ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ನಿಷ್ಠೆಯನ್ನು ತೋರಿಸಿ ಸರಕಾರದ ಸಾಧನೆ ಮನೆ, ಮನೆಗೆ ತಲುಪಿಸಿ : ಸವಿತಾ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐದು ವರ್ಷಗಳ ಅವಧಿಯಲ್ಲಿ ಎಲ್ಲಾ ರಂಗಗಳಲ್ಲೂ ಉತ್ತಮವಾದ ಸಾಧನೆ ಮಾಡಿದ್ದಾರೆ. ಇದರಿಂದಾಗಿ ಜನರ ಮುಂದೆ ಹೋಗಲು ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆಗಳಿಲ್ಲ. ಕಾರ್ಯಕರ್ತರು ಪಕ್ಷ ನಿಷ್ಠೆಯನ್ನು ತೋರಿಸಿ, ನಿಯತ್ತಿನಿಂದ ಸರಕಾರದ ಕಾರ್ಯಕ್ರಮವನ್ನು ಮನೆ, ಮನೆಗೆ ತಲುಪಿಸಿ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್ ಕರೆ ನೀಡಿದರು.
ಅವರು ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ಇದರ ಚುನಾವಣಾ ಪ್ರಚಾರದ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಎ.೧೨ರಂದು ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರಕಾರದ ಒಂದಲ್ಲ ಒಂದು ಸಹಾಯ ಬೆಳ್ತಂಗಡಿ ತಾಲೂಕಿನ ಮನೆಗಳಿಗೆ ತಲುಪಿದೆ. ಸರಕಾರ ಚುನಾವಣೆ ವೇಳೆ ಘೋಷಿಸಿದ ೧೬೫ ಭರವಸೆಗಳನ್ನು ಈಡೇರಿಸಿದೆ. ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಯೋಜನೆ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಶಿಕ್ಷಣಕ್ಕೆ ವಿವಿಧ ಸೌಲಭ್ಯ ಗಳು, ಉಚಿತ ಬಸ್‌ಪಾಸ್ ವ್ಯವಸ್ಥೆ ಮಾಡಿದೆ. ಈ ರೀತಿಯಾಗಿ ಕಾಂಗ್ರೆಸ್ ಮಾಡಿದ ಸಾಧನೆಗಳನ್ನು ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕು. ಈ ಯಾವುದೇ ರೀತಿಯಲ್ಲಿ ಅಸಡ್ಡೆ ಮಾಡದೇ ಗಂಭೀರವಾಗಿ ಪರಿಗಣಿಸ ಬೇಕು ಮುಂದಿನ ಬಾರಿಯೂ ನಮ್ಮದೇ ಸರಕಾರ ಬರುತ್ತದೆ ಶಾಸಕ ಬಂಗೇರರು ಸಚಿವರಾಗುತ್ತಾರೆ ಎಂದು ತಿಳಿಸಿದರು.
ಡಿಸಿಸಿ ಜಿಲ್ಲಾ ಕಾರ್ಯದರ್ಶಿ ಇದಿನಬ್ಬ ಮಾತನಾಡಿ ಬಿಜೆಪಿಯಲ್ಲಿ ಬಹುತೇಕ ನಾಯಕರು ಜೈಲಿಗೆ ಹೋದವರು, ನೀಲಿ ಚಿತ್ರ ವೀಕ್ಷಿಸಿದವರು ಇಂತವರಿಗೆ ಅಧಿಕಾರ ದೊರೆಯದಂತೆ ಮತದಾರರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. ಜಿ.ಪಂ ಸದಸ್ಯ ಶಾಹುಲ್ ಹಮೀದ್  ಮಾತನಾಡಿ ಬೆಳ್ತಂಗಡಿ ಕ್ಷೇತ್ರದಲ್ಲಿ ಶಾಸಕ ವಸಂತ ಬಂಗೇರ ಅವರು ಮಾಡಿದ ಸಾಧನೆಗಳನ್ನು ಕಾರ್ಯಕರ್ತರಿಗೆ ವಿವರಿಸಿ, ಬಂಗೇರರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಕೆಪಿಸಿಸಿ ಸದಸ್ಯರಾದ ಪೀತಾಂಬರ ಹೇರಾಜೆ, ನ್ಯಾಯವಾದಿ ರಾಮಚಂದ್ರ ಗೌಡ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಭಾಸ್ಟಿನ್, ಜಿ.ಪಂ ಸದಸ್ಯರಾದ ಧರಣೇಂದ್ರ ಕುಮಾರ್, ನಮಿತಾ, ಶೇಖರ ಕುಕ್ಕೇಡಿ, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್ ಕಾಮತ್, ಇಂಟಕ್ ಅಧ್ಯಕ್ಷ ಸುಭಾಶ್ಚಂದ್ರ ರೈ, ಕಿಸಾನ್ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ರೆಖ್ಯ, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಶರತ್, ಎ.ಪಿ.ಎಂ.ಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಚುನಾವಣಾ ಉಸ್ತುವಾರಿಗಳಾದ ವಿಜಯಕುಮಾರ್ ರೈ, ಸೈಮನ್, ನಗರ ಪ್ರಚಾರ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಡಿಸಿಸಿ ಕಾರ್ಯದರ್ಶಿ ಹಾಗೂ ಬಂಟ್ವಾಳ ಕ್ಷೇತ್ರ ಉಸ್ತುವಾರಿ ಜಗದೀಶ್ ಡಿ, ಜಿಲ್ಲಾ ಕಾಂಗ್ರೆಸ್‌ನ ಬಿ.ಎ ಅಬ್ದುಲ್ ಹಮೀದ್, ಮಹಿಳಾ ಘಟಕದ ಹಾಜಿರಾ, ಜಿಲ್ಲಾ ಸಮಿತಿಯ ಯು.ಎ ಹಮೀದ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಅಲ್ಪಸಂಖ್ಯಾತ ಘಟಕದ ಅಶ್ರಫ್ ನೆರಿಯ, ತಾ.ಪಂ ಸದಸ್ಯರಾದ ಜಯಶೀಲ, ಸುಶೀಲ, ಜಯರಾಮ, ಕೇಶವತಿ ಮೊದಲಾದವರು ಉಪಸ್ಥಿತರಿ ದ್ದರು. ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ ಸ್ವಾಗತಿಸಿದರು. ಜಿ.ಪಂ ಸದಸ್ಯ ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿ, ಕೆಪಿಸಿಸಿ ಸದಸ್ಯ ನ್ಯಾಯವಾದಿ ರಾಮಚಂದ್ರ ಗೌಡ ವಂದಿಸಿದರು.

ಕಾಯಿ ಒಡೆದ ಸ್ಥಳದಲ್ಲಿ ಅಭಿವೃದ್ಧಿ ಕಾರ್ಯ: ಬಂಗೇರ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಶಾಸಕರಾದ ಕೆ. ವಸಂತ ಬಂಗೇರ ಮಾತನಾಡಿ, ವಿರೋಧ ಪಕ್ಷದವರು ನಾನು ತೆಂಗಿನ ಕಾಯಿ ಒಡೆಯುವ ಶಾಸಕ ಎಂದು ಟೀಕೆ ಮಾಡುತ್ತಿದ್ದಾರೆ. ನಾನು ಕಾಯಿ ಒಡೆದ ಜಾಗದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಆಗಿದೆ. ೧೯೮೩ರಿಂದ ಕಾಯಿಯನ್ನು ಒಡೆಯುತ್ತಾ ಬಂದಿದ್ದೇನೆ. ಈ ಐದು ವರ್ಷದ ಅವಧಿಯಲ್ಲಿ ೧ಸಾವಿರ ಕೋಟಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಒಂದೇ ವರ್ಷ ೨೯ ಸೇತುವೆಗಳನ್ನು ಮಂಜೂರು ಮಾಡಿಸಿ ತಂದಿದ್ದೇನೆ. ನೆರಿಯದ ಕೋಲೋಡಿಗೆ ರೂ.೧೧.೫೦ ಕೋಟಿಯ ರಸ್ತೆ ಮತ್ತು ಸೇತುವೆ ಮಂಜೂರಾಗಿದೆ. ಧರ್ಮಸ್ಥಳ, ಕೊಕ್ಕಡ ಆಸ್ಪತ್ರೆಗಳು ಮೇಲ್ದರ್ಜೆಗೇರಿ ಆಸ್ಪತ್ರೆಯ ಕಟ್ಟಡದ ಕೆಲಸ ನಡೆಯುತ್ತಿದೆ. ಈಗಾಗಲೇ ರೂ.೬೫ ಕೋಟಿಯ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದು, ಎಲ್ಲೆಡೆ ಕೆಲಸಗಳು ನಡೆಯುತ್ತಿದೆ ಎಂದು ತಿಳಿಸಿದರು.

ಪಕ್ಷವಿರೋಧಿ ಚಟುವಟಿಕೆಗೆ ಅವಕಾಶವಿಲ್ಲ

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷ ನಿಷ್ಠೆಯನ್ನು ತೋರಿಸಿ, ನಿಯತ್ತಿನಿಂದ ಕೆಲಸ ಮಾಡಬೇಕು. ಇಂತವರಿಗೆ ಮುಂದೆ ಪಕ್ಷ ಅವಕಾಶ ಕೊಡುತ್ತದೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ಬಗ್ಗೆ ದೂರು ಬಂದಲ್ಲಿ ಕೆಪಿಸಿಸಿಗೆ ವರದಿ ಕೊಡುತ್ತೇನೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.