ವಾಣಿ ಪ.ಪೂ ಕಾಲೇಜು ಬೆಳ್ತಂಗಡಿಗೆ ಶೇ. 96.06 ಫಲಿತಾಂಶ.

Advt_NewsUnder_1
Advt_NewsUnder_1
Advt_NewsUnder_1

ಕಲಾ ವಿಭಾಗದಲ್ಲಿ ಈ ಬಾರಿಯೂ 100 ಶೇ.
ಬೆಳ್ತಂಗಡಿ ಹಳೆಕೋಟೆಯಲ್ಲಿರುವ ವಾಣಿ ಪ. ಪೂರ್ವ ಕಾಲೇಜಿನಲ್ಲಿ ಒಟ್ಟು 381 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 366 ಮಂದಿ ಉತ್ತೀರ್ಣರಾಗುವ ಮೂಲಕ ಶೆ. 96.06 ಫಲಿತಾಂಶ ದಾಖಲಿಸಿದ್ದಾರೆ. ಕಲಾವಿಭಾಗದಿಂದ 26 ಮಂದಿ ಪರೀಕ್ಷೆ ಬರೆದು ಎಲ್ಲರೂ ಪಾಸಾಗುವ ಮೂಲಕ ಶೇ. 100 ಫಲಿತಾಂಶ ದಾಖಲಾಗಿದೆ. ಒಟ್ಟು ಕಾಲೇಜಿನಿಂದ 44 ಮಂದಿ ಡಿಸ್ಟ್ರಿಂಕ್ಷನ್‌ನಲ್ಲಿ ಉತ್ತೀರ್ಣರಾಗಿ, 255 ಮಂದಿ ಪ್ರಥಮ ಶ್ರೇಣಿಯಲ್ಲಿ,54 ಮಂದಿ ದ್ವಿತೀಯ ಶ್ರೇಣಿಯಲ್ಲಿ ಮತ್ತು 13 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಆಯಿಷಾ 540 ಅಂಕ ಪಡೆಯುವ ಮೂಲಕ ತರಗತಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕವಿತಾ ಅವರು 546 ಅಂಕ ಪಡೆಯುವ ಮೂಲಕ ವಿಭಾಗಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅನುಜಾ ಅವರು 560 ಅಂಕಗಳನ್ನು ಪಡೆದು ವಿಭಾಗಕ್ಕೆ ಪ್ರಥಮವೆನಿಸಿದ್ದಾರೆ. ಕಲಾ ವಿಭಾಗದಲ್ಲಿ ಈ ಬಾರಿ ಕೂಡ 100 ಶೇಕಡಾ ಫಲಿತಾಂಶ ಪಡೆಯಲಾಗಿದ್ದು ಆಡಳಿತ ಮಂಡಳಿ, ವಿದ್ಯಾರ್ಥಿ ಹೆತ್ತವರು ಪೋಷಕರು ಸಂತಸಗೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 97.88 ಶೇ. ಫಲಿತಾಂಶ ದಾಖಲಾದರೆ, ವಿಜ್ಞಾನ ವಿಭಾಗದಲ್ಲಿ 91.59 ಶೇ. ಫಲಿತಾಂಶ ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.