ಬೆಳ್ತಂಗಡಿ: ಎ.23 ರಂದು ಸಂತೆಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ರವರು ಭಾ.ಜ.ಪ. ಅಭ್ಯರ್ಥಿ ಹರೀಶ್ ಪೂಂಜ ರವರನ್ನು ಹತ್ತಿರ ಕರೆದು ಅವರ ಕೈಯ್ಯನ್ನು ಮೇಲೆತ್ತಿ ಪೂಂಜ ಗೆಲುವಿಗೆ ಕರೆ ನೀಡಿದರು. ಹರೀಶ್ ಪೂಂಜರವರನ್ನು ಬೇರೆಯೇ ಎಂದು ಕಡೆಗಣಿಸದೆ, ಅವರು ನಿಮ್ಮ ಮನೆ ಮಗ, ಸಹೋದರನೆಂದು ತಿಳಿದು ಮತ ನೀಡಿ. ಅಭ್ಯರ್ಥಿಗಾಗಿ ಕಾಯದೆ ಮನೆ ಮನೆಗೆ ತೆರಳಿ ಮಗನಿಗಾಗಿ, ಸಹೋದರನಿಗಾಗಿ ಮತಯಾಚಿಸಿ, ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ. ಗೆದ್ದಮೇಲೆ ಮತದಾರರನ್ನು ಅಭಿನಂದಿಸಲು ನಾನು ಬಂದೇ ಬರುತ್ತೇನೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.