಪಾಧ್ಯಕ್ಷ ಮಧುಸೂದನ ಗೌಡ, ತಾ. ಪ್ರ. ಕಾರ್ಯದರ್ಶಿ ರಾಮ ಆಚಾರಿ, ಸಂಘಟನಾ ಕಾರ್ಯದರ್ಶಿಗಳಾದ ಪ್ರಕಾಶ್ ಹೆಬ್ಬಾರ್ ಮತ್ತು ಎಚ್.ಎನ್ ನಾಗರಾಜ್, ತಾ. ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂದೇವಿ, ಪಕ್ಷದ ಪ್ರಮುಖರಾದ ಆಬಿದ್ ಆಲಿ ಉಜಿರೆ, ಅನೀಸ್ ಉಜಿರೆ, ಶ್ರೀನಿವಾಸ ಗೌಡ ಪಟ್ರಮೆ, ಶಾಹಿದ್ ಪಾದೆ, ವೀಣಾ ಶೆಟ್ಟಿ ಮಂಗಳೂರು ಮತ್ತು ಲೀಲಾವತಿ ಮಂಗಳೂರು, ದಿನೇಶ್ ಆಚಾರ್ಯ ಮುಂಡಾಜೆ, ಅಭ್ಯರ್ಥಿಯ ಪತಿ, ಅಬಕಾರಿ ಇಲಾಖೆ ನಿವೃತ ಸುಪರಿಂಟೆಂಟ್ ಸದಾಶಿವ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.