HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಿಂದ ಪತ್ರಿಕಾಗೋಷ್ಠಿ.

ಬೆಳ್ತಂಗಡಿ: ರಾಜ್ಯದ ಕಾಂಗ್ರೆಸ್ ಸರಕಾರದ ಜನಪರ ಯೋಜನೆ ಮತ್ತು ಸಾಧನೆ, ತಾಲೂಕಿನಲ್ಲಿ ವಸಂತ ಬಂಗೇರರ ಅಭಿವೃದ್ಧಿಯ ವೈಖರಿಯಿಂದ ಸಹಿಸಲಾಗದ ಬಿಜೆಪಿಗರು ಇನ್ನೊಂದೆಡೆ ಮೋದಿ ದುರಾಡಳಿತದ ಬಗ್ಗೆ ಮತ ಕ್ಷೇತ್ರದಲ್ಲಿ ಜನ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ದೃತಿಗೆಟ್ಟು ತಾಲೂಕಿನಲ್ಲಿ ಮಾಟ ಮಂತ್ರದ ಹಾದಿ ಹಿಡಿದಿದ್ದಾರೆ. ಇದು ನಾಚಿಕೆ ತರುವ ಪ್ರವೃತ್ತಿಯಾಗಿದ್ದು, ಗೇರುಕಟ್ಟೆಯಲ್ಲಿ ಮಾಡಲಾದ ಮಾಟ ಮಂತ್ರದ ಹಿಂದಿರುವ ಬಿಜೆಪಿ ನಾಯಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು, ಅಂತೆಯೇ ಇದರಿಂದ ಮುಗುಳಿ ನಾರಾಯಣ ರಾವ್ ಮತ್ತು ಕರೀಮ ಅವರ ಜೀವಕ್ಕೆ ಏನಾದರೂ ತೊಂದರೆ ಇದೆಯೇ ಎಂದು ತನಿಖೆ ನಡೆಸಬೇಕು ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ .ವಿ ಕಿಣಿ ಪತ್ರಿಕಾ ಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.
2014 ರಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ನರೇಂದ್ರ ಮೋದಿ ಸರಕಾರ ನಮೋ ಹೆಸರಿನಲ್ಲಿ ನಂಬಿಕೆಗೆ ಮೋಸ ಮಾಡಿದೆ. ಅಧಿಕಾರ ಬಳಸಿಕೊಂಡು ಯಾವ ಗಳಿಗೆಯಲ್ಲಿ ಯಾವ ವಿಚಾರ ಘೋಷಿಸುತ್ತರೋ ಎಂದು ದೇಶದ ಜನ ಭಯದಿಂದ ಕಾಲಕಳೆಯುವಂತಾಗಿದೆ. ಕಪ್ಪು ಹಣವೂ ಇಲ್ಲ, ಖಾತೆಗೆ ೧೫ ಲಕ್ಷವೂ ಇಲ್ಲ, ಯುಇಎ ಸರಕಾರ ತಯಾರಿಸಿದ್ದ ಜಿಎಸ್‌ಟಿಯನ್ನು ವಿರೋಧಿಸುತ್ತಾ ಬಂದಿದ್ದ ಬಿಜೆಪಿ ತಾವು ಅಧಿಕಾರಕ್ಕೆ ಬಂದಾಗ ಅವರ ಮೂಗಿನ ನೇರಕ್ಕೆ ಕಣ್ಣಳತೆಗೆ ತಕ್ಕುದಾಗಿ ಅದನ್ನುಉ ಜಾರಿಗೊಳಿಸಿ ಎಲ್ಲೂ ಇಲ್ಲದ ಹೊರೆಯನ್ನು ಜನರ ಮೇಲೆ ಹಾಕಿದೆ ಎಂದು ಆಪಾದಿಸಿದರು.
ಮಾಟ ಮಂತ್ರದ ಬಗ್ಗೆ ಮಾತನಾಡಿದ ಕಳಿಯ ಗ್ರಾ.ಪಂ ಸದಸ್ಯ ಕರೀಂ ಗೇರುಕಟ್ಟೆ, ಇದು ನನ್ನ ಕಣ್ಣಮುಂದೆಯೇ ಮಾಡಿದ ಕೃತ್ಯ. ಆರೋಪಿಗಳ ವಿರುದ್ಧ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಪರಿಚಿತರೇ ಆಗಿರುವ ರಾಜ್‌ಪ್ರಕಾಶ್ ಅವರಲ್ಲಿ ನಾನು ವಿಚಾರಿಸಿದಾಗ ಅವರು ಕೃತ್ಯವನ್ನು ಒಪ್ಪಿಕೊಂಡಿದ್ದು ಕ್ಷಮೆ ಕೇಳಿದ್ದಾರೆ. ಅಲ್ಲದೆ ಹಣದ ಮೂಲಕ ಅದನ್ನು ಮುಗಿಸುವ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ನನ್ನಲ್ಲಿ ವಾಯ್ಸ್ ರೆಕಾರ್ಡ್ ದಾಖಲೆ ಇದೆ. ಅಲ್ಲದೆ ಮಿತ್ರ ವರ್ಗದವರಿಂದಲೂ ಕರೆ ಮಾಡಿಸಿ ಒತ್ತಡ ಹಾಕಿದ್ದಾರೆ ಎಂದು ತಿಳಿಸಿ. ಅಂದು ರಾತ್ರಿ ನಡೆದ ಘಟನೆಯನ್ನು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಪ್ರಮೋದ್ ಕುಮಾರ್ ರೆಖ್ಯ, ಶರತ್ ಕುಮಾರ್ ಶೆಟ್ಟಿ ಕಳಿಯ, ರಾಜಶೇಖರ್ ಶೆಟ್ಟಿ ಮಡಂತ್ಯಾರು ಉಪಸ್ಥಿತರಿದ್ದರು.

 

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.