ಪ.ಪೂ ಕಾಲೇಜು ಮುಂಡಾಜೆ  88.34 ಶೇ. ಫಲಿತಾಂಶ

ಮುಂಡಾಜೆ ಪ. ಪೂ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 163 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 144 ಮಂದಿ ಉತ್ತೀರ್ಣರಾಗಿ ಶೇ 88.34  ಫಲಿತಾಂಶ ಬಂದಿರುತ್ತದೆ. ಈ ಪೈಕಿ ಕಲಾ ವಿಭಾಗದಲ್ಲಿ 37 ಮಂದಿ ಪರೀಕ್ಷೆಗೆ ಹಾಜರಾಗಿ 32  ವಿದ್ಯಾರ್ಥಿಗಳು ಪಾಸಾಗಿದ್ದು ಶೇ. 86.48 ಫಲಿತಾಂಶ ಬಂದಿದೆ. ಈ ಪೈಕಿ 1 ಡಿಸ್ಟಿಂಕ್ಷನ್,14 ಮಂದಿ ಪ್ರಥಮ ಶ್ರೇಣಿಯಲ್ಲಿ, 9 ದ್ವಿತೀಯ ಶ್ರೇಣಿಯಲ್ಲಿ, 8 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 126 ವಿದ್ಯಾರ್ಥಿಗಳು ಪರೀಕ್ಷೆ ಬರೆದು112 ಮಂದಿ ಉತ್ತೀರ್ಣರಾಗಿ ಶೇ. 88.88 ಫಲಿತಾಂಶ ತಂದಿದ್ದಾರೆ. 10 ಮಂದಿ ಡಿಸ್ಟಿಂಕ್ಷನ್, 61 ಪ್ರಥಮ ಶ್ರೇಣಿ, 31 ದ್ವಿತೀಯ ಶ್ರೇಣಿ, 16 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ವಿದ್ಯಾ ಅವರು 533 ಅಂಕ ಪಡೆದು ವಿಭಾಗಕ್ಕೆ ಪ್ರಥಮ ಸ್ಥಾನಿಯಾದರೆ, ವಾಣಿಜ್ಯ ವಿಭಾಗದಲ್ಲಿ ಮನೀಷಾ 531 ಅಂಕಗಳನ್ನು ಪಡೆದು ವಿಭಾಗದಲ್ಲಿ ಮುಂದಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.