ಬೆಳ್ತಂಗಡಿ ವಿಧಾನಸಭಾ ಚುನಾವಣೆ: ಎಸ್.ಡಿ.ಪಿ.ಐ ಸ್ಪರ್ಧೆ

 ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರ ಒಕ್ಕೊರಲ ಅಭಿಮತ.

ಬೆಳ್ತಂಗಡಿ: ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಪ್ರಚಾರಾಂದೋಲನ ಭರದಿಂದ ಸಾಗಿದೆ.
ಈ ಹಿಂದೆ ರಾಜ್ಯದ 50 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಎಸ್.ಡಿ.ಪಿ.ಐ ರಾಜ್ಯ ಸಮಿತಿಯು ಈಗಾಗಲೇ ಹಲವು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರ ಭಾಗವಾಗಿ ಎ.6 ರಂದು ಬೆಳ್ತಂಗಡಿಯಲ್ಲಿ ಚುನಾವಣಾ ಪೂರ್ವಭಾವಿ ಸಭೆಯು ಬೆಳ್ತಂಗಡಿಯ ಗುರುನಾರಾಯಣ ಸಂಕೀರ್ಣ ಸಭಾಭವನದಲ್ಲಿ ನಡೆದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ನಿಲ್ಲಿಸುವುದೆಂದು ಕಾರ್ಯಕರ್ತರ ಒಕ್ಕೊರಲ ಅಭಿಪ್ರಾಯದಂತೆ ತೀರ್ಮಾನಿಸಲಾಯಿತು ಹಾಗೂ ಈ ತೀರ್ಮಾನದಂತೆ ಮೂವರು ಅಭ್ಯರ್ಥಿಗಳ ಹೆಸರನ್ನು ರಾಜ್ಯ ಸಮಿತಿಗೆ ಕಳುಹಿಸಲಾಯಿತು ಹಾಗೂ ಕಾರ್ಯ ಕರ್ತರನ್ನು ಬೂತ್ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಲು ಸೂಚಿಸಲಾಯಿತು. ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ಕಾರ್ಯಕರ್ತರು ಮತ್ತು ಪಕ್ಷದ ಬೆಂಬಲಿಗರು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಎ.ಕೆ ಅಶ್ರಫ್, ಬೆಳ್ತಂಗಡಿಯಲ್ಲಿ ಶಾಸಕ ವಸಂತ ಬಂಗೇರರು ಅಲ್ಪಸಂಖ್ಯಾತ ಸಮುದಾಯಕ್ಕೆ ಎಲ್ಲಾ ರೀತಿಯಲ್ಲೂ ಅನ್ಯಾಯವನ್ನೇ ಮಾಡುತ್ತಿದ್ದು, ಇದನ್ನು ನಿಲ್ಲಿಸಲು ಇಲ್ಲಿ ಎಸ್.ಡಿ.ಪಿ.ಐಯ ಸ್ಪರ್ಧೆ ಅನಿವಾರ್ಯ ವೆಂದರು. ಬಳಿಕ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ಬೆಳ್ತಂಗಡಿಯಲ್ಲಿ ಶಾಸಕರ ಆಡಳಿತದಲ್ಲಿನ ವೈಫಲ್ಯತೆ ಮತ್ತು ಅಧಿಕಾರದಲ್ಲಿನ ತಾರತಮ್ಯ ನೀತಿಯನ್ನು ವಿವರಿಸಿ ತಾಲೂಕಿನ ಪ್ರಜ್ಞಾವಂತ ಮತದಾರರು ಜನತೆಯ ಪರವಾಗಿ ಕೆಲಸ ಮಾಡುವ ಎಸ್.ಡಿ.ಪಿ.ಐ’ಯನ್ನು ಈ ಬಾರಿ ಬೆಳ್ತಂಗಡಿಯಲ್ಲಿ ಬೆಂಬಲಿಸಲಿದ್ದಾ ರೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ನವಾಝ್ ಶರೀಫ್ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್.ಡಿ.ಟಿ.ಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಎಸ್.ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷ ಆಂಟೊನಿ ಪಿ.ಡಿ, ಎಸ್.ಡಿ.ಪಿ.ಐ ವಿಧಾನ ಸಭಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಕಣಿಯೂರು ಗ್ರಾ.ಪಂ ಸದಸ್ಯ ಶುಕುರ್ ಕುಪ್ಪೆಟ್ಟಿ, ಕುವೆಟ್ಟು ಗ್ರಾ.ಪಂ ಸದಸ್ಯ ರಿಯಾಝ್ ಮದ್ದಡ್ಕ, ಎಸ್.ಡಿ.ಪಿ.ಐ ಅಳದಂಗಡಿ ವಲಯಾಧ್ಯಕ್ಷ ಹಸನ್ ಕಟ್ಟೆ ಹಾಗೂ ಮತ್ತಿತರ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಉಪಾಧ್ಯಕ್ಷ ಫಝಲ್ ರಹಮಾನ್ ಕೋಯ ಸ್ವಾಗತಿಸಿ, ಅಶ್ಫಕ್ ಪುಂಜಾಲಕಟ್ಟೆ ಧನ್ಯವಾದವಿತ್ತರು. ನಿಝಾಮ್ ಗೇರುಕಟ್ಟೆ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.