ಅರಸಿನಮಕ್ಕಿ: ರಾಷ್ಟ್ರ ಮಟ್ಟದ ಅಖಿಲ ಭಾರತೀಯ ಸ್ನಾತ್ತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಭಂಡಿಹೊಳೆಯ ಡಾ| ಹರ್ಷಿತಾ ಶೆಂಡೆ ಇವರು 518 ನೇ ಸ್ಥಾನವನ್ನು ಪಡೆದಿದ್ದಾರೆ. ಪ್ರಸ್ತುತ ಇವರು ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಉನ್ನತ ವ್ಯಾಸಾಂಗಕ್ಕೆ ಮುಂಬೈ ಕೆ.ಇ.ಎಮ್ ಹಾಸ್ಪಿಟಲ್(ಜಿ.ಎಸ್.ಮೆಡಿಕಲ್ ಕಾಲೇಜಿನಲ್ಲಿ) ಪ್ರವೇಶ ಪಡೆದಿದ್ದಾರೆ. ಇವರು ಭಂಡಿಹೊಳೆ ರಾಜಶೇಖರ್ ಶೇಂಡೆ ಮತ್ತು ಸೌಮ್ಯ ದಂಪತಿಯ ಪುತ್ರಿ.