HomePage_Banner_
HomePage_Banner_

ಕೊಕ್ಕಡ ಯುವ ಕಾಂಗ್ರೆಸ್ ಕಛೇರಿ ಉದ್ಘಾಟನೆ.

ಕೊಕ್ಕಡ:  ಕೊಕ್ಕಡ ವಲಯದಲ್ಲಿ ಯೂತ್ ಕಾಂಗ್ರೆಸ್ ಘಟಕವು  ರಚನೆಯಾಗಿದ್ದು, ಯೂತ್ ಕಾಂಗ್ರೆಸ್ ನ ನೂತನ ಕಛೇರಿಯನ್ನು ಕೊಕ್ಕಡ ಪೇಟೆಯಲ್ಲಿ  ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಯವರು ಇತ್ತೀಚೆಗೆ ಉದ್ಘಾಟಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಈಗಾಗಲೇ ಜಿಲ್ಲೆಯ ಪ್ರತೀ ಗ್ರಾಮಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಉತ್ಸಾಹದಿಂದ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಸಿದ್ದರಾಮಯ್ಯರ ಆಡಳಿತದ ಸರಕಾರದ ಜನಪರ ಕಾರ್ಯಕ್ರಮಗಳನ್ನು ಗ್ರಾಮದ ಪ್ರತೀ ಮನೆಮನೆಗಳಿಗೂ ತಲುಪಿಸುವ ಹೊಣೆಗಾರಿಕೆಯನ್ನು ಯೂತ್ ಕಾಂಗ್ರೆಸ್ ನ ಕಾರ್ಯಕರ್ತರು ನಿರ್ವಹಿಸಬೇಕು ಎಂದರು. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್ ,ಬೆಳ್ತಂಗಡಿ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಕೊಕ್ಕಡ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಕೀಂ ಎಸ್.ಕೆ, ಕಾರ್ಯದರ್ಶಿ ಹರಿಶ್ಚಂದ್ರ, ಸಂಘಟನಾ ಕಾರ್ಯದರ್ಶಿ ಗಣೇಶ್ ಕಾಶಿ , ಉಪಾಧ್ಯಕ್ಷ ವಿಲ್ಸನ್ ಲೋಬೋ, ಜೊತೆ ಕಾರ್ಯದರ್ಶಿ ಮಸೂದ್ , ಜಸ್ಟಿನ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ನೂತನ ಕಛೇರಿ ಉದ್ಘಾಟಿಸಿದ ಬಳಿಕ ಕೊಕ್ಕಡ ಪೇಟೆಯಿಂದ ಜೋಡು ಮಾರ್ಗದವರೆಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಯುವ ಕಾರ್ಯಕರ್ತರ ಜೊತೆಗೆ ಪಾದಯಾತ್ರೆ ನಡೆಸಿ ಬೆಳ್ತಂಗಡಿ ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ವಸಂತ ಬಂಗೇರರ ಪರ ಮತಯಾಚನೆಯನ್ನು ನಡೆಸಿದರು. ಸಂಜೆ ಜೋಡುಮಾರ್ಗದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಸಭೆ ಯ ನಂತರ ಬೆಳ್ತಂಗಡಿ ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿ ಕೆ. ವಸಂತ ಬಂಗೇರ ಈ ನೂತನ ಕಛೇರಿಗೆ ಭೇಟಿ ನೀಡಿದರು. ಈ ಸಂದರ್ಭ ಜಿ.ಪಂ. ಸದಸ್ಯ ಶಾಹುಲ್ ಕೆ.ಕೆ., ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಕಿಣಿ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ,ಕೊಕ್ಕಡ ಕಾಂಗ್ರೆಸ್ ಘಟಕ ದ ಅಧ್ಯಕ್ಷ ಕಾಶಿ ಅಣ್ಣಪ್ಪ ಗೌಡ , ಕಾರ್ಯದರ್ಶಿ ಜಾರಪ್ಪ ಗೌಡ , ವಿಶ್ವನಾಥ್ ಕೊಲ್ಲಾಜೆ , ತಾಲೂಕು ಎನ್ ಎಸ್ ಯು ಐ ಅಧ್ಯಕ್ಷ ಪವನ್ ಕೊಲ್ಲಾಜೆ , ಕಾಂಗ್ರೆಸ್ ಎಸ್ಸಿಎಸ್ಟಿ ಕೊಕ್ಕಡ ಘಟಕದ ಅಧ್ಯಕ್ಷ ಗಿರೀಶ್ ಶಬರಾಡಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.