HomePage_Banner_
HomePage_Banner_
HomePage_Banner_

ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ- ಕೋಟ ಶ್ರೀನಿವಾಸ ಪೂಜಾರಿ.

ಕೊಕ್ಕಡ: ರಾಜ್ಯದಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯರ ನೇತೃತ್ವದ ಸರಕಾರವು ಭ್ರಷ್ಟಾಚಾರದ ದುರಾಡಳಿತವನ್ನು ನಡೆಸಿದ್ದು ರಾಜ್ಯದ ಜನರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಕೊನೆಗಾಣಿಸಬೇಕಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.
ಕೊಕ್ಕಡದ ಜೋಡು ಮಾರ್ಗದಲ್ಲಿ ಇತ್ತೀಚೆಗೆ ನಡೆದ ಬೆಳ್ತಂಗಡಿ ತಾಲೂಕಿನ ಬಿಜೆಪಿ ಪಕ್ಷದ ಅಭ್ಯರ್ಥಿಯ ಪರ ಮತಯಾಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿಯ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಜಾರಿಗೆ ತಂದ 94 ಸಿ ಯಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಇಂದು ಕಾಂಗ್ರೆಸ್ ಪಕ್ಷದವರು ತಮ್ಮ ಸಾಧನೆಯೆಂದು ಕೊಚ್ಚಿಕೊಳ್ಳುತ್ತಿದ್ದಾರೆ. ದೇಶದ ಗೃಹ ಮಂತ್ರಿಯವರಿಂದಲೇ ಸೂಚಿತವಾದ ವ್ಯಕ್ತಿ ಇಂದು ದೇಶದ ಪ್ರಧಾನಮಂತ್ರಿ ಮೋದಿ ಯವರಾಗಿದ್ದು ದೇಶದ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ್ದಾರೆ. ದೇಶದ ಗೃಹ ಮಂತ್ರಿಯವರೇ ಖುದ್ದಾಗಿ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಪಕ್ಷದ ಯುವ ಅಭ್ಯರ್ಥಿ ಹರೀಶ್ ಪೂಂಜರವರು ನಾಮಪತ್ರ ಹಾಕುವ ಸಮಯದಲ್ಲಿ ಜೊತೆಯಲ್ಲಿದ್ದು ರಾಜ್ಯದಲ್ಲಿಯೂ ಬಿಜೆಪಿ ಆಡಳಿತವನ್ನು ಪ್ರತಿನಿಧಿಸಲು ನಮ್ಮ ಅಭ್ಯರ್ಥಿಯನ್ನು ಪ್ರೋತ್ಸಾಹಿಸುವ ಮೂಲಕ ಹಸಿರು ನಿಶಾನೆ ತೋರಿದ್ದಾರೆ . ಈ ಬಾರಿಯ ಚುನಾವಣೆಯಲ್ಲಿ ಹರೀಶ್ ಪೂಂಜ ರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವ ಮಹತ್ತರ ಕಾರ್ಯವನ್ನು ತಾಲೂಕಿನ ಪ್ರಜ್ಞಾವಂತ ಮತದಾರರು ಮಾಡಬೇಕಾಗಿದೆ ಎಂದರು.
ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ ತಾಲೂಕಿನ ಅಭಿವೃದ್ದಿಯ ದೃಷ್ಟಿಯಲ್ಲಿ ಬಾಜಪ ಪಕ್ಷದ ಅಭ್ಯರ್ಥಿಯನ್ನು ಜನರು ಆರಿಸಿ ಕಳುಹಿಸಿದಲ್ಲಿ ತಾಲೂಕಿನ ಎಲ್ಲ ವರ್ಗದ ಜನರ ಕಷ್ಟ ಸುಖಗಳಿಗೆ ಉತ್ತಮ ಸ್ಪಂದನೆ ದೊರೆಯುವಂತಾಗುತ್ತದೆ. ಪ್ರಧಾನಿ ಮೋದಿಜೀ ಯವರ ನೇತೃತ್ವದ ಕೇಂದ್ರಸರಕಾರದ ಜನಪರ ಕಾರ್ಯಕ್ರಮಗಳು ರಾಜ್ಯದಲ್ಲೂ ಬಿಜೆಪಿ ಯ ಅಲೆಯನ್ನು ಹುಟ್ಟು ಹಾಕುತ್ತಿದೆ ಎಂದರು.
ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮಾತನಾಡಿ ,ನಾನು ಮಾಡಿರುವ ಸಾರ್ವಜನಿಕ ಕೆಲಸ, ಕಾರ್ಯಗಳು ಮತ್ತು ಪಕ್ಷದ ಕಾರ್ಯಕ್ರಮಗಳನ್ನು ಗುರುತಿಸಿ ಬಿಜೆಪಿ ಪಕ್ಷವು ೩೫ ವರ್ಷ ಪ್ರಾಯದ ನನಗೆ ಸೀಟು ನೀಡಿ , ತಾಲೂಕಿನ ಜನರ ಸೇವೆಯನ್ನು ಮಾಡುವ ಅವಕಾಶವನ್ನು ಕಲ್ಪಿಸಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ನ್ಯೂನತೆಗಳನ್ನು , ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸಲು ಈ ಬಾರಿ ಜನರು ಬಿಜೆಪಿಗೆ ಅಧಿಕಾರ ನೀಡಿ ತನ್ನನ್ನು ಗೆಲ್ಲಿಸಿದಲ್ಲಿ ದಿನದ 24 ಗಂಟೆಯೂ ಈ ಕ್ಷೇತ್ರದ ಮತದಾರರ ಕಷ್ಟಗಳಲ್ಲಿ ನಾನೂ ಭಾಗಿಯಾಗುತ್ತೇನೆ. ಈಗಾಗಲೇ ಪ್ರಾಯದಲ್ಲಿ ಹಿರಿಯರಾಗಿರುವ ಇತರ ಪಕ್ಷೀಯರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರೂ , ಹಿರಿಯರಿಗೆ ಗೌರವ ನೀಡಿ ಅದಕ್ಕೆ ಯಾವುದೇ ಪ್ರತ್ಯುತ್ತರವನ್ನು ತಾನು ನೀಡಲು ಮುಂದಾಗಲಾರೆ. ಕೃಷಿ ಮೂಲದ ಕುಟುಂಬದಿಂದ ಬಂದಿರುವ ತಾನು ಪಾರದರ್ಶಕವಾಗಿಯೇ ನನ್ನ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದಾಗಿದೆ. ತಾಲೂಕಿನ ಎಲ್ಲ ಮತದಾರರೂ ಈ ಬಾರಿ ನನಗೆ ಮತ ನೀಡುವ ಮೂಲಕ ಶಾಸಕನಾಗಿ ತಮ್ಮ ಸೇವೆಯನ್ನು ಮಾಡುವ ಅವಕಾಶವನ್ನು ನೀಡಬೇಕು ಎಂದು ಮತದಾರರಲ್ಲಿ ವಿನಂತಿಸಿದರು.
ಬೆಳ್ತಂಗಡಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ , ಝೀ ಕನ್ನಡದ ಕಾಮಿಡಿ ಕಿಲಾಡಿ ನಟರಾದ ಹಿತೇಶ್ ಕಾಪಿನಡ್ಕ, ಅನಿಶ್ , ಧರ್ಮಸ್ಥಳ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ಟಿ.ಎಂ., ಕೊಕ್ಕಡದ ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಪಿ. ನಾರಾಯಣ ಗೌಡ , ಸಿರಿಲ್ ಡಿ ಸೋಜ, ರಾಘವ ಭಂಡಾರಿ  ಉಪಸ್ಥಿತರಿದ್ದರು.

 

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.