ಗುರಿಪಳ್ಳ ಕ್ರಾಸ್ ಬಳಿ ರಸ್ತೆ ಅಪಘಾತ: ಮಹಿಳೆ ಸಾವು.

ಉಜಿರೆ:  ಗುರಿಪಳ್ಳ ಕ್ರಾಸ್ ಬಳಿ  ಸ್ಕಾರ್ಪಿಯೊ ವಾಹನವೂಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು,  6 ಮಂದಿ ಗಾಯಗೊಂಡ ಘಟನೆ  ಮೇ.6 ರಂದು ಸಂಜೆ ನಡೆದಿದೆ.

ಈ ಘಟನೆಯಲ್ಲಿ ಪಂಜಿಕಲ್ಲು ಕಾಪಿಕಾಡ್ ಮನೆಯ ದೇಜಪ್ಪ ರವರ ಪತ್ನಿ ಸುಮತಿ(30.ವ) ಮೃತಪಟ್ಟಿರುತ್ತಾರೆ. ಕಾರಿನಲ್ಲಿದ್ದ ದೇಜಪ್ಪ, ಪೂವಪ್ಪ, ಭವಿಷ್, ಪೃಥ್ವಿಕ್ ಪ್ರತಿಮಾ, ದಿನೇಶ್, ಗಿರಿಜಾ, ಪ್ರದೀಪ್, ಪ್ರತೀಕ್ಷಾ ಹಾಗೂ ಚಾಲಕ ಶಿವರಾಮ ಇವರುಗಳು ಗಾಯಗೊಂಡಿದ್ದು, ಇವರನ್ನು ಉಜಿರೆ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕಾರ್ಪಿಯೋ ವಾಹನದಲ್ಲಿ ಮಕ್ಕಳು ಸಹಿತ 10 ಮಂದಿ ಮೂಡಿಗೆರೆಯಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬೆಳ್ತಂಗಡಿ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.