ನಾಗರಿಕ ಸೇವಾ ಟ್ರಸ್ಟ್: ಅಂಬೇಡ್ಕರ್ ಜಯಂತಿ ಆಚರಣೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಗುರುವಾಯನಕೆರೆ: ಸಾಮೂಹಿಕ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ ಘಟನೆಗಳು ದಮನಿಸಲ್ಪಟ್ಟ ಸಮುದಾಯ ಮತ್ತು ಮುಂದುವರಿದ ಸಮುದಾಯಗಳನ್ನು ಪ್ರತ್ಯೇಕಿಸಲ್ಪಡುತ್ತಿದ್ದು ಇಂತಹ ವಾತಾವರಣ ರಾಷ್ಟ್ರದ ಬೆಳವಣಿಗೆ ಆತಂಕಕಾರಿಯಾಗುತ್ತದೆ. ಸಂವಿಧಾನ ಶಿಲ್ಪಿ ಡಾ|ಬಿ.ಆರ್ ಅಂಬೇಡ್ಕರ್‌ರವರ ಚಿಂತನೆಗಳ ಸಾಮಾಜಿಕ ಮೌಲ್ಯಗಳನ್ನು ನಾವು ಅರ್ಥೈಸಬೇಕಾಗಿದೆ ಎಂದು ನಾಗರಿಕ ಸೇವಾ ಟ್ರಸ್ಟ್‌ನ ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ ಯವರು  ಅಂಬೇಡ್ಕರ್‌ರವರ 127 ನೇ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್  ಶೋಷಿತ ಸಮುದಾಯದ ಸೇವೆಯೇ ನಿಜವಾದ ಸಮಾಜ ಸೇವೆ. ಅಸ್ಪೃಷ್ಯತೆ ನಿವಾರಣೆಗೆ ಹಾಗೂ ದಲಿತರ ಪರ, ಶೋಷಿತರ ಪರ ಧ್ವನಿಯಾಗಿ ಟ್ರಸ್ಟ್ ಕೆಲಸ ಮಾಡುತ್ತಾ ಬಂದಿದೆ. ಅಂಬೇಡ್ಕರ್ ಸರ್ವಮಾನ್ಯ ಮಹಾನ್ ವ್ಯಕ್ತಿ ಎಂದು ಹೇಳಿದರು.
ದಲಿತ ಅಭಿವೃದ್ಧಿ ಸಮಿತಿಯ ಸಹ ಸಂಚಾಲಕ ಸೋಮ.ಕೆ ಸ್ವಾಗತಿಸಿ, ಕೃಷಿಕರ ವೇದಿಕೆ-ಕರ್ನಾಟಕ ಕಾರ್ಯದರ್ಶಿ ಕೆ.ಸದಾಶಿವ ಹೆಗ್ಡೆ ಧನ್ಯವಾದ ಅರ್ಪಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.