HomePage_Banner_
HomePage_Banner_

ಎ.27 ರಾಜ್ಯಾದ್ಯಂತ ಕಾನೂರಾಯಣ ಚಲನಚಿತ್ರ ಬಿಡುಗಡೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಧರ್ಮಸ್ಥಳ : ಮಹಿಳೆಯರ ಪರಿವರ್ತನೆಯಿಂದ ಗ್ರಾಮ ಪರಿವರ್ತನೆ ಹಾಗೂ ದೇಶದ ಪರಿವರ್ತನೆ ಸಾಧ್ಯವಾಗುತ್ತದೆ. ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ರೂಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಂಡಿದ್ದು ಗ್ರಾಮೀಣ ಮಹಿಳೆಯರ ಸಬಲೀಕರಣದಿಂದ ಯೋಜನೆಯು ವಿಶ್ವದ ಗಮನ ಸೆಳೆದಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಗಾಥೆ, ಸಮಸ್ಯೆಗಳು ಮತ್ತು ಸವಾಲುಗಳನ್ನು ಪ್ರತಿಬಿಂಬಿಸುವ ಕಾನೂರಾಯಣ ಚಲನಚಿತ್ರಕ್ಕೆ ಅ.20 ರಂದು ಚಾಲನೆ ನೀಡಲಾಗಿತ್ತು. “ಕಟ್ಟೋಣ ಕಂಕಣವ ನಮ್ಮಭ್ಯುದಯಂತೆ ಸ್ತ್ರೀ ಶಕ್ತಿ ಒಂದಾಗಿ ಭವ್ಯ ಭಾರತಕ್ಕೆ” ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಸಂಕಲನದೊಂದಿಗೆ, ಟಿ.ಎಸ್ ನಾಗಾಭರಣ ನಿರ್ದೇಶನದಲ್ಲಿ, ನಿರ್ಮಾಪಕರಾಗಿ ಎಸ್.ಕೆ.ಡಿ.ಆರ್.ಡಿ.ಪಿಯ 20 ಲಕ್ಷ ಸದಸ್ಯರು ಪಾಲ್ಗೊಂಡಿದ್ದು, ಚಿತ್ರಕಥೆ ಸಹನಿರ್ದೇಶನ ಪನ್ನಗ ಭರಣ, ಛಾಯಾಗ್ರಹಣ ಶ್ರೀನಿವಾಸ್ ರಾಮಯ್ಯ, ಸಂಗೀತ ವಾಸುಕಿ ವೈಭವ್, ಸಂಕಲನ ಬಿ.ಎಸ್.ಕೆಂಪುರಾಜು ಹಾಗೂ ಶ್ರೀ ಧರ್ಮಸ್ಥಳ ಗ್ರಾಮೋಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥರವರ ಮೇಲುಸ್ತುವಾರಿಯಲ್ಲಿ ಎ.27 ರಂದು ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.