HomePage_Banner_
HomePage_Banner_

ಸ್ಯಾಂಡಲ್‌ವುಡ್ ನಿರ್ದೇಶಕನಾದ ವೇಣೂರಿನ ಹುಡುಗ ರಾಜೇಶ್.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಿರ್ದೇಶಕ ರಾಜೇಶ್

ಅಸತೋಮ ಸದ್ಗಮಯ ಮಂತ್ರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಆದರೆ ಈ ಹೆಸರಿನಲ್ಲೊಂದು ಕನ್ನಡ ಸಿನಿಮಾ ಬಂದಿದೆ. ರಂಗಿತರಂಗ ಬೆಡಗಿ ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿ ಅಸತೋಮ ಸದ್ಗಮಯ ಚಲನಚಿತ್ರ ಈಗಾಗಲೇ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ರಾಧಿಕಾ ಚೇತನ್ ಜೊತೆಗೆ ಕಿನ್ನರಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್, ಬಿಗ್‌ಬಾಸ್ ಸೀಸನ್ 5 ಸ್ಫರ್ದಿ ಲಾಸ್ಯ ನಾಗರಾಜ್, ಡ್ರಾಮಾ ಜೂನಿಯರ್‍ಸ್ ಖ್ಯಾತಿಯ ಬೇಬಿ ಚಿತ್ರಾಲಿ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಬುದ್ಧಿವಂತಿಕೆ ಹಾಗೂ ಸಂಬಂಧಗಳು ಎಂಬ ಥೀಮ್‌ನೊಂದಿಗೆ ತಯಾರಾಗುತ್ತಿರುವ ಈ ಚಿತ್ರವನ್ನ ನಿರ್ದೇಶಿಸುತ್ತಿರುವುದು ವೇಣೂರಿನ ರಾಜೇಶ್.
ಉಜಿರೆಯ ಎಸ್.ಡಿ.ಎಮ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದ ರಾಜೇಶ್ ನಂತರ ಬೆಂಗಳೂರಿನಲ್ಲಿ ಅನಿಮೇಶನ್ ಕೋರ್ಸ್ ಮಾಡಿ ವಿವಿಧ ಚಾನೆಲ್‌ಗಳಲ್ಲಿ ಕೆಲಸ ಮಾಡಿದರು. 2010 ರಲ್ಲಿ ಬೆಂಗಳೂರು ಬಿಟ್ಟು ಮಂಗಳೂರಿಗೆ ಬಂದು ಇಲ್ಲಿ ಪೇಸ್ ಮೀಡಿಯಾ ಎಂಬ ಸಂಸ್ಥೆಯನ್ನ ಪ್ರಾರಂಭಿಸಿದರು. ಈ ಸಂಸ್ಥೆಯಡಿಯಲ್ಲಿ ಸಾಕಷ್ಟು ಕಾರ್ಪೋರೇಟ್ ಡಾಕ್ಯುಮೆಂಟರಿ, ಜಾಹೀರಾತು ನಿರ್ಮಾಣ ಮಾಡಿದ ಅನುಭವವನ್ನು ಪಡೆದು ಈಗ ಮೊದಲ ಬಾರಿಗೆ ಅಸತೋಮ ಸದ್ಗಮಯ ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರದ ನಿರ್ಮಾಪಕರು ಕೂಡ ದಕ್ಷಿಣ ಕನ್ನಡದ ಮೂಡಬಿದ್ರೆಯ ಅಶ್ವಿನ್ ಪಿರೇರಾ ಕೂಡ ಇದು ಮೊದಲನೇ ಸಿನೆಮಾ.
ಈ ಸಿನೆಮಾದ ಬಹುತೇಕ ಭಾಗ ಮೂಡಬಿದ್ರೆ, ವೇಣೂರು ಕಾರ್ಕಳ, ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದ್ದು, ತುಳುನಾಡಿನ ಬಹಳಷ್ಟು ಮಂದಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಧ್ವನಿಸುರುಳಿ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಪುತ್ತೂರಿನ ವಹಾಬ್ ಸಲೀಂರವರು ಎಲ್ಲಾ ಐದು ಹಾಡುಗಳಿಗೆ ಸಾಹಿತ್ಯದ ಜೊತೆಗೆ ಸಂಗೀತ ನಿರ್ದೇಶನ ನೀಡಿದ್ದಾರೆ.
ಅಸತೋಮ ಸದ್ಗಮಯ ಚಿತ್ರವು ಈಗಿನ ಜನರೇಶನಿನ ಪ್ರತಿಬಿಂಬ. ಹಿಂದಿನ ಕಾಲದಲ್ಲಿ ವಿದ್ಯೆ ಕಡಿಮೆ ಇದ್ದರೂ, ಭಾವನೆಗಳಿಗೆ ಹಾಗೂ ಸಂಬಂಧಗಳಿಗೆ ಬೆಲೆ ಜಾಸ್ತಿ ಇತ್ತು. ಆದರೆ ಈಗ ಮಕ್ಕಳು ತುಂಬಾ ಬುದ್ದಿವಂತರಾಗಿದ್ದಾರೆ. ವಿಪರ್ಯಾಸವೆಂದರೆ ಅವರಲ್ಲಿ ಭಾವನೆಗಳು ಹಾಗೂ ಸಂಬಂಧಗಳ ಕಡಿಮೆಯಾಗುತ್ತಿದೆ. ಡಿಗ್ರಿ ಜಾಸ್ತಿಯಾಗುತ್ತಿದೆ ಆದರೆ ಕಾಮನ್‌ಸೆನ್ಸ್ ಕಡಿಮೆಯಾಗುತ್ತಿದೆ, ಈ ಒಂದು ವಿಷಯವನ್ನು ತುಂಬಾ ಮನರಂಜನಾತ್ಮಕವಾಗಿ ಚಿತ್ರದಲ್ಲಿ ತೋರಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ರಾಜೇಶ್ ವೇಣೂರ್. ಜೊತೆಗೆ ಈ ಚಿತ್ರದಲ್ಲಿ ಎಜುಕೇಶನ್ ಸಿಸ್ಟಂ ಬಗ್ಗೆಯೂ ತೋರಿಸಿದ್ದೇವೆ, ಯಾತಕ್ಕಾಗಿ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಸರಕಾರಿ ಶಾಲೆಗಳನ್ನು ಉಳಿಸಬೇಕಾದರೆ ಏನು ಮಾಡಬೇಕು, ಈಗಿನ ಎಜುಕೇಶನ್ ಸಿಸ್ಟಂ ಮಕ್ಕಳನ್ನ ವಿದ್ಯಾವಂತರನ್ನಾಗಿಸುವ ಬದಲು ಅಕ್ಷರಸ್ತರನ್ನಾಗಿಸುತ್ತಿದೆ. ಈ ಎಲ್ಲಾ ವಿಷಯಗಳನ್ನು ತುಂಬಾ ಕುತೂಹಲಕಾರಿಯಾಗಿ ಪ್ರೆಸೆಂಟ್ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕರು.
ಕಮರ್ಷಿಯಲ್ ಸಿನೆಮಾಗಳ ನಡುವೆ ಉತ್ತಮ ಉದ್ದೇಶವನ್ನಿಟ್ಟುಕೊಂಡು ಮಾಡಿರುವಂತಹ ಈ ಚಿತ್ರವು ಯಶಸ್ಸನ್ನ ಕಾಣಲಿ, ನಮ್ಮೂರಿನ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸೋಣ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.