HomePage_Banner_
HomePage_Banner_

ಬೆಳ್ತಂಗಡಿಯಲ್ಲಿ ‘ಕಾನೂರಾಯಣ’ ಚಲನಚಿತ್ರಕ್ಕೆ ಚಾಲನೆ

 ಬೆಳ್ತಂಗಡಿ: ಎಸ್.ಕೆ.ಆರ್.ಡಿ.ಪಿ.ಯ 20 ಲಕ್ಷ ಸದಸ್ಯರ ನಿರ್ಮಾಪಕತ್ವದಲ್ಲಿ ಬಿಡುಗಡೆಗೊಂಡ ಕಾನೂರಾಯಣ ಚಿತ್ರದ ಪ್ರದರ್ಶನವು ಎ.27 ರಂದು ಬೆಳ್ತಂಗಡಿ ಭಾರತ್ ಟಾಕೀಸ್ ನಲ್ಲಿ ಆರಂಭಗೊಂಡಿತು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್.ಮಂಜುನಾಥ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ, ಗ್ರಾಮಾಭಿವೃಧ್ಧಿ ಯೋಜನೆಯ ಮೂಲಕ ಸಮಗ್ರ ಕೃಷಿ ಕುಟುಂಬಗಳ ಅಭಿವೃಧ್ಧಿಯಾಗಿದ್ದು, ಇದು ಜಗತ್ತಿನ ಎಲ್ಲರಿಗೂ ತಿಳಿಯಬೇಕು. ಎಲ್ಲರೂ ಈ ಚಲನಚಿತ್ರ ನೋಡಿ ತಮ್ಮ ಜೀವನದಲ್ಲಿ ಪರಿವರ್ತನೆಯಾಗಬೇಕು ಎಂಬುದು ಡಾ| ಹೆಗ್ಗಡೆಯವರ ಆಶಯ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕ ಚಂದ್ರಶೇಖರ್, ಕೇಂದ್ರೀಯ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಪೊಸಂದೋಡಿ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಕಾಸಿಂ ಮಲ್ಲಿಗೆ ಮನೆ, ನಾಳ ದೇವಸ್ಥಾನ ಅಭಿವೃಧ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ವಲಯಾಧ್ಯಕ್ಷ ಮಧುಸೂಧನ್ ಮೊದಲಾದವರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.