ಎಸ್.ಡಿ.ಎಂ ಕಣ್ಣಿನ ಆಸ್ಪತ್ರೆಯಲ್ಲಿ ಆಧುನಿಕ ಉಪಕರಣಗಳ ಲೋಕಾರ್ಪಣೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಂಗಳೂರು: ಎಸ್.ಡಿ.ಎಂ ಕಣ್ಣಿನ ಆಸ್ಪತ್ರೆಯಲ್ಲಿ 25 ವರ್ಷಗಳ ಸಾರ್ಥಕ ಸೇವೆಯ ಸಂದರ್ಭದಲ್ಲಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಭಿಲಾಷೆಯಂತೆ ಎಲ್ಲಾ ವರ್ಗದ ಕಣ್ಣಿನ ರೋಗಿಗಳಿಗೆ ಗುಣಮಟ್ಟದ ಮತ್ತು ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ಮಾಡುವ ಉದ್ದೇಶದಿಂದ ಸುಮಾರು 1.25 ಕೋಟಿ ರೂಪಾಯಿ  ವೆಚ್ಚದಲ್ಲಿ 3 ಅತ್ಯಾಧುನಿಕ ಯಂತ್ರಗಳನ್ನು ಲೋಕಾರ್ಪಣೆ ಮಾಡಲಾತು.
ಕಣ್ಣಿನ ಅಕ್ಷಿಪಟಲದ (ರೆಟಿನ) ಸ್ಕ್ಯಾನ್ ಮಾಡುವ ಅತ್ಯಾಧುನಿಕ ಓ.ಸಿ.ಟಿ (OCT) ಯಂತ್ರ. ಕಣ್ಣಿನ ಅಕ್ಷಿಪಟಲ, ವಿಟ್ಟ್ರಿಯಸ್, ಲೆನ್ಸ್ ವಿವರ, ಕಣ್ಣು ಗುಡ್ಡೆ ಇವುಗಳನ್ನು ಅಲ್ಟ್ರಾಸೌಂಡ್ ಮುಖಾಂತರ ತಪಾಸಣೆ ಮಾಡುವ ಬಿ-ಸ್ಕ್ಯಾನ್ (B-Scan) (ಇಕೋ ವ್ಯೂ ಬಯೋಮೆಡಿಕ್ಸ್ ) ಯಂತ್ರ ಮತ್ತು ರೆಟಿನ ಹಾಗೂ ವಿಟ್ರಿಯಸ್ ಸರ್ಜರಿ ಮಾಡಲು ಉಪಯೋಗಿಸುವ ಅತ್ಯಾಧುನಿಕ ವಿಟ್ರೆಕ್ಟಮಿ ಯಂತ್ರಗಳನ್ನು ಎ. 20 ರಂದು ಡಿ. ರಾಜೇಂದ್ರ ಕುಮಾರ್, ಮ್ಯಾನೇಜಿಂಗ್ ಡೈರೆಕ್ಟರ್, ಅಟೋಮ್ಯಾಟ್ರಿಕ್ಸ್, ಮಂಗಳೂರು ಇವರು ಲೋಕಾರ್ಪಣೆ ಮಾಡಿ ಕಣ್ಣಿನ ಸಮಸ್ಯೆ ಇರುವವರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಎಸ್.ಡಿ.ಎಂ ಮೆಡಿಕಲ್ ಟ್ರಸ್ಟಿ ಡಾ|ಟಿ.ಎನ್.ಶೆಟ್ಟಿ ಹಾಗೂ ಮೂಡಾದ ಅಧ್ಯಕ್ಷ ಸುರೇಶ್ ಬಲ್ಲಾಳ್ ಶುಭ ಹಾರೈಸಿದರು. ಡಾ| ರಶ್ಮಿ ಶೆಟ್ಟಿ ಹಾಗೂ ಡಾ| ನಮಿತ್ ಡಿಸೋಜಾ ರವರು ಲೋಕಾರ್ಪಣೆಗೊಂಡ ಅತ್ಯಾಧುನಿಕ ಯಂತ್ರಗಳ ಉಪಯೋಗ ಮತ್ತು ಅವುಗಳಲ್ಲಿರುವ ತಂತ್ರಜ್ಞಾನದ ಮಾಹಿತಿ ನೀಡಿದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಎನ್. ಮನ್ಮಥ್ ಕುಮಾರ್, ಟ್ರಸ್ಟಿನ ಕಾರ್ಯದರ್ಶಿ ಶಿಶುಪಾಲ್ ಪೂವಣಿ, ಎಸ್.ಡಿ.ಎಂ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯ ಡಾ|ಶಶಿಕಲಾ ರಾವ್, ಡಾ| ಅಶುತೋಶ್ ಬೋಳೂರು, ವ್ಯವಸ್ಥಾಪಕರಾದ ಶಿವಾನಂದ್, ಮೆಡಿಕಲ್ ಟ್ರಸ್ಟಿನ ಅಕೌಂಟೆಂಟ್ ಬಿ.ಪಿ ವಜ್ರನಾಭಯ್ಯ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.