ವೇಣೂರು: ಬಿಜೆಪಿ ಚುನಾವಣಾ ಪ್ರಚಾರ ಸಭೆ

ವೇಣೂರು: ರಾಜ್ಯದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ, ಹಿಂದೂ ವಿರೋಧಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಕಳೆದ 5 ವರ್ಷ ಜಾತಿ, ಧರ್ಮಗಳ ಮಧ್ಯೆ ಸಂಘರ್ಷ ಸೃಷ್ಠಿಸಿ ಕಾಲಹರಣ ಮಾಡಿದೆ. ಅವರ ಸ್ವಾರ್ಥ ರಾಜಕಾರಣದಿಂದ ಬೆಳ್ತಂಗಡಿ ಜನತೆ ಇಂದು ಬದಲಾವಣೆ ಕಂಡಿದ್ದು ಬಿಜೆಪಿ ಗೆಲ್ಲಿಸುತ್ತಾರೆ ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ವೇಣೂರು ಮುಖ್ಯಪೇಟೆಯಲ್ಲಿ ಮೇ. 2 ರಂದು ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.
ತಾಲೂಕಿನಲ್ಲಿ ಅಂತರ್ಜಲ ವೃದ್ಧಿ ಮತ್ತು ರೈತರಿಗೆ ನೀರಾವರಿ ಯೋಜನೆಗೆ ಹೆಚ್ಚಿನ ಮಹತ್ವ ನೀಡಲಿದ್ದೇವೆ. ಐತಿಹಾಸಿಕ ಬಾಹುಬಲಿ ಮೂರ್ತಿಯಿಂದ ಗುರುತಿಸಿಕೊಂಡಿರುವ ವೇಣೂರು ಯಾವೊತ್ತೋ ಪ್ರವಾಸೋದ್ಯಮ ಕೇಂದ್ರವಾಗಬೇಕಿತ್ತು. ಧರ್ಮಸ್ಥಳ ಕ್ಷೇತ್ರಕ್ಕೆ ದಿನಾ ಬರುವ 5, 10 ಸಾವಿರ ಭಕ್ತಾಧಿಗಳಲ್ಲಿ ಬಾಹುಮೂರ್ತಿ ಇರುವ ವೇಣೂರಿಗೆ 1000 ಜನ ಆದರೂ ಇಲ್ಲಿಗೆ ಬರುತ್ತಿದ್ದರೆ ಯುವಕರಿಗೆ ಅದೆಷ್ಟೋ ಉದ್ಯೋಗ ಲಭಿಸುತ್ತಿತ್ತು. ರಿಕ್ಷಾ, ಜೀಪು ಚಾಲಕರಿಗೆ ಬಾಡಿಗೆ ಆಗುತ್ತಿತ್ತು. ಅದೆಷ್ಟೋ ಹೊಟೇಲ್‌ಗಳ ನಿರ್ಮಾಣವಾಗುತ್ತಿತ್ತು. ತಾಲೂಕಿನಲ್ಲಿ ಅದೆಷ್ಟೋ ಪ್ರವಾಸಿ ಕೇಂದ್ರಗಳಿವೆ. ಅದರ ಪ್ರಚಾರ ರಾಜ್ಯದಲ್ಲೇ ಆಗುತ್ತಿದ್ದರೆ ನಮ್ಮೂರಿಗೆ ಅದೆಷ್ಟು ಮಂದಿ ಪ್ರವಾಸಿಗಳು ಬರುತಿದ್ದರು.  ತಾಲೂಕಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರವಾಸೋದ್ಯಮದ ಮೂಲಕ ವೇಣೂರು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಿಸುತ್ತೇವೆ ಎಂದರು.
ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್, ವಿಭಾಗ ಸಹಪ್ರಭಾರಿ ಪ್ರತಾಪ್‌ಸಿಂಹ ನಾಯಕ್ ತಾಲೂಕು ಮಂಡಲ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಷ್,  ತಾ.ಪಂ. ಸದಸ್ಯ ವಿಜಯ ಗೌಡ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ, ಉಮೇಶ್ ನಡ್ತಿಕಲ್ಲು, ಸುಂದರ ಹೆಗ್ಡೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.