ದೊಂಡೋಲೆ: ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ದೊಂಡೊಲೆ ಇದರ ಸಾರ್ವಜನಿಕ ಸಭೆಯು ದಿನಾಂಕ ಎ.18 ರಂದು ದೊಂಡೊಲೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಪುರಂದರ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದು, ದೇವಸ್ಥಾನದಲ್ಲಿ ಶೀಘ್ರವಾಗಿ ಅಷ್ಟಮಂಗಲದ ಜೊತೆ ಕೆಲಸ ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು. ಮಾರ್ಗದರ್ಶಕ ರವಿಕುಮಾರ್ ಭಟ್ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಸಂಪೂರ್ಣ ಸಲಹೆ ಮಾಹಿತಿಯನ್ನು ನೀಡಿದರು. ಗೌರವಾಧ್ಯಕ್ಷ ಸತ್ಯಪ್ರಿಯ ಕಲ್ಲುರಾಯರು ದೇವಸ್ಥಾನದ ಬಗ್ಗೆ ಮಹಿಳೆಯರಿಗೆ ಇರುವ ಕಾಳಜಿಯನ್ನು ಪ್ರಶಂಶಿಸಿದರು. ಗೌರವ ಸಲಹೆಗಾರ ಶ್ರೀನಿವಾಸ್ ರಾವ್ ಯುವಜನತೆ ಆದಷ್ಟು ತಮ್ಮನ್ನು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಊರ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ್ ನಿರ್ವಹಿಸಿದರು.