ಈ ಬಾರಿ ಎಂಡೋ ಸಂತ್ರಸ್ತ ಕುಟುಂಬಗಳ ಬೆಂಬಲ ಹರೀಶ್ ಪೂಂಜರಿಗೆ : ರೇವತಿ ತಾಮ್ಹನ್‌ಕರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಎಂಡೋ ಸಂತ್ರಸ್ತರು ರಾಜ್ಯದಲ್ಲಿ ಬರ್ಬರ ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲಿ ಎಂಡೋ ಸಂತ್ರಸ್ತರಿಗಾಗಿ ಮಿಡಿಯುವ ಜನ ಪ್ರತಿನಿಧಿಗಳಿಲ್ಲ. ಬೆಳ್ತಂಗಡಿಯಲ್ಲಿ ಸಾವಿರದ ನೂರಕ್ಕಿಂತ ಹೆಚ್ಚು ಎಂಡೋ ಸಂತ್ರಸ್ತ ಕುಟುಂಬಗಳಿವೆ. ತಾಲೂಕಿನಲ್ಲಿ ಈ ವರ್ಷ ಎಂಡೋ ಸಂತ್ರಸ್ತರು ಹರೀಶ್ ಪೂಂಜರನ್ನು ಬೆಂಬಲಿಸಲಿದ್ದೇವೆ. ಎಂದು ಮೇ.8 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆ ರೇವತಿ ತಾಮ್ಹನ್‌ಕರ್ ತಿಳಿಸಿದರು.
“ನಾವು ಪ್ರೀಡಂ ಪಾರ್ಕಿನಲ್ಲಿ ನಡೆಸಿದ ಪ್ರತಿಭಟನೆ ಮತ್ತು ಕೊಕ್ಕಡದಲ್ಲಿ ನಡೆಸಿದ ಅಮರಣಾಂತ ಉಪವಾಸದಲ್ಲಿ ಹರೀಶ್ ಪೂಂಜರವರು ಭಾಗವಹಿಸಿ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ರಾಜ್ಯದ ಬೇರೆ ಬೇರೆ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಸಂತ್ರಸ್ತರ ಪರವಾಗಿ ಪೂಂಜರವರು ಅನಿರ್ವಾಯವೆಂಬುದು ನಮ್ಮ ಭಾವನೆ ಹಾಗಾಗಿ ನಮ್ಮ ಕುಟುಂಬಗಳು ಈ ಚುನಾವಣೆಯಲ್ಲಿ ಹರೀಶ್ ಪೂಂಜಾರವರನ್ನು ಬೆಂಬಲಿಸಲಿದ್ದೇವೆ.
ಹರೀಶ್ ಪೂಂಜ ತನ್ನ ತಾಲೂಕು ಪ್ರಣಾಳಿಕೆಯಲ್ಲೂ ಎಂಡೋ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಡುವ ಕುರಿತು ಉಲ್ಲೇಖಿಸಿರುತ್ತಾರೆ. ಮೇ.5ರಂದು ಮಂಗಳೂರಿನ ಪ್ರಧಾನಿಯವರ ಕಾರ್ಯಕ್ರಮದಲ್ಲೂ ಜಿಲ್ಲೆಯ ಎಂಡೋ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಮಾತುಗಳನ್ನು ಆಡಿರುವುದರಿಂದ ಪೂಂಜರ ಮೇಲೆ ಭರವಸೆಯಿಟ್ಟು ಪೂಂಜರಿಗೆ ಮತ ನೀಡಲಿದ್ದೇವೆ.
ತಾಲೂಕಿನ ಶಾಸಕ ಕೆ.ವಸಂತ ಬಂಗೇರ ಎಂಡೋ ಸಂತ್ರಸ್ತರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಅಧಿವೇಶನದಲ್ಲಿ ಎಂಡೋ ಸಂತ್ರಸ್ತರಿಗೆ ನ್ಯಾಯ ದೊರಕುವ ವೇಳೆಗೆ ಎಂಡೋ ಸಲ್ಫಾನ್‌ನಿಂದಾಗಿ ಕಣ್ಣುಗಳನ್ನು ಕಳೆದುಕೊಂಡಿರುವ ಎಂಡೋ ಪೀಡಿತರ ನಾಯಕನಾಗಿರುವ ಶ್ರೀಧರ ಗೌಡ ಕೆಂಗುಡೇಲು ನಕಲಿ ಎಂಡೋ ಸಂತ್ರಸ್ತನೆಂದು ಹೇಳುವ ಮೂಲಕ ಅವಮಾನ ಮತ್ತು ಎಲ್ಲಾ ಎಂಡೋ ಸಂತ್ರಸ್ತರಿಗೆ ಅನ್ಯಾಯವನ್ನು ಮಾಡಿದ್ದಾರೆ. ಆದುದರಿಂದ ನಮ್ಮ ಆಯ್ಕೆ ಹರೀಶ್ ಪೂಂಜ ಆಗಿರುತ್ತಾರೆ.
ಮಾಜಿ ಸಚಿವರಾಗಿರುವ ಗಂಗಾಧರ ಗೌಡರು ಎಂಡೋ ಸಂತ್ರಸ್ತರ ಇಷ್ಟೊಂದು ಸಮಸ್ಯೆಗಳಿಗೆ ಕಾರಣರಾಗಿದ್ದಾರೆ. ಏಕೆಂದರೆ ಇವರ ಶಾಸಕತ್ವದ ಅವಧಿಯಲ್ಲೇ ಎಂಡೋ ಸಲ್ಫಾನ್‌ನ ವೈಮಾನಿಕ ಸಿಂಪಡಣೆ ನಡೆಸಿದಾಗ ಧ್ವನಿ ಎತ್ತದೆ ಇಷ್ಟು ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ 112 ಎಂಡೋ ಸಂತ್ರಸ್ತರು ಮೃತ ಪಟ್ಟಿದ್ದಾರೆ. ನಾಲ್ಕೈದು ಕುಟುಂಬಗಳು ಆತ್ಯಹತ್ಯೆ ಮಾಡಿವೆ. ಎಂಡೋ ಸಂತ್ರಸ್ತರ ಪಾಲಿಗೆ ಮಾಜಿ ಸಚಿವರು ಇವೆಲ್ಲಾ ಕಾರಣಗಳಿಂದ ಕೊಲೆಗಡುಕರಾಗಿ ಕಾಣುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ನಾವು ಹರೀಶ್ ಪೂಂಜರವರನ್ನು ಬೆಂಬಲಿಸುತ್ತೇವೆ ಮತ್ತು ತಾಲೂಕಿನ ಎಲ್ಲಾ ಜನತೆಯಲ್ಲಿ ಎಂಡೋ ಸಂತ್ರಸ್ತರ ಬದುಕಿಗಾಗಿ ಹರೀಶ್ ಪೂಂಜರಿಗೆ ಮತ ನೀಡಲು ವಿನಂತಿಸುತ್ತೇವೆ” ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಆಲ್ಬರ್ಟ್ ಮಿನೇಜಸ್ ಕೊಕ್ಕಡ, ರಾಮಣ್ಣ ಗೌಡ ಕೇಚೋಡಿ, ಶ್ರೀಮತಿ ಕಮಲ ಕನ್ಯಾಡಿ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆಂಗುಡೇಲು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.