ಇನ್ನು 45 ದಿನಗಳಲ್ಲಿ ಬೆಳ್ತಂಗಡಿ ಶಾಸಕರ ದರ್ಬಾರ್ ಅಂತ್ಯ: ಮೋನಪ್ಪ ಭಂಡಾರಿ

ಬೆಳ್ತಂಗಡಿ: ಮೂಡಬಿದ್ರೆ ಮತ್ತು ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಶಾಸಕರು ಮಾತನಾಡಲು ಹೋಗುವ ಜನರಿಗೆ ಹೊಡೆಯಲು ಬರುತ್ತಾರೆ. ಬೇರೆ ರಾಜ್ಯಗಳಲ್ಲಿ ನಾವು ಕೇಳುತ್ತಿದ್ದ ಗಾಂಜಾ, ಡ್ರಗ್ಸ್ ಮಾಫಿಯಾ ನಮ್ಮ ಜಿಲ್ಲೆಯಲ್ಲೇ ನಡೆಯುತ್ತಿದೆ. ಕೃತಕ ಮರಳು ಅಭಾವ ಸೃಷ್ಟಿಸಿ ಕಾಂಗ್ರೆಸ್ ಕಾರ್ಯಕರ್ತರು ದುಡ್ಡುಮಾಡುತ್ತಿದ್ದಾರೆ. ಇಂತಹಾ ಕೆಟ್ಟ, ಭಂಡ ಸರಕಾರ ಇದುವರೆಗೆ ರಾಜ್ಯದಲ್ಲಿ ಆಡಳಿತಕ್ಕೆ ಬಂದಿಲ್ಲ, ಸಿಎಂ ಸಹಿತ ಎಲ್ಲ ಮಂತ್ರಿಗಳು ಶಾಸಕರು ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ. ಬೆಳ್ತಂಗಡಿ ಶಾಸಕರ ದುರ್ಬಾರು ಇನ್ನು ಕೇಲವ 45 ದಿನಗಳಲ್ಲಿ ಅಂತ್ಯಗೊಳ್ಳಲಿದೆ ಎಂದು ವಿಧಾ ಪರಿಷತ್ ಮಾಜಿ ಶಾಸಕ ಕೆ ಮೋನಪ್ಪ ಭಂಡಾರಿ ಹೇಳಿದರು.
ಬೆಳ್ತಂಗಡಿ ನಗರದ ವಾರ್ತಾಭವನದಲ್ಲಿ ಮಾ. 29 ರಂದು ಬೆಳ್ತಂಗಡಿ ಬಿಜೆಪಿ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬೆಳ್ತಂಗಡಿಯಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ:

ವಸಂತ ಬಂಗೇರ ಅವರು ಬೆಳ್ತಂಗಡಿ ಶಾಸಕರಾಗಿ 10 ವರ್ಷ ಆಗುತ್ತಿದೆ. ಯಾವುದೇ ಸರಕಾರಿ ಕಚೇರಿಯಲ್ಲಿ ಲಂಚ ನೀಡದೆ ಕೆಲಸಗಳು ಆಗುತ್ತಿಲ್ಲ, ಅಕ್ರಮ- ಸಕ್ರಮ ದಲ್ಲಿ ಅಕ್ರಮ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ವೆ ಇಲಾಖೆಯಲ್ಲಿ ಲಕ್ಷಾಂತರ ರೂ. ಅಕ್ರಮ ನಡೆಯುತ್ತಿದೆ. ಇತ್ತೀಚಿನವರೆಗೆ ಕಣ್ಣುಮುಚ್ಚಿ ನಿದ್ದೆಯಲ್ಲಿದ್ದ ಶಾಸಕರು ಚುನಾವಣೆ ಬಂತೆಂದು ನಿದ್ದೆಯಿಂದ ಎಚ್ಚೆತ್ತು ಇಲಾಖಾ ಕಚೇರಿಗಳಿಗೆ ದಿಢೀರ್ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಕಾಮಗಾರಿ ಮಂಜೂರಾಗುವ ಮುನ್ನವೇ ತೆಂಗಿನ ಕಾಯಿ ಒಡೆದು ಜನರನ್ನು ಮರಳುಗೊಳಿಸುತ್ತಿದ್ದಾರೆ. ಜಿಲ್ಲೆಯಲ್ಲೂ ಕೂಡ ಕೇಂದ್ರದಿಂದ ಬಂದ ಅನುದಾನಕ್ಕೂ ಕಾಂಗ್ರೆಸ್ ಶಾಸಕರು ಬ್ಯಾನರ್ ಹಾಕುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಅಭಿವೃದ್ದಿ ಆಗಿದೆ ಎನ್ನುವ ಶಾಸಕರಿಗೆ ಅಲ್ಲಲ್ಲಿ ಚುನಾವಣಾ ಭಹಿಷ್ಕಾರ ಬಿಸಿ ತಟ್ಟುತ್ತಿದೆ ಎಂದರು. ಜನತೆಗೆ ಮೂಲ ಸೌಕರ್ಯ ಆಗಿದೆ ಎಂದಾದರೆ ಯಾಕೆ ಜನ ಚುನಾವಣಾ ಭಹಿಷ್ಕಾರ ಮಾಡಬೇಕು ಎಂಬುದು ಬಿಜೆಪಿ ಪಶ್ನೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಈ ಸರಕಾರ ಒಡೆದು ಆಳುವ ನೀತಿ ಹೊಂದಿದೆ. ಭ್ರಷ್ಠ ಮತ್ತು ದುರಹಂಕಾರದಿಂದ ಆಳಿದೆ. ಭ್ರಷ್ಟರಿಗೆ ಮಣೆ ಹಾಕುತ್ತಾ ಒಳ್ಳೆಯ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತೆ ಮಾಡಿದೆ. ಅಲ್ಲಲ್ಲ ನಂಬರ್ 1 ಸರಕಾರ ಎಂದು ಬ್ಯಾನರ್, ಕಟೌಟರ್‌ಗಳನ್ನು ಹಾಕುತ್ತಿದೆ. ಆದರೆ ಅದರ ಹಿಂದೆ ನೋಡುವಾಗ ಈ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ. ರೈತರ ಆತ್ಮಹತ್ಯೆಯಲ್ಲಿ ನಂಬರ್ 1 ಆಗಿದೆ, ಹಲ್ಲೆ, ಕೊಲೆ ಕೃತ್ಯಗಳಲ್ಲಿ ನಂಬರ್ 1 ಆಗಿದೆ ಎಂದು ಟೀಕಿಸಿದರು.
ಆದುದರಿಂದ ರಾಜ್ಯದಲ್ಲಿ ಎಲ್ಲಾ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುತ್ತಿದ್ದು, “ಬೂತ್ ಜೀತೋ ಚುಣಾವಣ್ ಜೀತೋ’ ಎಂಬ ಸ್ಲೋಗನ್‌ನಡಿ ಬೂತ್ ಸಶಕ್ತೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಬಹುಸಂಖ್ಯಾತರ ಕಡೆಗಣನೆ, ಹತ್ಯೆ, ಹತ್ಯಗೈದವರ ಪತ್ತೆ ಬಗ್ಗೆ ಸರಕಾರದ ತಿರಸ್ಕಾರ ಮನೋಭಾವನೆ ಈ ಬಾರಿ ಕಾಂಗ್ರೆಸ್ಸನ್ನು ಸೋಲಿಸಲಿದೆ. ಒಳ್ಳೆಯ ಸರಕಾರ ಕೊಟ್ಟಿದೆ ಎಂಬ ಹೊರ ರಾಜ್ಯಗಳಲ್ಲಿ ಈಗಲೂ ಖ್ಯಾತಿ ಹೊಂದಿರುವ ಬಿಜೆಪಿ ಒಳ್ಳೆಯ ಸರಕಾರ ನಡೆಸಲು ಜನರಿಂದ ಆರಿಸಿಬರಲಿದೆ. ಆ ಮೂಲಕ ಜನ ಕಾಂಗ್ರೆಸ್ ಆಶಯ ಮುಕ್ತ ಮಾಡಲಿದ್ದಾರೆ ಎಂದರು.
ವಾರದಲ್ಲಿ ಅಭ್ಯರ್ಥಿ ಘೋಷಣೆ
ಬೆಳ್ತಂಗಡಿ ಕ್ಷೇತ್ರ ಸೇರಿದಂತೆ ವಾರದೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು ಎಲ್ಲರೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.