ಕ್ರೀಡಾ ಸಾಧಕ ನಿತಿನ್ ಪೂಜಾರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ನೆಟ್ ಬಾಲ್ ಚಾಂಪಿಯನ್ ನಿತಿನ್ ಪೂಜಾರಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಕ್ರೀಡಾಲೋಕಕ್ಕೆ ಹೊಸ ಹೆಸರನ್ನು ಕಲ್ಪಿಸಿಕೊಟ್ಟು,ಹೊಸ ಕ್ರೀಡಾರತ್ನಗಳ ಉದಯಕ್ಕೆ ಕಾರಣ ವಾಗಿರುವಂತದ್ದು. ದೈಹಿಕವಾಗಿ- ಮಾನಸಿಕವಾಗಿ ಸದೃಢತೆ ಉಳ್ಳವನು ಅದೆಂತಹ ಕಠಿಣತೆಗಳಿದ್ದರೂ ಈಜಿ ದಡ ಸೇರಬಲ್ಲ, ಜೊತೆಗೆ ಏಕಾಗ್ರತೆಯ ಗಣಿಯಾಗಬಲ್ಲ ಎಂಬುದಕ್ಕೆ ನೆಟ್ ಬಾಲ್ ಕ್ರೀಡಾ ಸರದಾರ ನಿತಿನ್ ಪೂಜಾರಿಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
ಕ್ರೀಡಾಲೋಕದಲ್ಲಿ ಪ್ರವೀಣ ನಾಗಬೇಕು ಎಂದರೆ ಇದಕ್ಕೆ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಅವಶ್ಯ. ಮುಂಜಾನೆಯ ಧ್ಯಾನದ ಕಲಿಕೆಯೊಡನೆ ಮೈದಾನದೊಳಗೆ ಪ್ರವೇಶಿಸಿ ಅಭ್ಯಾಸದಲ್ಲಿ ನಿರತರಾಗಿ ಮತ್ತೆ ಮುಸ್ಸಂಜೆ ವೇಳೆ ಇದೇ ಅಭ್ಯಾಸ ಮಾಡಿದರೆ ಯಶಸ್ಸಿನ ದಡ ಸೇರಬಹುದು ಎಂಬ ಮಾತಿಗೆ ನಿತಿನ್ ಪೂಜಾರಿ ಉತ್ತಮ ನಿದರ್ಶನ.
ವಿಟ್ಲ ಪಡ್ನೂರು ಗ್ರಾಮದ ಸೊರಂಗದಮೂಲೆ ಎಂಬ ಸಣ್ಣ ಪ್ರದೇಶದಲ್ಲಿ ಎಸ್. ಜನಾರ್ದನ ಪೂಜಾರಿ ಮತ್ತು ಚಂದ್ರಾವತಿ ದಂಪತಿಯ ಪ್ರಥಮ ಪುತ್ರನಾಗಿ ದಿನಾಂಕ: 15-05-1995 ರಂದು ಜನಿಸಿದ ನಿತಿನ್ ಪೂಜಾರಿ ಇಂದಿನ ಅದ್ಭುತ ಸಾಧಕ. ಪ್ರಾಥಮಿಕ ಶಿಕ್ಷಣವನ್ನು ಕಡಂಬು ಶಾಲೆ ಮತ್ತು ಅನಿಲಕಟ್ಟೆ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿ ಬಳಿಕ ಅರಸಿ ಬಂದದ್ದು ಎಸ್.ಡಿ. ಎಮ್ ಉಜಿರೆ ಕಾಲೇಜನ್ನು. ಬಿ. ಕಾಮ್. ವಿದ್ಯಾಭ್ಯಾಸ ಪೂರೈಸಿದ ಬಳಿಕ ಪ್ರಸ್ತುತ ಇದೇ ಕಾಲೇಜಿನಲ್ಲಿ ಎರಡನೇ ವರ್ಷದ ಎಮ್. ಕಾಮ್. ಪದವೀಧರ.
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತಿನಂತೆ ನಿತಿನ್ ತನ್ನ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಮೆಟ್ಟಿ ನಿಂತು ಇಂದು ಎಲ್ಲರೂ ಮೆಚ್ಚುವಂತೆ ಕ್ರೀಡಾಲೋಕದ ನೆಟ್ ಬಾಲ್ ಪಂದ್ಯದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಎಳವೆಯಿಂದಲೂ ನಿತಿನ್‌ಗೆ ಕ್ರೀಡೆ ಎಂದರೆ ಅಚ್ಚುಮೆಚ್ಚು. ಒಲಿಂಪಿಕ್‌ನತ್ತ ಧಾವಿಸಿ ಸಾಧನೆ ಮಾಡಬೇಕೆಂಬ ಕನಸು ಇವರದ್ದು.
ನಿತಿನ್ ಸಾಧನೆಗಳು: 2010-11 ನೇ ಸಾಲಿನಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ನೆಟ್ ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು, ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹರಿದ್ವಾರದಲ್ಲಿ ನಡೆದ 24 ನೇ ಜೂನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ತೃತೀಯ ಸ್ಥಾನ, ಒರಿಸ್ಸಾದಲ್ಲಿ ನಡೆದ ನಡೆದ ೨೫ನೇ ಜೂನಿಯರ್ ನ್ಯಾಷನಲ್ ನೆಟ್‌ಬಾಲ್ ಚಾಂಪಿಯನ್ ಶಿಪ್ ನಲ್ಲಿ ತೃತೀಯ ಸ್ಥಾನ, ಗುಜರಾತ್‌ನಲ್ಲಿ ನಡೆದ 26 ನೇ ಜೂನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡದ ನಾಯಕನಾಗಿ ದ್ವಿತೀಯ ಸ್ಥಾನ ಗಳಿಸಿರುವ ನಮ್ಮ ಹೆಮ್ಮೆಯ ಕ್ರೀಡಾಪಟು ನಿತಿನ್ ಪೂಜಾರಿ. ಜೊತೆಗೆ ಹರಿದ್ವಾರದಲ್ಲಿ ನಡೆದ 25 ನೇ ಸೀನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ತೃತೀಯ ಸ್ಥಾನ, ಇಂಟರ್ ಝೋನ್ ನಲ್ಲಿ ತೃತೀಯ ಸ್ಥಾನ, ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆದ ಸೌತ್ ಝೋನ್‌ನಲ್ಲಿ ಪ್ರಥಮ ಸ್ಥಾನ, 2012- 13ನೇ ಸಾಲಿನಲ್ಲಿ ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಸೀನಿಯರ್ ರಾಜ್ಯಮಟ್ಟದ ನೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಸ್ಥಾನ, 2012-13 ಮತ್ತು 2013-14 ನೇ ಸಾಲಿನ ಅಖಿಲ ಭಾರತ ನೆಟ್‌ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ, ಕೇರಳದಲ್ಲಿ ನಡೆದ 35 ನೇ ನೆಟ್ ಬಾಲ್ ನ್ಯಾಷನಲ್ ಗೇಮ್ಸ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ನಾಲ್ಕನೇ ಸ್ಥಾನ, ದೆಹಲಿಯಲ್ಲಿ ಸೀನಿಯರ್ ನ್ಯಾಷನಲ್‌ನಲ್ಲಿ ಭಾಗವಹಿಸುವಿಕೆ, 34ನೇ ಸೀನಿಯರ್ ನ್ಯಾಷನಲ್ ನೆಟ್‌ಬಾಲ್ ಚಾಂಪಿಯನ್ ಶಿಪ್ ನಲ್ಲಿ ಇವರ ನಾಯಕತ್ವದೊಡನೆ ಬೆಳ್ಳಿ ಪದಕ ವಿಜೇತ ತಂಡ, ರಾಜ್ಯಮಟ್ಟದ ಒಲಿಂಪಿಕ್ಸ್ ಕ್ರೀಡೆಯ ನೆಟ್ ಬಾಲ್ ನಲ್ಲಿ ಪ್ರಥಮ ಸ್ಥಾನ, 2017-18 ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆದ 2011 ಭಾರತೀಯ ವಿಶ್ವವಿದ್ಯಾಲಯ ನೆಟ್‌ಬಾಲ್ ಚಾಂಪಿಯನ್ ಶಿಪ್‌ನಲ್ಲಿ ನಾಯಕತ್ವ ದೊಡನೆ ದ್ವಿತೀಯ ಸ್ಥಾನ, ಮಲೇಶಿಯಾದಲ್ಲಿ ನಡೆದ 2 ನೇ ಏಷ್ಯಾ ಕಪ್ ಪುರುಷರ ನೆಟ್ ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಭಾರತ ತಂಡದ ಉಪನಾಯಕನಾಗಿ ಚಿನ್ನದ ಪದಕ ಪಡೆದ ಹೆಗ್ಗಳಿಕೆ ಇವರದ್ದು. ಇತ್ತೀಚೆಗೆ ಎಸ್. ಡಿ. ಎಮ್. ಉಜಿರೆ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ನೆಟ್ ಬಾಲ್ ಕ್ರೀಡೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಗೆಲುವು ಸಾಧಿಸುವಲ್ಲಿ ನಿತಿನ್ ಪೂಜಾರಿ ಕೊಡುಗೆ ಅಪಾರ. ಉಡುಪಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಸ್ಟ್ ಶೂಟರ್ ಎಂಬ ಪ್ರಶಸ್ತಿ ಪಡೆದು ತಿರುಚನಾಪಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗೂ ಆಯ್ಕೆ ಯಾಗಿದ್ದರು. ಕೇವಲ ನೆಟ್ ಬಾಲ್ ಮಾತ್ರವಲ್ಲದೆ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ತ್ರಿವಿಧಜಿಗಿತದಲ್ಲಿ ಪ್ರಥಮ ಸ್ಥಾನ, 2014-15 ನೇ ಸಾಲಿನಲ್ಲಿ ತಮಿಳುನಾಡಿನಲ್ಲಿ ನಡೆದ ಅಖಿಲ ಭಾರತ ಹ್ಯಾಂಡ್ ಬಾಲ್ ಚಾಂಪಿಯನ್ ಶಿಪ್‌ನಲ್ಲೂ ಭಾಗವಹಿಸಿರುವ ಪ್ರತಿಭೆ ಇವರು.
ಇವರ ಪ್ರತಿಭೆಗೆ ಸರಿಸಾಟಿಯಿಲ್ಲ. ಜನಿಸಿದ್ದು ಹಳ್ಳಿಯಲ್ಲಾದರೂ, ದಿಲ್ಲಿಯವರೆಗೂ ಪ್ರವೇಶ ಗಿಟ್ಟಿಸಿದ ಈ ಪ್ರತಿಭೆಗೆ ಸೈ ಎನ್ನಲೇಬೇಕು. ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ ಕಲಿಕೆಯಲ್ಲೂ ನಿಪುಣನಾಗಿರುವ ಇವರು ತಂದೆ-ತಾಯಿಗೆ ಹೆಮ್ಮೆಯ ಪುತ್ರ, ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ.
ನಿತಿನ್ ಪೂಜಾರಿ ಕ್ರೀಡಾಂಗಣದಲ್ಲಿ ಅಮೋಘವಾಗಿ ಆಡುತ್ತಾರೆ. ತನಗೆ ಜಾಂಡಿಸ್ ಕಾರಣದ ಜ್ವರವಿದ್ದರೂನು ಉಜಿರೆಯಲ್ಲಿ ನಡೆದ ರಾಷ್ಟ್ರಮಟ್ಟದ ನೆಟ್ ಬಾಲ್ ನಲ್ಲಿ ಬೆಸ್ಟ್ ಶೂಟರ್ ಆಗಿ ಹೊರಹೊಮ್ಮಿ ತನ್ನ ನೋವಿನಲ್ಲೂ ಕೂಡಾ ತಂಡದ ಅಭೂತಪೂರ್ವ ಗೆಲುವಿಗೆ ಕಾರಣರಾದರು.
ಯಾವುದೇ ಪ್ರಶಸ್ತಿಗಳ ಅರಸದೆ, ತನ್ನ ಸಾಧನೆಯ ಸುತ್ತ ನಿರತನಾಗಿ ನೈಪುಣ್ಯ ನಾಗಿರುವ ಈ ಮುಗ್ಧ ಮನದ ನಿತಿನ್ ಪೂಜಾರಿಗೆ ಇನ್ನಷ್ಟು ಗೆಲುವಿನ ಹಾದಿ ಸಿಗಲಿ, ಇವರ ಕನಸು ನನಸಾಗಲಿ, ದೇಶಕ್ಕೆ ಉತ್ತಮ ಕ್ರೀಡಾಪಟುವಾಗಿ ಮೆರೆಯಲಿ ಎಂಬುದೇ ನಮ್ಮೆಲ್ಲರ ಆಶಯ.

ಪ್ರಜ್ಞಾ .ಬಿ.ಪೂಜಾರಿ, ಓಡಿಲ್ನಾಳ
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.