ಕೊಕ್ಕಡ ವೈದ್ಯನಾಥೇಶ್ವರ ದೇವಳ ಜಾತ್ರೆ

Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ : ಜಿಲ್ಲೆಯ ಪ್ರಸಿದ್ಧ ಸೀಮೆ ದೇವಸ್ಥಾನವಾಗಿರುವ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಮತ್ತು ವಿಷ್ಣುಮೂರ್ತಿ ದೇವಳದ ಜಾತ್ರಾ ಮಹೋತ್ಸವವು ಮೇ.2 ರಂದು ಧ್ವಜಾರೋಹಣ ಮೂಲಕ ಆರಂಭವಾಗಿದ್ದು ಶುಕ್ರವಾರದಂದು ಸಂಜೆ ಶ್ರೀ ದೇವರುಗಳು ಕೊಕ್ಕಡ ಪೇಟೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಕಟ್ಟೆಪೂಜೆ ನೆರವೇರಿತು.
ಸಂಜೆ 4.00 ಗಂಟೆಗೆ ಶ್ರೀ ದೇವಳದಿಂದ ದೇವರುಗಳು ಮೆರವಣಿಗೆ ಹೊರಟು ಪಟ್ಲಡ್ಕದ ಶ್ರೀ ಗುರುದೇವ ಕಟ್ಟೆ ಮತ್ತು ಜೋಡುಮಾರ್ಗದ ಹರಿಹರ ಕಟ್ಟೆಯಲ್ಲಿ ಕಟ್ಟೆಪೂಜೆಗಳು ಮತ್ತು ಉತ್ಸವಾದಿಗಳು ನಡೆಯಿತು. ನಂತರ ಶ್ರೀ ದೇವಳದಲ್ಲಿ ಮಹಾಪೂಜೆ, ಭೂತಬಲಿಗಳು ನಡೆದವು. ಶ್ರೀದೇವಳದ ಜಾತ್ರಾ ಮಹೋತ್ಸವವು ನೀಲೇಶ್ವರ ಎಡಮನೆ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ರಾವ್, ಸದಸ್ಯರುಗಳಾದ ವಿಠಲ ಗೌಡ ಟಿ., ಶ್ರೀಕಾಂತ ಆಚಾರ್ಯ, ಸುಚಿತ್ರ ಕೊಲ್ಲಾಜೆ, ಬಾಬು ಎಂ.ಕೆ, ರೋಹಿತಾಕ್ಷ ಆಚಾರ್ಯ, ಪದ್ಮ ಟಿ.ಎಂ, ಸೇಸಪ್ಪ ಸಾಲಿಯಾನ್ , ಅರ್ಚಕರಾದ ರಮಾನಂದ ಭಟ್ ಮತ್ತು ಊರಿನ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಶ್ರೀ ದೇವಳದಲ್ಲಿ ಮೇ.7 ರಂದು ಬೆಳಗ್ಗೆ 8.00 ಗಂಟೆಗೆ ಉತ್ಸವ ಹೊರಟು ದರ್ಶನ ಬಲಿ, ಚಂದ್ರಮಂಡಲ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 8 ಕ್ಕೆ ಉತ್ಸವ ಹೊರಟು ಶ್ರೀ ದೇವರುಗಳ ಮಹಾರಥೋತ್ಸವ ನಡೆಯಲಿದೆ. ಜಾತ್ರಾ ಪ್ರಯುಕ್ತ ರಾತ್ರಿ 10.00ರಿಂದ ಶ್ರೀ ಮಂಗಳಾದೇವಿ ಮೇಳದವರಿಂದ ಯಕ್ಷಗಾನ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.