HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜೆಡಿಎಸ್ ಗೆ ಬೆಳ್ತಂಗಡಿ ಕ್ಷೇತ್ರದಲ್ಲಿ ಉತ್ತಮ ಬೆಂಬಲ: ಪ್ರವೀಣ್ಚಂದ್ರ

ಬೆಳ್ತಂಗಡಿ: ಮಾಜಿ ಪ್ರಧಾನಿ ಹೆಚ್.ಡಿ ದೇವೇ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಯವರು ತಮ್ಮ ಆಡಳಿತದಲ್ಲಿ ಮಾಡಿದ ಸಾಧನೆಯನ್ನು ಜನತೆಯ ಮುಂದಿರಿಸಿ ಜೆಡಿಎಸ್ ಮತಯಾಚನೆ ನಡೆಸುತ್ತಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪ್ರವೀಣ್ಚಂದ್ರ ಜೈನ್ ತಿಳಿಸಿದರು.
ಅವರು ಎ.30 ರಂದು ಬಿಎಸ್‌ಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆ ಅವರ ಪರವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜೆಡಿಎಸ್ ಹಾಗೂ ಬಿಎಸ್‌ಪಿ ಬೆಂಬಲದಲ್ಲಿ ಈ ಬಾರಿ ಚುನಾವಣೆಯನ್ನು ಎದುರಿಸುತ್ತಿದ್ದು, ತಾಲೂಕಿನಲ್ಲಿ ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ತಾಲೂಕಿನ ಸಮಗ್ರ ಅಭಿವೃಧ್ದಿ ಬಗ್ಗೆ ಗ್ರಾ.ಪಂ ಮಟ್ಟದ ಕ್ರೋಡೀಕೃತ ಯೋಜನಾ ಪಟ್ಟಿ ತಯಾರಿಸುವುದು, ಮಂಗಳೂರು – ಚಾರ್ಮಾಡಿ ಮತ್ತು ಉಜಿರೆ -ಧರ್ಮಸ್ಥಳ ದ್ವಿಪಥ ರಸ್ತೆ ನಿರ್ಮಾಣ, ಸರಕಾರಿ ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ನೇತ್ರಾವತಿ ಯೋಜನೆ ಸಂಪೂರ್ಣ ಕೈ ಬಿಡುವಂತೆ ಒತ್ತಾಯ, ಕಸ್ತೂರಿ ರಂಗನ್ ಸೇರಿದಂತೆ ನೂರಾರು ಯೋಜನೆಗಳನ್ನು ಕೈಬಿಡುವಂತೆ ಸರಕಾರದ ಮೇಲೆ ಒತ್ತಡ ತರುವುದಾಗಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆ, ಜೆಡಿಎಸ್ ಕಾರ್ಯದರ್ಶಿ ರಾಮಾಚಾರಿ, ಬಿಎಸ್‌ಪಿ ತಾಲೂಕು ಅಧ್ಯಕ್ಷ ಸಂಜೀವ, ಕಛೇರಿ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.